ಪೃಥ್ವಿಯಲ್ಲಿ ರಜ-ತಮದ ಪ್ರಮಾಣವು ಅತ್ಯಧಿಕವಾದರೆ, ಆಪತ್ಕಾಲವು ಬರುತ್ತದೆ. ಇದು ನೈಸರ್ಗಿಕ ಆಪತ್ತುಗಳು, ಯುದ್ಧ ಇವುಗಳಂತಹ ವಿವಿಧ ಮಾಧ್ಯಮಗಳಿಂದ ಕಂಡುಬರುತ್ತದೆ. ಈ ಆಪತ್ಕಾಲಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯು ಆಗುತ್ತಿರುತ್ತದೆ. ಸದ್ಯ ಮುಂದೆ ಬರಲಿರುವ ಭೀಕರ ಆಪತ್ಕಾಲದ ತೀವ್ರತೆಯು ಎಷ್ಟು ಪ್ರಮಾಣದಲ್ಲಿರುತ್ತದೆಯೆಂದರೆ, ‘ಈ ಆಪತ್ಕಾಲದಲ್ಲಿ ನಾವೂ ಕಣ್ಣುಗಳನ್ನು ಮುಚ್ಚಿಕೊಂಡು ಇರಬೇಕಾಗುವುದು’, ಎಂದು ಕೆಲವು ಸಂತರೂ ಹೇಳಿದ್ದಾರೆ. ಸಾಮಾನ್ಯ ಜನರಿಗೆ ಈ ಭೀಕರ ಆಪತ್ಕಾಲವನ್ನು ಎದುರಿಸಲು ಅಸಾಧ್ಯವಿದೆ. ಆದುದರಿಂದ ಇಂದಿನವರೆಗೆ ಅನೇಕ ಬಾರಿ ಮಹಾನ ಸಂತ-ಮಹಾತ್ಮರು ಸಾಮಾನ್ಯ ಜೀವಗಳ ಬಗ್ಗೆ ವಿಚಾರವನ್ನು ಮಾಡಿ ತಮ್ಮ ಸ್ವಂತದ ಸಾಧನೆಯನ್ನು ಖರ್ಚು ಮಾಡಿ ಈ ಆಪತ್ಕಾಲವನ್ನು ಮುಂದೂಡಿದ್ದಾರೆ. ಸಾಮಾನ್ಯ ಜೀವಗಳು ಸಾಧನೆಯನ್ನು ಹೆಚ್ಚಿಸಿದರೆ ಮಾತ್ರ, ಅವರಿಗೆ ಈ ಆಪತ್ಕಾಲವು ಸಹನೀಯವಾಗಬಲ್ಲದು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.