(ಪೆರೋಲ್ ಎಂದರೆ ಕೈದಿಯನ್ನು ಕೆಲವು ದಿನಗಳವರೆಗೆ ಉತ್ತಮ ನಡವಳಿಕೆಯ ಷರತ್ತಿನ ಮೇಲೆ ಹೊರಗೆ ಬಿಡುವುದು.)
ಜೋಧಪುರ (ರಾಜಸ್ಥಾನ) – ಆಪಾದಿತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತಶ್ರೀ ಪೂ. ಅಸಾರಾಂಜಿ ಬಾಪು ಅವರಿಗೆ ರಾಜಸ್ಥಾನ ಹೈಕೋರ್ಟ್ 17 ದಿನಗಳ ಪೆರೋಲ್ ಮಂಜೂರು ಮಾಡಿದೆ. 30 ದಿನಗಳ ಹಿಂದೆ ಪೆರೋಲ್ ಮಂಜೂರಾದ ಕಾರಣ ಅವರು ನವೆಂಬರ್ 10 ರಿಂದ ಜೋಧ್‌ಪುರದ ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುಣೆಯ ಮಾಧವಬಾಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪೂ. ಬಾಪು ಅವರು ಪೆರೋಲ್‌ಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಒಪ್ಪಿಕೊಂಡು ಡಿಸೆಂಬರ್ 15 ರಿಂದ ಮುಂದಿನ 17 ದಿನಗಳ ಕಾಲ ಅವರಿಗೆ ಪೆರೋಲ್ ನೀಡಲಾಯಿತು.