ಖಂಡತುಂಡ ಮತ್ತು ನೇರ ಭಾಷ್ಯ ಮಾಡುವ ವ್ಯಕ್ತಿತ್ವವೆಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಾರೆ. ಭಾರತದಲ್ಲಿರುವಾಗ, ಹಾಗೆಯೇ ವಿದೇಶಕ್ಕೆ ಹೋದಾಗಲೂ ಭಾರತದತ್ತ ವಕ್ರದೃಷ್ಟಿ ಬೀರುವ ದೇಶಗಳಿಗೆ ತಮ್ಮ ಜಾಗ ತೋರಿಸುವಲ್ಲಿ ಅವರನ್ನು ಯಾರೂ ತಡೆಯಲಾರರು. ಇತರ ಸಚಿವರು ಇಲ್ಲಿಯವರೆಗೆ ನಿರ್ವಹಿಸಲಾರದ್ದನ್ನು ಸಲೀಸಾಗಿ ಜೈಶಂಕರ ಇವರು ಅಷ್ಟೇ ಜವಾಬ್ದಾರಿಯಿಂದ ಸಾಧಿಸಿದ್ದಾರೆ. ಖಂಡತುಂಡ ಮಾತುಗಾರಿಕೆಯಿಂದ ಅವರು ಜಗತ್ತಿನಾದ್ಯಂತ ತಮ್ಮ ವತಿಯಿಂದ ಭಾರತದ ಪ್ರಾಬಲ್ಯವನ್ನು ಪರ್ಯಾಯವಾಗಿ ಸೃಷ್ಟಿಸಿದ್ದಾರೆ. ಆದುದರಿಂದಲೇ ‘ಅತಿಥಿ ದೇಶ’ವೆಂದು ‘ಜಿ ೭’ರ ಸಭೆಯಲ್ಲಿ ಭಾರತಕ್ಕೆ ಆಮಂತ್ರಿಸಿದ್ದರೂ ಯಾವುದೇ ಹಿಂಜರಿಕೆಯಿಲ್ಲದೇ ಅವರು ಯುರೋಪ್‌ಗೆ ಸ್ಪಷ್ಟವಾಗಿ ಅದರ ಜವಾಬ್ದಾರಿಯ ಅರಿವು ಮಾಡಿಕೊಟ್ಟರು. ನಾವು ಅತಿಥಿಗಳೆಂದು ಬಂದಿದ್ದೇವೆ, ಆದುದರಿಂದ ಎಲ್ಲವನ್ನೂ ಮೌನವಾಗಿ ಕೇಳುತ್ತೇವೆ ಅಥವಾ ಸಹಿಸುವೆವು’, ಎಂಬ ವಿಚಾರ ಮಾಡದೇ ಅವರು ತಮ್ಮ ವಿದೇಶಾಂಗ ಸಚಿವ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸಿದರು. ಅವರು ಮಾತನಾಡುತ್ತಾ, ”ಯುರೋಪಿಯನ್ ಒಕ್ಕೂಟವು ಭಾರತದ ಅತಿ ದೊಡ್ಡ ವ್ಯಾಪಾರಿ ಪಾಲುದಾರ, ಹಾಗೆಯೇ ಹೂಡಿಕೆದಾರ ಸಹ ಆಗಿದೆ. ನಾವು ನಿರಂತರವಾಗಿ ದೊಡ್ಡ ಒಪ್ಪಂದಗಳನ್ನು ಮಾಡುತ್ತಿದ್ದೇವೆ. ಎರಡೂ ಲಾಭದಾಯಕ ಒಪ್ಪಂದಗಳು ಆರ್ಥಿಕ ಸಹಕಾರವನ್ನು ಹೆಚ್ಚಿಸಬಹುದು. ಒಂದು ವೇಳೆ ಯುರೋಪ್‌ಗೆ ತನ್ನ ತತ್ತ್ವಗಳ ಬಗ್ಗೆ ಇಷ್ಟೊಂದು ಕಾಳಜಿಯಿದೆ ಎಂದಾದರೆ ಅದು ಸ್ವತಃ ರಷ್ಯಾದೊಂದಿಗಿನ ತನ್ನ ಎಲ್ಲಾ ವ್ಯಾಪಾರಗಳನ್ನು ಕೊನೆಗೊಳಿಸಬೇಕು” ಎಂದು ಹೇಳಿದರು. ಕೇವಲ ‘ಭಾರತ’ ಈ ಒಂದೇ ಅಂಶದ ಬಗ್ಗೆ ಅಭಿಪ್ರಾಯವನ್ನು ಮಂಡಿಸಿದ್ದು ಮಾತ್ರವಲ್ಲ, ಎಲ್ಲ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆಯನ್ನು ಸ್ಥಾಪಿಸಿದ್ದಾರೆ’, ಎನ್ನಬಹುದು. ‘ಯುರೋಪ್‌ನಂತಹ ದೊಡ್ಡ ರಾಷ್ಟ್ರಕ್ಕೆ ಉಪದೇಶ ನೀಡುವಾಗ ಭಾರತದ ಮೌಲ್ಯ ಕಡಿಮೆ ಯಾಗುವುದೇನು ?’, ಎಂಬ ಬಗ್ಗೆ ಅವರು ಎಂದಿಗೂ ವಿಚಾರ ಮಾಡಲೇ ಇಲ್ಲ. ತದ್ವಿರುದ್ಧ ಜೈಶಂಕರ ಇವರ ದೃಢ ನೀತಿಯಿಂದಾಗಿ ಭಾರತದ ಮೌಲ್ಯ ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕೆಚ್ಚೆದೆಯ ವ್ಯಕ್ತಿತ್ವ !
ಮಧ್ಯಂತರದಲ್ಲಿ ಅವರು ಎಸ್.ಸಿ.ಓ.ದ ಸಭೆಗಾಗಿ ಪಾಕಿಸ್ತಾನಕ್ಕೆ ಹೋಗಿದ್ದರು. ವಾಸ್ತವದಲ್ಲಿ ಯಾವುದಾದರೊಂದು ದೇಶಕ್ಕೆ ಹೋಗಿ, ಅದಕ್ಕಿಂತಲೂ ಮಹತ್ವದ್ದೆಂದರೆ ಶತ್ರುರಾಷ್ಟ್ರಕ್ಕೆ ಹೋಗಿ ಅವರಿಗೆ ಅವರ ತಪ್ಪನ್ನು ತೋರಿಸಿಕೊಡುವುದು ಅಷ್ಟು ಸುಲಭ ಅಥವಾ ಸಹಜವಾಗಿರುವುದಿಲ್ಲ; ಆದರೆ ಜೈಶಂಕರ ಇವರು ಆ ದಿಟ್ಟತನವನ್ನೂ ತೋರಿಸಿದರು. ಅವರು ಪಾಕಿಸ್ತಾನಕ್ಕೆ ಹೋಗಿ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ಬಗ್ಗೆ ಚೆನ್ನಾಗಿ ಹೇಳಿದರು. ಇಲ್ಲಿಯವರೆಗೆ ಇಂತಹ ದೊಡ್ಡ ಹೆಜ್ಜೆ ಇಡಲು ಯಾರೂ ಯೋಚಿಸಿರಲಿಲ್ಲ ಮತ್ತು ಯಾರಿಂದಲೂ ಅದನ್ನು ಮಾಡಲಾಗಿರಲಿಲ್ಲ ! ಅಲ್ಲಿನ ಸಮ್ಮೇಳನಕ್ಕೆ ಅಡ್ಡಿಪಡಿಸುವುದಾಗಿ ತಾಲಿಬಾನ್ ಸಂಘಟನೆ ಬೆದರಿಕೆ ನೀಡಿತ್ತು. ಆದುದರಿಂದ ವಾಸ್ತವದಲ್ಲಿ ಅಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಕಷ್ಟಕರವಾಗಿತ್ತು. ಆದರೆ ಪುಕ್ಕಲುತನ ಅವರ ರಕ್ತದಲ್ಲಿಯೇ ಇಲ್ಲವಾದ್ದರಿಂದ ಜೈಶಂಕರ ಇವರು ಧೈರ್ಯದಿಂದ ಅಲ್ಲಿಗೆ ಹೋದರು. ಪಾಕಿಸ್ತಾನಕ್ಕೆ ಕಟುವಾಗಿ ಮಾತನಾಡಿದರು. ಪಾಕಿಸ್ತಾನಕ್ಕೆ ಖಂಡತುಂಡ ಉತ್ತರ ನೀಡಿದರು ಮತ್ತು ಅಷ್ಟೇ ಅಭಿಮಾನದಿಂದ ಭಾರತಕ್ಕೆ ಮರಳಿದರು. ಅಮೇರಿಕದ ವಿದೇಶಾಂಗ ಕಾರ್ಯದರ್ಶಿಗಳು ಭಾರತದಲ್ಲಿನ ಮಾನವ ಹಕ್ಕುಗಳ ಮೇಲೆ ನಾನು ಕಣ್ಣಿಟ್ಟಿದ್ದೇನೆ ಎಂದು ಹೇಳಿದಾಗ, ಜೈಶಂಕರ ಇವರು, ”ಅಮೇರಿಕವು ಭಾರತದ ಮಾನವ ಹಕ್ಕುಗಳ ಮೇಲೆ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆಯೋ ಅದೇ ರೀತಿ ಭಾರತವೂ ಅಮೇರಿಕದ ಮಾನವ ಹಕ್ಕುಗಳ ಅಧಿಕಾರದ ಉಲ್ಲಂಘನೆಯ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ”, ಎಂದು ಹೇಳಿದರು. ಜೈಶಂಕರ ಇವರ ದೃಢ ನಿಲುವಿನಿಂದಲೇ ಅಮೇರಿಕದ ಮಣ್ಣಿಗೆ ಹೋಗಿ ಅವರಿಗೆ ಖಂಡತುಂಡ ಉತ್ತರ ನೀಡುವುದು ಸಾಧ್ಯವಾಯಿತು. ಆಸ್ಟ್ರೇಲಿಯಾ ಮತ್ತು ಅಮೇರಿಕ ಈ ದೇಶಗಳಿಗೂ ಅವರು ಕಾಲಕಾಲಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ೨೦೨೩ ರಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ‘ಹಿಂದೂ ಮಹಾಸಾಗರ ಸಮ್ಮೇಳನ’ದಲ್ಲಿ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಕಟುವಾದ ಮಾತುಗಳನ್ನು ಆಡಿ ‘ಚಾಣಕ್ಯನೀತಿ’ಯನ್ನು ಕಾಪಾಡಿದ್ದಾರೆ. ಸಮಾಲೋಚನೆಯ ಮೇಜಿನ ಮೇಲೆಯೇ ಹೆಚ್ಚಿನ ಯುದ್ಧಗಳನ್ನು ಕೊನೆಗೊಳಿಸುವ ಕೌಶಲ್ಯವನ್ನು ಜೈಶಂಕರ ಹೊಂದಿದ್ದಾರೆ. ಇಂತಹ ವಿದೇಶಾಂಗ ಸಚಿವರು ಭಾರತಕ್ಕೆ ಲಭಿಸಿದ್ದು ದೇಶಕ್ಕೆ ಒಳ್ಳೆಯದಾಗಿದೆ. ಜೈಶಂಕರ ಇವರಿಗಿಂತ ಮೊದಲು ಭಾಜಪದ ಸುಷ್ಮಾ ಸ್ವರಾಜ್ ಇವರೂ ವಿದೇಶಾಂಗ ಸಚಿವರಾಗಿ ಮಹತ್ವದ ಸಾಧನೆ ಮಾಡಿದ್ದರು. ಈ ರೀತಿ ದೇಶಪ್ರೇಮಿ, ರಾಷ್ಟ್ರದ ಹಿತಕ್ಕಾಗಿ ಕ್ರಿಯಾಶೀಲರಾಗಿರುವ ವ್ಯಕ್ತಿಯನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ನೀತಿ ಶ್ಲಾಘನೀಯವಾಗಿದೆ.
ಕಾಂಗ್ರೆಸ್ಸಿನಿಂದಾಗಿ ಭಾರತದ ದಮನ !
ಹಿಂದಿನ ಸರಕಾರಗಳು ಮತ್ತು ಅವರ ಸಚಿವರು ಪ್ರತಿ ಬಾರಿಯೂ ತಥಾಕಥಿತ ‘ಶಾಂತಿಯ ಪಾರಿವಾಳ’ಗಳನ್ನು ಹಾರಿಸುವುದನ್ನು ಬಿಟ್ಟು ಏನು ಮಾಡಲಿಲ್ಲ. ಅದನ್ನೂ ಮೀರಿ ‘ರಾಷ್ಟ್ರಕ್ಕಾಗಿ ಏನಾದರೂ ಮಾಡಬೇಕು’, ‘ಅರೆ’ ಅನ್ನುವ ಬದಲು ‘ಏಕೆ’ ಅನ್ನಬೇಕು, ಎಂದು ಮೂಲತಃ ಯಾರೂ ಕಾರ್ಯರೂಪಕ್ಕೆ ತರಲಿಲ್ಲ. ಆದುದರಿಂದ ‘ಯಾರೂ ಎದ್ದು ಭಾರತವನ್ನು ಟೀಕಿಸುತ್ತಿದ್ದರು’, ಎಂಬುದು ದೇಶದ ಗತಕಾಲವಾಗಿತ್ತು. ದೇಶವು ಬಲಿಷ್ಠ ಅಲ್ಲ ಆದರೆ ಟೊಳ್ಳಾಗಿತ್ತು. ಎಲ್ಲ ಹಂತಗಳಲ್ಲಿ ಭಾರತದ ಕತ್ತು ಹಿಸುಕಲಾಗಿತ್ತು. ಇದು ಕಾಂಗ್ರೆಸ್ ೬೦ ವರ್ಷಗಳ ಕಾಲ ಭಾರತವನ್ನು ಆಳಿದುದರ ಪರಿಣಾಮವಾಗಿದೆ; ಏಕೆಂದರೆ ಆಗಿನ ಕಾಂಗ್ರೆಸ್ ಸರಕಾರವು ಕೇವಲ ಭಯೋತ್ಪಾಧನೆ ಮತ್ತು ಶತ್ರುಗಳಿಗೆ ರತ್ನಗಂಬಳಿಯನ್ನು ಹಾಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಹಿತಾಸಕ್ತಿಗಳನ್ನು ತುಳಿಯಲಾಯಿತು. ‘ವಿದೇಶಿ ನೀತಿಯನ್ನು ಬೆಳೆಸಬೇಕು’ ಎಂದು ಯಾರ ತತ್ತ್ವದಲ್ಲಿಯೂ ಇರಲಿಲ್ಲ. ಈಗ ಅದನ್ನು ಜೈಶಂಕರರಂತಹ ಸಚಿವರು ನಿಜವಾಗಿಯೂ ಪೋಷಿಸುತ್ತಿದ್ದಾರೆ, ಸಂರಕ್ಷಿಸಿದ್ದಾರೆ ಮತ್ತು ಉಳಿಸಿಕೊಂಡಿದ್ದಾರೆ. ವಿದೇಶಿ ಸಂಬಂಧಗಳಲ್ಲಿ ಗುಣಾತ್ಮಕ ಸುಧಾರಣೆಯಾಗುತ್ತಿದೆ. ಅಂತಾರಾಷ್ಟ್ರೀಯ ವ್ಯಾಪಾರ ಬಲಗೊಂಡಿದೆ. ದೇಶದಿಂದ ಹೊರಗೆ ಕಾಲಿಟ್ಟ ನಂತರವೂ ಅವರು ಭಾರತದ ಹಿತಾಸಕ್ತಿಯನ್ನು ಕಾಪಾಡಲು ಮೇಲಿಂದ ಮೇಲೆ ಪ್ರಯತ್ನಿಸಿದರು. ಇದರಿಂದಲೇ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಜೊತೆಗೆ ರಾಷ್ಟ್ರಗಳ ನಡುವಿನ ಸಾಮರಸ್ಯ ಮತ್ತು ಆರೋಗ್ಯ ಉಳಿಯಬಹುದು.
‘ಭಾರತ ರಷ್ಯಾದಿಂದ ತೈಲವನ್ನು ಖರೀದಿಸದಿದ್ದರೆ, ಜಾಗತಿಕ ಮಾರುಕಟ್ಟೆ ನಾಶವಾಗಬಹುದಿತ್ತು’, ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದವರಲ್ಲಿ ಜೈಶಂಕರ ಇವರು ಏಕೈಕ ವಿದೇಶಾಂಗ ಸಚಿವರಾಗಿದ್ದಾರೆ. ಇಂತಹ ಈ ಪ್ರಖ್ಯಾತ ವ್ಯಕ್ತಿತ್ವದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿಯೂ ಚರ್ಚೆ ನಡೆಯುತ್ತದೆ, ಇದು ಭಾರತಕ್ಕಾಗಿ ವಿಶೇಷ ಮತ್ತು ಅಮೂಲ್ಯವಾದ ವಿಷಯವಾಗಿದೆ. ಭಾರತದೆಡೆಗೆ ವಕ್ರ ದೃಷ್ಟಿಯಿಂದ ನೋಡಿದರೆ ನಮಗೆ ಕಹಿ ಮತ್ತು ಕಟುವಾದ ಉತ್ತರ ಸಿಗುತ್ತದೆ, ಎಂದು ಎಲ್ಲ ರಾಷ್ಟ್ರಗಳಿಗೂ ಈಗ ಚೆನ್ನಾಗಿ ತಿಳಿದಿದೆ. ಭಾರತದ ಕೆಲವು ನಾಯಕರು ಅಥವಾ ರಾಜಕಾರಣಿಗಳು ವಿದೇಶಕ್ಕೆ ಹೋಗಿ ಭಾರತವಿರೋಧಿ ಘೋಷಣೆಯನ್ನು ಮಾಡುತ್ತಾರೆ; ಆದರೆ ಜೈಶಂಕರ ಇವರು ಈ ರೀತಿ ಎಂದಿಗೂ ಮಾಡಿಲ್ಲ. ವಿದೇಶಕ್ಕೆ ಹೋಗಿ ರಾಜಕೀಯ ಮಾಡದೇ ಸ್ಪಷ್ಟ ನಿಲುವನ್ನೇ ಸತತವಾಗಿ ಪ್ರತಿಪಾದಿಸಿದರು. ಗೋವಾದಲ್ಲಿ ನಡೆದ ‘ಶಾಂಘೈ ಸಹಕಾರ ಸಮ್ಮೇಳನ’ದಲ್ಲಿಯೂ ಅವರು ನಿರ್ಣಾಯಕ ಪಾತ್ರವನ್ನು ನಿರ್ವಹಿಸುವ ಮೂಲಕ ಭಾರತದ ವಿಭಿನ್ನ ಅಚ್ಚನ್ನೇ ಮೂಡಿಸಿದರು. ಆ ಕಾಲಾವಧಿಯಲ್ಲಿ ಕಾಶ್ಮೀರದ ಪೂಂಛನಲ್ಲಿ ಭಯೋತ್ಪಾದನಾ ದಾಳಿಗಳು ನಡೆದಿದ್ದವು. ಇದರ ಹಿನ್ನೆಲೆಯಲ್ಲಿ ವಂಚನೆ ಮಾಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಜೈಶಂಕರ ಇವರು ದ್ವಿಪಕ್ಷೀಯ ಮಾತುಕತೆ ನಡೆಸಲು ನಿರಾಕರಿಸಿದ್ದರು. ಯಾವುದೇ ದೇಶವಿರೋಧಿ ಘಟನೆಯ ಬಗ್ಗೆ ಅವರ ಭಾಷ್ಯ ಇದ್ದೇ ಇರುತ್ತದೆ. ಆದುದರಿಂದ ಅವರ ಪ್ರತಿಯೊಂದು ವಿದೇಶದ ಪ್ರವಾಸ ಶೇ. ೧೦೦ ರಷ್ಟು ಯಶಸ್ವಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ‘ಸವಾಲಾತ್ಮಕವಾಗಿರುವ ಶತ್ರುರಾಷ್ಟ್ರಗಳ ಏರಿಳಿತವನ್ನು ಹತ್ತಿಕ್ಕಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದು ಯಶಸ್ವಿಯಾದರೆ ಭಾರತದಲ್ಲಿ ನಿಜವಾದ ಶಾಂತಿ ನೆಲೆಸುತ್ತದೆ. ಈಗ ಭಾರತವನ್ನು ದಿಗಿಲುಗೊಳಿಸುವ ಕೆಲವು ಅಳಿದುಳಿದ ಭಯೋತ್ಪಾದನೆ ಮತ್ತು ಖಲಿಸ್ತಾನವಾದ ಉಳಿದುಕೊಂಡಿವೆ, ಅವುಗಳನ್ನು ಬೇರುಸಹಿತ ನಾಶ ಮಾಡಲು ಜೈಶಂಕರ ಇವರು ಪ್ರಯತ್ನಿಸಬೇಕು’, ಎಂದು ಭಾರತೀಯರಿಗೆ ಅನಿಸುತ್ತದೆ !