ಭಾರತವಿರೋಧಿ ಮಿಥ್ಯಾಜಾಲ !

ಉದ್ಯಮಿ ಗೌತಮ ಅದಾನಿ

ಭಾರತದ ಎರಡನೇ ಸ್ಥಾನದ ಶ್ರೀಮಂತ ವ್ಯಕ್ತಿ ಮತ್ತು ಖ್ಯಾತ ಉದ್ಯಮಿ ಗೌತಮ ಅದಾನಿ ವಿರುದ್ಧ ಅಮೇರಿಕ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಪ್ರಕರಣದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು ಅವರ ಬಂಧನದ ಅದೇಶವೂ ಬಂದಿದೆ. ಗೌತಮ ಅದಾನಿ ಇವರೊಂದಿಗೆ ಅವರ ಸೋದರಳಿಯ ಮತ್ತು ಇತರ ಐವರ ಮೇಲೆ ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ‘ಭಾರತದ ಅತಿ ದೊಡ್ಡ ಸೌರ ವಿದ್ಯುತ್‌ ಯೋಜನೆಗೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರಕಾರಿ ಅಧಿಕಾರಿಗಳಿಗೆ ೨ ಸಾವಿರದ ೧೯ ಕೋಟಿ ರೂಪಾಯಿಗಳ (೨೬೫ ದಶಲಕ್ಷ ಡಾಲರ್ಸ್‌) ಲಂಚದ ಭರವಸೆ ನೀಡಲಾಗಿದೆ’, ಎಂದು ಅಮೇರಿಕದ ಸೆಕ್ಯುರಿಟಿ ಯಾಂಡ್‌ ಎಕ್ಸಚೆಂಜ್‌ ಕಮಿಶನ್‌ ಆರೋಪಿಸಿದೆ. ಈ ಯೋಜನೆಯಲ್ಲಿ ಅಮೇರಿಕದ ಕೆಲವರು ಬಂಡವಾಳ ಹೂಡಿದ್ದಾರೆ. ಈ ಹೂಡಿಕೆಗಳಿಂದ ಗೌತಮ ಅದಾನಿ ಇವರು ೩ ಅಬ್ಜ್ ಡಾಲರ್‌ಗಿಂತ ಹೆಚ್ಚು ಸಾಲವನ್ನು ಮತ್ತು ನಗದನ್ನು ಸಂಗ್ರಹಿಸಿದರು; ಆದರೆ ಎಷ್ಟು ಲಂಚ ನೀಡಲಾಗಿದೆ ಎಂಬುದನ್ನು ಹೂಡಿಕೆದಾರರಿಗೆ ಬಹಿರಂಗಪಡಿಸಿಲ್ಲ. ಈ ಕಾರಣ ದಿಂದ ಅಮೇರಿಕದ ಹೂಡಿಕೆದಾರರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಈ ಅಪರಾಧವನ್ನು ದಾಖಲಿಸಲಾಗಿದೆ. ಆದರೆ ಗೌತಮ ಆದಾನಿ ಇವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮುಂಬರುವ ಸಮಯದಲ್ಲಿ ಇದರ ತನಿಖೆ ನಡೆದು ‘ನಿಖರ ವಾಗಿ ಏನು ನಡೆದಿದೆ ?’, ಅದು ಬಹಿರಂಗವಾಗಲೇ ಬೇಕು; ಆದರೆ ಮಾಧ್ಯಮಗಳ ಮೂಲಕ ಜಗತ್ತಿನಾದ್ಯಂತ ಭಾರತವಿರೋಧಿ ಶಕ್ತಿಗಳು ತಕ್ಷಣವೇ ಸಕ್ರಿಯವಾದವು. ಇದು ಬೆಳಕಿಗೆ ಬಂದ ತಕ್ಷಣ ‘ಬಿಬಿಸಿ’, ಹಾಗೆಯೇ ‘ವಾಯರ್’ ಈ ಸಾಮ್ಯವಾದಿ ಮತ್ತು ಭಾರತವಿರೋಧಿ ಮಾಧ್ಯಮಗಳು ‘ಭಾರತೀಯ ಇಂಧನ ಯೋಜನೆಗಳಲ್ಲಿನ ಭ್ರಷ್ಟಾಚಾರ’, ಎಂಬ ರೀತಿಯಲ್ಲಿ ಭಾರತ ವಿರೋಧಿ ನಕಲಿ ನಿರೂಪಣೆಯನ್ನು ಆರಂಭಿಸಿದವು. ಈ ಘಟನೆಯ ನಂತರ ಕೆನ್ಯದ ರಾಷ್ಟ್ರಾಧ್ಯಕ್ಷ ವಿಲ್ಯಮ್‌ ರುಟೋ ಇವರು ಅದಾನಿ ಸಮೂಹದ ಜೊತೆಗಿರುವ ಒಡೆತನದ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಇಂಧನ ಯೋಜನೆಗಳಲ್ಲಿ ಹೂಡಿಕೆ ಯನ್ನು ರದ್ದುಗೊಳಿಸುವ ಬಗ್ಗೆ ಘೋಷಿಸಿದರು. ಗೌತಮ್‌ ಅದಾನಿ ಎಂದರೆ ‘ಭಾರತ’ ಎಂದಲ್ಲ; ಆದರೆ ಅವರು ಯಶಸ್ವಿ ಭಾರತೀಯ ಉದ್ಯಮಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನಹಾನಿ ಮಾಡಲು ಈ ಪ್ರಕರಣವನ್ನು ಬಳಸಲಾಗುತ್ತಿದೆ.

ಮಿಥ್ಯಾಜಾಲವನ್ನು (‘ಫೆಕ್‌ ನೆರೆಟಿವ್‌’ವನ್ನು) ರೂಪಿಸುವ ಮೂಲಕ ಭಾರತದ ಮಾನಹಾನಿಯ ಕೃತ್ಯವನ್ನು ಸಾಮ್ಯವಾದಿ ಮಾಧ್ಯಮಗಳು ಯಾವಾಗಲೂ ಮಾಡಿವೆ. ಕಳೆದ ತಿಂಗಳಲ್ಲಿ ‘ಯುನೈಟೆಡ್‌ ಸ್ಟೇಟ್ಸ್ ಕಮಿಶನ್‌ ಆನ್‌ ಇಂಟರನ್ಯಾಶನಲ್‌ ರಿಲಿಜಿಯಸ್‌ ಫ್ರಿಡಮ್’ ಈ ಅಮೇರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಪ್ರಸಾರ ಮಾಡಿದ ‘ಇಂಡಿಯಾ ಕಂಟ್ರಿ ಅಪಡೆಟ್’ ಈ ವರದಿಯಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂದು ವಿಷಕಾರಿತು. ರಾಷ್ಟ್ರೀಯ ಪೌರತ್ವದ ನೋಂದಣಿ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಇರುವುದಾಗಿ ‘ನಕಲಿ ನಿರೂಪಣೆ’ಯನ್ನು ಎಡಪಂಥೀಯ ಮಾಧ್ಯಮಗಳು ಸೃಷ್ಟಿಸಿವೆ. ಇದರ ವಿರುದ್ಧ ದೆಹಲಿಯ ಶಾಹೀನಬಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಭಾರಿ ಪ್ರಚಾರ ನೀಡಿ ಭಾರತವನ್ನು ಅಪಮಾನಿಸಲು ಇದೇ ಮಾಧ್ಯಮ ಮುಂದಾಗಿತ್ತು. ಮಣಿಪುರದ ಹಿಂಸಾಚಾರ ಪ್ರಕರಣದಲ್ಲಿಯೂ ‘ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ’, ಎಂಬ ಚಿತ್ರಣದ ಮಿಥ್ಯಾಜಾಲವನ್ನು ಸೃಷ್ಟಿಸಲಾಯಿತು. ಆದುದರಿಂದ ಗೌತಮ ಅದಾನಿ ಪ್ರಕರಣದಿಂದ ಭಾರತದ ಮಾನಹಾನಿ ಮಾಡು ವುದು, ಹೊಸದೇನಲ್ಲ; ದುರದೃಷ್ಟಕರ ಸಂಗತಿಯೆಂದರೆ ಈ ‘ನಕಲಿ ನಿರೂಪಣೆ’ಯ ವಿರುದ್ಧ ಭಾರತವು ನಿಲ್ಲಬೇಕಾಗಿದೆ; ಆದರೆ ಈ ಮೊದಲು ಅನೇಕ ವರ್ಷಗಳ ಕಾಲ ದೇಶದ ನೇತೃತ್ವವನ್ನು ವಹಿಸಿದ ಕಾಂಗ್ರೆಸ್‌ ಪಕ್ಷ ಭಾರತದ ವಿರೋಧಿಶಕ್ತಿಗಳ ಭಾಷೆಯನ್ನು ಆಡುತ್ತಿದೆ. ಈ ಪ್ರಕರಣದಲ್ಲಿಯೂ ತನಿಖೆ ಪೂರ್ಣಗೊಳ್ಳುವ ಮೊದಲೇ ಗೌತಮ್‌ ಅದಾನಿ ಇವರನ್ನು ಅಮೇರಿಕಾ ಬಂಧಿಸ ಬೇಕು ಎಂದು ರಾಹುಲ ಗಾಂಧಿ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ನ ಈ ರಾಜಕಾರಣ ಪ್ರಗಲ್ಭತೆಯ ಲಕ್ಷಣವಲ್ಲ. ಎಷ್ಟೇ ರಾಜಕೀಯ ವಿರೋಧವಿದ್ದರೂ ದೇಶದ ಗೌರವ ಮತ್ತು ಘನತೆಗಾಗಿ ಒಂದಾಗುವುದು, ರಾಷ್ಟ್ರೀಯತೆಯ ಸಂಕೇತ; ಆದುದರಿಂದ ಭಾರತವಿರೋಧಿ ಮಿಥ್ಯಾಜಾಲ ಸೃಷ್ಟಿಸಲು ಜಾಗತಿಕ ಮಟ್ಟದಲ್ಲಷ್ಟೇ ಅಲ್ಲ, ಆದರೆ ದೇಶದಲ್ಲಿಯೂ ಸಂಚು ನಡೆದಿರುವುದರ ಇದು ದ್ಯೋತಕವಾಗಿದೆ.