ಕಾಂಗ್ರೆಸ್‌ ಆಡಳಿತದಲ್ಲಿ ವಿಧಾನಸಭೆಯೂ ವಕ್ಫ್ ಆಸ್ತಿ !

೧. ಕಾಂಗ್ರೆಸ್‌ ಆಡಳಿತದಲ್ಲಿ ವಿಧಾನಸಭೆಯೂ ವಕ್ಫ್ ಆಸ್ತಿ !

ಬಾಗಲಕೋಟೆಯಲ್ಲಿರುವ ಸರಕಾರಿ ಕಚೇರಿಗಳ ಭೂ ಸಮೀಕ್ಷೆಯಲ್ಲಿ ಈ ಕಚೇರಿಗಳನ್ನು ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ ಎಂಬುದು ತಿಳಿದುಬಂದಿದೆ. ನಿರ್ಮಾಣ ಹಂತದಲ್ಲಿರುವ ಮಿನಿವಿಧಾನಸೌಧದ ಕಟ್ಟಡದ ಪರಿಶೀಲನೆ ನಡೆಸಿದಾಗ ಅದು ವಕ್ಫ್ ಆಸ್ತಿ ಎಂದು ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ.

೨. ಇಂತಹ ಘಟನೆಗಳು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತವೆ !

ಭಾಗ್ಯನಗರದಲ್ಲಿ (ತೆಲಂಗಾಣ) ಮತಾಂಧ ಮುಸಲ್ಮಾನರು ದೇವಸ್ಥಾನದಲ್ಲಿದ್ದ ನವಗ್ರಹ ವಿಗ್ರಹಗಳನ್ನು ಧ್ವಂಸಗೊಳಿಸಿದರು. ಈ ಘಟನೆಯಿಂದ ಜನರು ದೇವಸ್ಥಾನದ ಹೊರಗೆ ಒಟ್ಟುಗೂಡಿ ದಾಳಿಯನ್ನು ವಿರೋಧಿಸಿದರು. ಕೆಲವು ದಿನಗಳ ಹಿಂದೆ ಭಾಗ್ಯನಗರದ ಮುಥ್ಯಾಲಮ್ಮ ದೇವಸ್ಥಾನದ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ ವಿಗ್ರಹ ಧ್ವಂಸಗೊಳಿಸಿದ್ದರು.

೩. ಕಾಶ್ಮೀರಿಗಳ ದೇಶವಿರೋಧಿ ಮನಸ್ಥಿತಿಯನ್ನು ತಿಳಿಯಿರಿ !

ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್‌ ಚೌಧರಿ ಅವರು ಭಾರೀ ಗೊಂದಲದ ನಡುವೆ ವಿಧಾನಸಭೆಯಲ್ಲಿ ೩೭೦ ನೇ ವಿಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದರು.

೪. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸಿ !

ನವೆಂಬರ್‌ ೬ ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ೩೭೦ ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಭಾರಿ ಗೊಂದಲದ ನಡುವೆ ಅಂಗೀಕರಿಸಿದ ನಂತರ, ನವೆಂಬರ್‌ ೭ ರಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಘರ್ಷಣೆಗಳು ನಡೆದವು. ಇದರಿಂದಾಗಿ ೨೦ ನಿಮಿಷಗಳ ಕಾಲ ಕಲಾಪವನ್ನು ಸ್ಥಗಿತಗೊಳಿಸಲಾಯಿತು

೫. ಇಂತಹವರಿಗೆ ಮರಣದಂಡನೆ ವಿಧಿಸಿ !

ಕಿಶ್ತವಾಡ (ಜಮ್ಮು-ಕಾಶ್ಮೀರ)ದ ಪದ್ದಾರ ಪ್ರದೇಶದಲ್ಲಿ ಹಿಂದೂ ಅಪ್ರಾಪ್ತ ಬಾಲಕಿಯ ಮೇಲೆ ೬ ಮುಸಲ್ಮಾನ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ತಾಲಿಬ್‌ ಹುಸೇನ್‌ ಇವನನ್ನು ಪೊಲೀಸರು ಬಂಧಿಸಿದ್ದಾರೆ.

೬. ಕೆನಡಾದಲ್ಲಿ ಅಸುರಕ್ಷಿತ ಹಿಂದೂಗಳು !

ಖಲಿಸ್ತಾನ್‌ ಬೆಂಬಲಿಗರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದೊಳಗೆ ನುಗ್ಗಿ ಹಿಂದೂ ಭಕ್ತರ ಮೇಲೆ ದಾಳಿ ನಡೆಸಿದರು. ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ದಾಳಿಯನ್ನು ಖಂಡಿಸಿದರು, ಆದರೆ ವಿರೋಧಿ ಪಕ್ಷವು ಈ ವಿಷಯದ ಬಗ್ಗೆ ಟ್ರುಡೊ ಅವರನ್ನು ಟೀಕಿಸಿದೆ.

೭. ಇದು ಹಿಂದೂಗಳಿಗೆ ಲಜ್ಜಾಸ್ಪದ !

ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಬಾಂಬೇಶ್ವರ ಬೆಟ್ಟದಲ್ಲಿ ಪ್ರಾಚೀನ ಶಿವಮಂದಿರವಿದ್ದು ಅಲ್ಲಿ ಮುಸಲ್ಮಾನರು ಕೊರೊನಾ ಕಾಲದಲ್ಲಿ ಅಕ್ರಮವಾಗಿ ಮಸೀದಿ ಕಟ್ಟಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಮೋಹನ ಬೇದಿ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು ಈ ಮಸೀದಿ ಕೆಡಹುವಂತೆ ಆಗ್ರಹಿಸಿದ್ದಾರೆ