ಅನೇಕ ದೊಡ್ಡ ಬ್ರ್ಯಾಂಡ್ ಭಾರತಕ್ಕೆ ಸ್ಥಳಾಂತರವಾಗಬಹುದು
ಢಾಕಾ (ಬಾಂಗ್ಲಾದೇಶ) – ಶೇಖ ಹಸೀನಾ ಸರಕಾರ ಪತನವಾದ ನಂತರ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಅಸ್ಥಿರವಾಗಿರುವುದರಿಂದ ಅದು ಪಾಕಿಸ್ತಾನದಂತೆ ದಿವಾಳಿ ಆಗುವ ಕಡೆಗೆ ಸಾಗುತ್ತಿದೆ. ಬಾಂಗ್ಲಾದೇಶದ ಆರ್ಥವ್ಯವಸ್ಥೆಯ ಅಡಿಪಾಯವಾಗಿರುವ ಜವಳಿ ಉದ್ಯಮಕ್ಕೆ ಎಲ್ಲಕ್ಕಿಂತ ಹೆಚ್ಚು ಹಾನಿಯಾಗಿದೆ. ಅಲ್ಪಸಂಖ್ಯಾತರ ಮೇಲಿನ ವಿಶೇಷವಾಗಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯಿಂದಾಗಿ ಉದ್ಯೋಗ ಕ್ಷೇತ್ರದಲ್ಲಿನ ಆತಂಕ ಇನ್ನಷ್ಟು ಹೆಚ್ಚಾಗಿದ್ದು ಅನೇಕ ಕಂಪನಿಗಳು ಮುಚ್ಚುವ ಮಾರ್ಗದಲ್ಲಿವೆ. ಅದರಲ್ಲಿ ಜವಳಿ ಉದ್ಯಮದ ಮೇಲೆ ಎಲ್ಲಕ್ಕಿಂತ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ನಷ್ಟ ಕಡಿಮೆಗೊಳಿಸುವುದಕ್ಕಾಗಿ ಮತ್ತು ಬೇಡಿಕೆ ಪೂರ್ಣಗೊಳಿಸುವುದಕ್ಕಾಗಿ ಈಗ ಅನೇಕ ಕಂಪನಿಗಳು ಭಾರತೀಯ ಉತ್ಪಾದಕರ ಕಡೆಗೆ ಗಮನಹರಿಸುತ್ತಿದ್ದಾರೆ.
ಜವಳಿ ಉದ್ಯಮದ ಮೇಲೆ ಬೀರುವ ಪರಿಣಾಮ
ಬಾಂಗ್ಲಾದೇಶದಲ್ಲಿನ ಜವಳಿ ಉದ್ಯಮ ಇದು ಚೀನಾದ ನಂತರ ಜಗತ್ತಿನಲ್ಲಿನ ಎರಡನೆಯ ಸ್ಥಾನದಲ್ಲಿನ ಎಲ್ಲಕ್ಕಿಂತ ದೊಡ್ಡ ಉದ್ಯಮವಾಗಿದೆ, ಇದು ಗಮನಿಸಬೇಕಾದಂತಹ ಅಂಶವಾಗಿದೆ. ಜವಳಿ ಉದ್ಯಮ ಬಾಂಗ್ಲಾದೇಶದ ಸಂಪೂರ್ಣ ರಾಷ್ಟ್ರೀಯ ಉತ್ಪನ್ನದಲ್ಲಿ ಗಣನೀಯ ಕೊಡುಗೆ ನೀಡುತ್ತದೆ, ಅದು ೨೦೨೪ ವರೆಗೆ ಶೇಕಡ ೧೧ ರಷ್ಟು ಇದೆ. ಈ ಕ್ಷೇತ್ರದಲ್ಲಿ ಸುಮಾರು ಶೇಕಡ ೮೦ ತೆರಿಗೆ ರಫ್ತನಿಂದ ಬರುತ್ತದೆ. ಜವಳಿ ಉದ್ಯಮದಲ್ಲಿ ಇನ್ನಷ್ಟು ಇಳಿಕೆ ಎದುರಿಸ ಬೇಕಾದರೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಳ್ಳಬಹುದು. ಇದರಿಂದ ದೇಶ ದೊಡ್ಡ ಸಾಲವೆ ಎದುರಿಸಬೇಕಾಗಬಹುದು. ಇಂತಹ ಪರಿಸ್ಥಿತಿ ಬಾಂಗ್ಲಾದೇಶವನ್ನು ಪಾಕಿಸ್ತಾನದಂತೆಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.
ಗುಜರಾತ್‌ಗೆ ಆಗುವ ಲಾಭ
ಅನೇಕ ದೊಡ್ಡ ಅಂತರಾಷ್ಟ್ರೀಯ ಬ್ರಾಂಡ್ (ಯಾವುದಾದರೂ ವಿಷಯದ ಕುರಿತು ವಿಶಿಷ್ಟ ನೀತಿ ಅಥವಾ ಪರಿಚಯ ಇರುವುದು) ಅದರಲ್ಲಿ ಅಮೆರಿಕದಲ್ಲಿನ ಬ್ರಾಂಡ್ ಕೂಡ ಸೇರಿದೆ, ಅದು ಬಾಂಗ್ಲಾದೇಶದಿಂದ ಬಟ್ಟೆಯ ಉತ್ಪಾದನೆ ಮಾಡುತ್ತದೆ. ಅದರ ನಂತರ ಈ ಬಟ್ಟೆ ದೇಶಾದ್ಯಂತದಲ್ಲಿನ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾರಲಾಗುತ್ತದೆ; ಆದರೆ ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಈ ಬ್ರಾಂಡಿನ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಅಂತರಾಷ್ಟ್ರೀಯ ಬ್ರಾಂಡ್ ಅದರ ಉತ್ಪಾದನೆಯ ನಿರ್ಮಿತಿಗಾಗಿ ಅಥವಾ ಮೂಲಕ್ಕಾಗಿ ಹೊಸ ಜಾಗ ಹುಡುಕುತ್ತಿರುವುದರಿಂದ, ಭಾರತದ ಸೂರತ್ ನಗರ ಒಂದು ಪರ್ಯಾಯವಾಗಿ ಉದಯಿಸಬಹುದು. ಉದ್ಯೋಗದಲ್ಲಿನ ಜನರ ಅಭಿಪ್ರಾಯ, ಅಂತರಾಷ್ಟ್ರೀಯ ಬ್ರಾಂಡ್ ಸಿದ್ಧ ಉಡುಪಿನ ಉತ್ಪಾದನೆ (ರೆಡಿಮೇಡ್) ಮತ್ತು ಪೂರೈಕೆ ಇದರ ಕುರಿತು ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆ ಪೂರೈಕೆಯಲ್ಲಿ ಬದಲಾವಣೆ ಆದರೆ ಆಗ ಸೂರತ್ ಜವಳಿ ಉದ್ಯಮದ ಪ್ರಮಾಣ ಹೆಚ್ಚಾಗಿ ಪ್ರಸ್ತುತ ಶೇಖಡ ೧೨ ರಿಂದ ಅದು ಶೇಕಡ ೨೦ ರಿಂದ ೨೫ ರಷ್ಟು ಹೆಚ್ಚಾಗಬಹುದು.
ಇತರ ಭಾರತೀಯ ನಗರಗಳಿಗೂ ಕೂಡ ಆಗುವ ಲಾಭ
‘ದಕ್ಷಿಣ ಗುಜರಾತ್ ಚೆಂಬರ್ ಆಫ್ ಕಾಮರ್ಸ’ನ ಮಾಜಿ ಅಧ್ಯಕ್ಷ ಆಶಿಷ ಗುಜರಾತಿ ಇವರು, ಹೊಸ ಬೇಡಿಕೆಯಿಂದ ಕೇವಲ ಸೂರತ್‌ಗೆ ಅಷ್ಟೇ ಅಲ್ಲದೆ, ಜವಳಿ ಉದ್ಯಮದ ಕೇಂದ್ರವಾಗಿರುವ ಇತರ ಭಾರತೀಯ ನಗರಗಳಿಗೂ ಕೂಡ ಲಾಭವಾಗುವುದು, ಎಂದು ಅಪೇಕ್ಷೆ ಇದೆ. ಇದರಲ್ಲಿ ತಮಿಳುನಾಡಿನಲ್ಲಿನ ತಿರುಪೂರ್ ಮತ್ತು ಕೊಯಮತ್ತೂರು, ಪಂಜಾಬ್‌ನ ಲುಧಿಯಾನ ಮತ್ತು ಉತ್ತರ ಪ್ರದೇಶದಲ್ಲಿನ ನೋಯಡ ಇಂತಹ ನಗರಗಳಿಗೂ ಆದ್ಯತೆ ನೀಡಬಹುದು’, ಎಂದು ಹೇಳಿದರು.