ಸೇವೆಯ ತಳಮಳ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಭಾವವಿರುವ ಪುತ್ತೂರಿನ ಸನಾತನದ ೧೨೯ ನೇ ಸಂತರಾದ ಪೂ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ) !

ಪೂ. ಸಾಂತಪ್ಪ ಗೌಡ
ಪೂ. ರಮಾನಂದ ಗೌಡ
ಸೌ. ಮಂಜುಳಾ ಗೌಡ

೧. ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಕೈ ಹಿಡಿದು ನನ್ನನ್ನು ಸನಾತನಕ್ಕೆ ಕರೆ ತಂದರು’, ಎಂಬ ಭಾವವಿರುವ ಶ್ರೀ. ಸಾಂತಪ್ಪ ಗೌಡ !

‘ಪುತ್ತೂರಿನ (ದಕ್ಷಿಣ ಕನ್ನಡ ಜಿಲ್ಲೆ) ಶ್ರೀ. ಸಾಂತಪ್ಪ ಗೌಡ (ಮಾಮ) ಇವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ನೌಕರಿ ಮಾಡಿದ್ದಾರೆ. ನಿವೃತ್ತಿಯ ನಂತರ ಅವರು ಒಂಟಿತನವನ್ನು ಅನುಭವಿಸಿದರು. ಮನಸ್ಸಿನ ವಿಚಾರಗಳನ್ನು ಹಂಚಿಕೊಳ್ಳಲು ಅವರ ಹತ್ತಿರ ಯಾರೂ ಇರಲಿಲ್ಲ. ನಂತರ ಅವರು ಒಂದು ಸಂಪ್ರದಾಯದ ಮಾಧ್ಯಮದಿಂದ ಸಾಧನೆಯನ್ನು ಆರಂಭಿಸಿದರು. ಮುಂದೆ ಅವರಿಗೆ ಸನಾತನದ ಮಾಧ್ಯಮದಿಂದ ಯೋಗ್ಯ ಸಾಧನೆ ತಿಳಿಯಿತು. ಆಗ ಅವರಿಗೆ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ನನ್ನ ಕೈಹಿಡಿದರು ಮತ್ತು ನನ್ನನ್ನು ಸನಾತನಕ್ಕೆ ಕರೆ ತಂದರು’ ಎಂದು ಅನಿಸಿತು. ಅವರ ಮನೆಯಲ್ಲಿ ಬಹಳ ಸಮಸ್ಯೆ ಗಳು ಮತ್ತು ಪೂರ್ವಜರ ತೊಂದರೆ ಇತ್ತು. ಸಾಧನೆಯನ್ನು ಆರಂಭಿಸಿದ ನಂತರ ಮತ್ತು ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಮಾಡಿದಾಗ ಅವರ ಎಲ್ಲ ಅಡಚಣೆಗಳು ದೂರವಾದವು.

೨. ಶ್ರೀ. ಸಾಂತಪ್ಪ ಗೌಡ ಇವರ ಗುಣವೈಶಿಷ್ಟ್ಯಗಳು

೨ ಅ. ಸಾಂತಪ್ಪಮಾಮಾ ಇವರು ಸದಾ ಆನಂದದಲ್ಲಿರುತ್ತಾರೆ.

೨ ಆ. ಸಾಧಕರ ಆಧಾರಸ್ತಂಭವಾಗಿರುವ ಸಾಂತಪ್ಪಮಾಮಾ ! : ಪುತ್ತೂರಿನ ಸಾಧಕರಿಗೆ ಏನೇ ಅಡಚಣೆ ಬಂದರೂ, ಅವರು ಮಾಮಾನವರ ಮಾರ್ಗದರ್ಶನ ಪಡೆಯುತ್ತಾರೆ. ಮಾಮಾನವರು ಅವರಿಗೆಲ್ಲ ಭಾವದ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಶ್ರೀ. ಸಾಂತಪ್ಪಮಾಮಾ ಎಂದರೆ ಪುತ್ತೂರಿನ ಸಾಧಕರ ಆಧಾರಸ್ತಂಭವಾಗಿದ್ದಾರೆ. ‘ಸಾಧಕರಿಗೆ ಸಹಾಯ ಮಾಡುವುದು, ಅವರ ಕಾಳಜಿ ವಹಿಸುವುದು ಮತ್ತು ಅವರನ್ನು ಮುಂದೆ ಒಯ್ಯಲು ಪ್ರೋತ್ಸಾಹಿಸುವುದು’, ಹೀಗೆ ಅನೇಕ ಗುಣಗಳು ಅವರಲ್ಲಿವೆ.

೨ ಇ. ಮಾಮನವರು ಸಾಧಕರಿಗೆ ವ್ಯಷ್ಟಿ ಸಾಧನೆಯ ಪ್ರಯತ್ನಕ್ಕೆ ಸಹಾಯ ಮಾಡಿದ್ದರಿಂದ ಸಾಧಕರಿಗೆ ಪ್ರೇರಣೆ ದೊರಕುವುದು : ಸಾಂತಪ್ಪಮಾಮ ಇವರು ಯಾರಿಗೆಲ್ಲ ಸಾಧನೆಯನ್ನು ಹೇಳುತ್ತಾರೆಯೋ, ಆ ಎಲ್ಲ ವ್ಯಕ್ತಿಗಳು ಸಾಧನೆಯನ್ನು ಆರಂಭಿಸುತ್ತಾರೆ. ಒಂದು ಕೇಂದ್ರದ ಓರ್ವ ಸಾಧಕರ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮಾಡುತ್ತಿರಲಿಲ್ಲ. ಸಾಂತಪ್ಪಮಾಮ ಆ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳಲು ಆರಂಭಿಸಿದರು. ಮಾಮನವರು ಪ್ರತಿದಿನ ಆ ಸಾಧಕರಿಗೆ ಸಂಚಾರವಾಣಿ ಕರೆ ಮಾಡಿ ‘ಸಾಧನೆಯ ಪ್ರಯತ್ನವನ್ನು ಹೇಗೆ ಮಾಡಬೇಕು ? ಅದನ್ನು ಮಾಡಲು ಏನಾದರೂ ಅಡಚಣೆ ಇದೆಯೇ ?’, ಎಂಬ ಬಗ್ಗೆ ಮಾತನಾಡುತ್ತಿದ್ದರು. ನಂತರ ಆ ಸಾಧಕರಲ್ಲಿ ಬಹಳ ಬದಲಾವಣೆಯಾಯಿತು. ಈ ಬಗ್ಗೆ ಅವನನ್ನು ಕೇಳಿದಾಗ ಅವರ, ”ಸಾಂತಪ್ಪಮಾಮನವರು ಪ್ರತಿದಿನ ನನ್ನ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುತ್ತಿದ್ದರು. ಆದುದರಿಂದ ನನಗೆ ಪ್ರೇರಣೆ ಸಿಕ್ಕಿತು !” ಎಂದು ಹೇಳಿದರು. ಇದೇ ರೀತಿಯ ಬದಲಾವಣೆ ೩-೪ ಸಾಧಕರಲ್ಲಿ ಆಗಿದೆ.

೨ ಈ. ಸೇವೆಯ ತೀವ್ರ ತಳಮಳ : ಸಾಂತಪ್ಪಮಾಮನವರ ವೈಶಿಷ್ಟ್ಯವೆಂದರೆ ಈ ವಯಸ್ಸಿನಲ್ಲಿಯೂ ಅವರು ಪ್ರತಿದಿನ ಸೇವೆಗೆ ಹೋಗುತ್ತಾರೆ. ‘ಜಿಜ್ಞಾಸುಗಳನ್ನು ಸಂಪರ್ಕಿಸುವುದು, ಸನಾತನ ಪ್ರಭಾತಕ್ಕೆ ಚಂದಾದಾರರನ್ನು ಮಾಡುವುದು, ನವೀಕರಣ ಮಾಡುವುದು, ಜಾಹೀರಾತುಗಳನ್ನು ತರುವುದು, ಹಾಗೆಯೇ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ವಿತರಿಸುವುದು’ ಮುಂತಾದ ಸೇವೆಗಳನ್ನು ಅವರು ಈಗಲೂ ಮಾಡುತ್ತಾರೆ. ಅವರು ಯಾವಾಗಲೂ ಸೇವಾನಿರತ ರಾಗಿರುತ್ತಾರೆ. ಇಳಿ ವಯಸ್ಸಿನಲ್ಲಿಯೂ ಮನೆಯಲ್ಲಿರದೇ ಅವರು ಯಾರಾದರೊಬ್ಬ ಸಾಧಕನ ಸಹಾಯ ಪಡೆದು ಸೇವೆಗೆ ಹೋಗುತ್ತಾರೆ. ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ದೇವರ ಮೇಲೆ ಶ್ರದ್ಧೆ ಮತ್ತು ಸೇವೆಯ ತೀವ್ರ ತಳಮಳದಿಂದ ಅವರು

ಸೇವೆಯನ್ನು ಮಾಡಲು ಹೊರಗೆ ಹೋಗುತ್ತಾರೆ. ಈ ಇಳಿವಯಸ್ಸಿನಲ್ಲಿಯೂ ಅವರು ಯುವಕರಂತೆ ಸೇವೆ ಮಾಡುತ್ತಾರೆ ಮತ್ತು ಯಾವುದೇ ಸೇವೆಯನ್ನು ನೀಡಿದರೂ ಅವರು ಆ ಸೇವೆಯನ್ನು ಪರಿಪೂರ್ಣ ಮಾಡುತ್ತಾರೆ.

೨ ಉ. ತಮ್ಮ ಕುಟುಂಬದವರಿಂದಲೂ ಸಾಧನೆ ಮಾಡಿಸಿಕೊಳ್ಳುವುದು

೧. ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜನ್ಮೋತ್ಸವದ ನಿಮಿತ್ತ ಪುತ್ತೂರಿನಲ್ಲಿ ಒಂದು ಮೆರವಣಿಗೆ ಇತ್ತು. ಆ ಸಮಯದಲ್ಲಿ ಅಲ್ಲಿ ನೃತ್ಯವನ್ನು ಪ್ರಸ್ತುತಪಡಿಸುವ ಸೇವೆ ಇತ್ತು. ಮೆರವಣಿಗೆಯ ನಂತರ ಒಂದು ವಾರದ ನಂತರ ಸಾಂತಪ್ಪಮಾಮ ಇವರ ಒರ್ವ ಮೊಮ್ಮಗಳ (ಪೂರ್ವಾಶ್ರಮದ ಕು. ವಿದ್ಯಾ ಗೌಡ, ವಯಸ್ಸು ೨೯ ವರ್ಷಗಳು) ವಿವಾಹವಿತ್ತು. ಆಗ ಮಾಮ ಇವರು ಅವಳಿಗೆ ಹಾಗೂ ಇನ್ನೊಬ್ಬ ಮೊಮ್ಮಗಳಿಗೆ ‘ಪ.ಪೂ. ಗುರುದೇವರ ಜನ್ಮೋತ್ಸವದ ನಿಮಿತ್ತ ಸೇವೆಯ ಲಾಭ ಪಡೆದುಕೊಳ್ಳಬೇಕು’, ಎಂದು ಹೇಳಿ ಅವರಿಬ್ಬರಿಂದ ಜನ್ಮೋತ್ಸವದ ಮೆರವಣಿಗೆಯಲ್ಲಿ ನೃತ್ಯದ ಸೇವೆಯನ್ನು ಮಾಡಿಸಿಕೊಂಡರು.

೨. ಮಾಮ ಇವರು ತಮ್ಮ ಮಗ (ಶ್ರೀ. ಗಂಗಾಧರ ಗೌಡ, ವಯಸ್ಸು ೪೮ ವರ್ಷಗಳು) ಮತ್ತು ಸೊಸೆ (ಸೌ. ಯಶೋದಾ ಗೌಡ, ವಯಸ್ಸು ೩೮ ವರ್ಷಗಳು) ಇವರಿಬ್ಬರಿಂದ ಅರ್ಪಣೆಯ ಮಾಧ್ಯಮದಿಂದ ತ್ಯಾಗ ಮಾಡಿಸಿಕೊಳ್ಳುತ್ತಾರೆ. ಅವರು ನಡುನಡುವೆ ಕುಟುಂಬದವರನ್ನು ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಆದುದರಿಂದ ಅವರಲ್ಲಿ ಸಾಧನೆಯ ಆಸಕ್ತಿ ಮೂಡಿದೆ.

೨ ಊ. ‘ಸನಾತನವೇ ನನ್ನ ಕುಟುಂಬ’, ಎಂಬ ಭಾವವಿರುವುದರಿಂದ ಈಗ ಮಾಮ ಇವರಿಗೆ ಎಂದಿಗೂ ಒಂಟಿತನ ಕಾಡುವುದಿಲ್ಲ.

೨ ಎ. ಪೂ. ರಮಾನಂದ ಗೌಡ ಇವರ ಬಗೆಗಿನ ಭಾವ

೧. ಒಂದು ಬಾರಿ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ ಗೌಡ ಇವರು ಪುತ್ತೂರು ಕೇಂದ್ರಕ್ಕೆ ಹೋಗು ವವರಿದ್ದರು. ಆ ಕಾಲಾವಧಿಯಲ್ಲಿ  ಸಾಂತಪ್ಪಮಾಮ ಇವರು ಅಯೋಧ್ಯೆಗೆ ಹೋಗುವವರಿದ್ದರು. ಅದಕ್ಕಾಗಿ ಅವರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರು; ಆದರೆ ‘ಸಂತರು ಮನೆಗೆ ಬರುವರೆಂದು’ ಅಯೋಧ್ಯೆಗೆ ಹೋಗುವುದನ್ನು ರದ್ದು ಗೊಳಿಸಿದರು. ಅಯೋಧ್ಯೆಗೆ ಇನ್ನೊಮ್ಮೆ ಹೋಗಬಹುದು. ‘ತಮ್ಮ ಊರಿಗೆ ಸಾಕ್ಷಾತ್‌ ದೇವರೇ ಬರುತ್ತಿದ್ದಾರೆ, ಅದರ ಲಾಭ ಸಿಗಬೇಕು ಎಂಬ ಭಾವ ಅವರಲ್ಲಿತ್ತು.

೨. ಮಾಮ ಇವರಿಗೆ ಪೂ. ಅಣ್ಣ ಇವರನ್ನು ಭೇಟಿಯಾಗಬೇಕು ಎಂದು ಅನಿಸಿದಾಗ ಅವರು ತಮ್ಮ ಪರಿವಾರದವರನ್ನು ಕರೆದುಕೊಂಡು ಅವರನ್ನು ಭೇಟಿಯಾಗಲು ಹೋಗುತ್ತಾರೆ. ‘ಮುಂದಿನ ಸಾಧನೆಗಾಗಿ ನಾನೇನು ಮಾಡಲಿ ?’, ಈ ಬಗ್ಗೆ ಅವರು ಪೂ. ಅಣ್ಣನವರ ಮಾರ್ಗದರ್ಶನ ಪಡೆಯುತ್ತಾರೆ.

೨ ಏ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗೆಗಿನ ಭಾವ : ಮಾಮ ಇವರು ”ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರಲ್ಲಿ ಪ್ರಾರ್ಥಿಸಿದಾಗ ನನ್ನ ಪ್ರತಿಯೊಂದು ಅಡಚಣೆ ದೂರವಾಗುತ್ತವೆ. ಪ.ಪೂ. ಗುರುದೇವರು ಪ್ರತಿಕ್ಷಣ ನನ್ನೊಂದಿಗೆ ಇರುತ್ತಾರೆ. ‘ಅವರು ಖಂಡಿತ ನನ್ನ ರಕ್ಷಣೆ ಮಾಡುತ್ತಾರೆ’, ಎಂಬ ಶ್ರದ್ಧೆಯನ್ನಿಟ್ಟು ನಾನು ಸೇವೆ ಮಾಡಲು ಹೋಗುತ್ತೇನೆ”, ಎಂದು ಹೇಳುತ್ತಾರೆ. ಇದನ್ನು ಹೇಳುವಾಗ ಅವರ ಭಾವಜಾಗೃತಿಯಾಗುತ್ತದೆ.

೩. ಶ್ರೀ.  ಸಾಂತಪ್ಪಮಾಮ ಇವರಿಗೆ ಬಂದ ಅನುಭೂತಿ

೩ ಅ. ಮಳೆಗಾಲದಲ್ಲಿ ಮಾಮ ಇವರು ಸೇವೆಗೆಂದು ಹೊರಗೆ ಹೋದಾಗ ಮಳೆ ಬರುವುದು ನಿಲ್ಲುವುದು : ಮಳೆಗಾಲದಲ್ಲಿ ಮಾಮ ಇವರು ಸೇವೆಯ ನಿಮಿತ್ತ ಹೊರಗೆ ಹೋಗುತ್ತಿದ್ದರು. ಆಗ ಬಹಳ ಮಳೆ ಬರುತ್ತಿತ್ತು; ಆದರೆ ಮಾಮ ಇವರು ಸೇವೆಗಾಗಿ ಹೊರಗೆ ಹೊರಟ ತಕ್ಷಣ, ಮಳೆ ನಿಲ್ಲುತ್ತಿತ್ತು. ಅವರು ಸೇವೆಯ ಸ್ಥಳವನ್ನು ತಲುಪಿದ ತಕ್ಷಣ, ಮಳೆ ಪುನಃ ಆರಂಭವಾಗುತ್ತಿತ್ತು. ಮಾಮ ಇವರು ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಮಳೆ ನಿಲ್ಲುತ್ತಿತ್ತು. ‘ಸೇವೆಯ ತಳಮಳದಿಂದಾಗಿ ವರುಣದೇವರು ಕೃಪೆ ಮಾಡುತ್ತಾರೆ’, ಎಂಬ ಅನುಭೂತಿ ಅವರಿಗೆ ಬರುತ್ತಿತ್ತು.

೩ ಆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಾಗ ‘ತಮ್ಮ ಸುತ್ತಲೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸಂರಕ್ಷಕ ಕವಚವಿತ್ತು’, ಎಂದು ಅನುಭೂತಿ ಪಡೆಯುವ ಸಾಂತಪ್ಪಮಾಮ ! : ಒಂದು ಸಲ ಮಾಮ ಇವರು ದ್ವಿಚಕ್ರ ವಾಹನದಲ್ಲಿ ಒಂದು ಏರು ಜಾಗದಲ್ಲಿ ಹೋಗುತ್ತಿದ್ದರು. ಆಗ ಇದ್ದಕ್ಕಿದ್ದಂತೆಯೇ ವಾಹನದ ಹಿಡಿತ ತಪ್ಪಿ ದ್ವಿಚಕ್ರ ವಾಹನ ಉರುಳಿತು ಮತ್ತು ಮಾಮ ಇವರು ರಸ್ತೆಯಲ್ಲಿ ಬಿದ್ದರು. ವಾಹನ ಅವರ ಮೇಲೆಯೇ ಬಿದ್ದಿತು. ಈ ದೃಶ್ಯವನ್ನು ನೋಡಿ ಇತರ ಜನರು ಬಹಳ ಗಾಬರಿಯಾದರು. ಜನರು ಬಂದು ಅವರ ಮೇಲೆ ಬಿದ್ದ ವಾಹನವನ್ನು ಎತ್ತಿದರು ಮತ್ತು ಮಾಮರವರ ಕುಶಲೋಪರಿಯನ್ನು ವಿಚಾರಿಸಿದರು. ಆಗ ಮಾಮ ಇವರು, ”ನನಗೇನೂ ಪೆಟ್ಟಾಗಿಲ್ಲ” ಎಂದು ಹೇಳಿದರು. ಮಾಮ ಇವರಿಗೆ ಏನೂ ಆಗಿರಲಿಲ್ಲ ಮತ್ತು ಕೇವಲ ಅವರ ಬಟ್ಟೆಗಳಿಗೆ ಧೂಳು ಅಂಟಿಕೊಂಡಿತ್ತು. ನಿಜ ಹೇಳಬೇಕೆಂದರೆ ಅದು ದೊಡ್ಡ ಅಪಘಾತವಾಗಿತ್ತು; ಆದರೆ ಮಾಮ ಇವರಿಗೆ ಏನೂ ಆಗಿರಲಿಲ್ಲ. ಆ ಸಮಯದಲ್ಲಿ ‘ಈಶ್ವರ ಯಾವಾಗಲೂ ಜೊತೆಗೆ ಇರುತ್ತಾನೆ ಮತ್ತು ‘ಗುರುದೇವರ ಸಂರಕ್ಷಕ ಕವಚವು ನನ್ನ ಸುತ್ತಲೂ ಇದೆ’’, ಎಂದು ಅನುಭವಿಸಿ ಅವರಿಗೆ ಬಹಳ ಭಾವಜಾಗೃತಿಯಾಗುತ್ತಿತ್ತು.

೩ ಇ. ನದಿಯನ್ನು ದಾಟಿ ಹೋಗುವಾಗ ಸಾಂತಪ್ಪ ಮಾಮ ಇವರು ಇದ್ದಕ್ಕಿದ್ದಂತೆಯೇ ಕೆಳಗೆ ಬೀಳುವುದು, ಆದರೆ ಅವರು ನೀರಿನಲ್ಲಿ ಬೀಳದೇ ಪಕ್ಕದಲ್ಲಿ ಬೀಳುವುದು : ೨೦೨೪ ರ ಗುರುಪೂರ್ಣಿಮೆಯ ಸೇವೆಗೆ ಹೋಗುವಾಗ ಮಾಮ ಇವರು ಒಂದು ನದಿಯನ್ನು ದಾಟಿ ಹೋಗುತ್ತಿದ್ದರು. ಆ ಸಮಯದಲ್ಲಿ ನದಿಯಲ್ಲಿ ನೀರಿತ್ತು. ಆಗ ಇದ್ದಕ್ಕಿಂತೆಯೇ ಮಾಮ ಇವರು ಕೆಳಗೆ ಬಿದ್ದರು; ಆದರೆ ಅವರು ನೀರಿನಲ್ಲಿ ಬೀಳದೇ ಪಕ್ಕಕ್ಕೆ ಬಿದ್ದರು. ಅವರಿಗೆ ಪೆಟ್ಟಾಗಲಿಲ್ಲ. ನೀರಿನಲ್ಲಿ ಬಿದ್ದಿದ್ದರೆ, ಅವರಿಗೆ ಅಪಾಯವಾಗುವ ಸಾಧ್ಯತೆಯಿತ್ತು. ಆಗ ‘ದೇವರು ಸದಾ ನನ್ನ ಜೊತೆಗೇ ಇರುತ್ತಾನೆ ಮತ್ತು ಅವನೇ ನನ್ನ ಕಾಳಜಿ ವಹಿಸುತ್ತಾನೆ’, ಎಂಬ ಅನುಭೂತಿ ಬಂದಿರುವ ಬಗ್ಗೆ ಮಾಮ ಇವರು ಹೇಳಿದರು.

ಸಾಂತಪ್ಪ ಮಾಮ ಇವರು ಮಾತನಾಡುವಾಗ ನನಗೆ ಬಹಳ ಆನಂದವಾಗುತ್ತಿತ್ತು ಮತ್ತು ‘ನಾನು ಚಿಕ್ಕ ಬಾಲಕನೊಂದಿಗೆ ಮಾತನಾಡುತ್ತಿದ್ದೇನೆ’, ಎಂದು ನನಗೆ ಅನಿಸುತ್ತಿತ್ತು.’

ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೩ ವರ್ಷ), ಮಂಗಳೂರು. (೬.೮.೨೦೨೪)

(‘ಈ ಲೇಖನವನ್ನು ಶ್ರೀ. ಸಾಂತಪ್ಪ ಗೌಡ ಇವರು ಸಂತರಾಗುವ ಮೊದಲಿಗೆ ಬರೆದಿದ್ದರಿಂದ ಇಲ್ಲಿ ಅವರ ಹೆಸರಿನ ಮೊದಲು ‘ಪೂಜ್ಯ’ ಎಂದು ಸೇರಿಸಿಲ್ಲ.’ – ಸಂಕಲನಕಾರರು)