
೧. ತ್ರೇತಾಯುಗದ ರಾಮರಾಜ್ಯದಲ್ಲಿ ಎಲ್ಲ ಪ್ರಜೆಗಳು ಸಾತ್ತ್ವಿಕರು ಆಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶಪ್ರಾಯ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ನಿರ್ಮಾಣವಾಗಲಿದೆ.

೨. ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು ! ನಾವು ಸಾಧನೆಯನ್ನು ಮಾಡಿದರೆ ಮಾತ್ರ ಆಪತ್ಕಾಲದಿಂದ ಬದುಕಲು ಸಾಧ್ಯವಿದೆ; ಏಕೆಂದರೆ ಸಾಧಕರ ಮೇಲೆ ದೇವರ ಕೃಪೆಯು ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನವನ್ನು ಮಾಡುತ್ತಿರುವ ಗ್ರಂಥಗಳಿಂದ ಸುಯೋಗ್ಯ, ಸದ್ಯದ ವೈಜ್ಞಾನಿಕ ಯುಗದಲ್ಲಿನ ಪೀಳಿಗೆಗೆ ಸಹಜವಾಗಿ ತಿಳಿಯುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿ ಮತ್ತು ಕಾಲಕ್ಕನುಸಾರ ಆವಶ್ಯಕವಿರುವ ಸಾಧನೆಯ ಜ್ಞಾನ ಸಿಗುತ್ತಿದೆ. ಆದ್ದರಿಂದ ಈ ಗ್ರಂಥಗಳ ಮಹತ್ವವು ಅಸಾಧಾರಣವಾಗಿದೆ.
೩. ಪ್ರತಿಯೊಬ್ಬನ ಪ್ರಕೃತಿ ಮತ್ತು ಆಸಕ್ತಿಗನುಸಾರ ಅವನಿಗೆ ಅಧ್ಯಾತ್ಮದ ಶಿಕ್ಷಣ ದೊರಕಿದರೆ, ಅವನಲ್ಲಿ ಸಾಧನೆಯ ಆಸಕ್ತಿ ಬೇಗ ನಿರ್ಮಾಣವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಗ್ರಂಥಗಳ ಸಂಕಲನವನ್ನು ಮಾಡುತ್ತಿರುವುದರಿಂದ ಆ ಮಾಧ್ಯಮದಿಂದ ಅನೇಕ ಜನರು ತಮ್ಮ ಪ್ರಕೃತಿ ಮತ್ತು ಆಸಕ್ತಿಗನುಸಾರ ಸಾಧನೆಯ ಕಡೆಗೆ ಬೇಗನೇ ಹೊರಳಬಹುದು.
೪. ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯ ಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ದ ವರೆಗೆ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.
ಅದಕ್ಕಾಗಿಯೇ ‘ಈ ಗ್ರಂಥಗಳ ನಿರ್ಮಿತಿಕಾರ್ಯದಲ್ಲಿ ಪಾಲ್ಗೊಳ್ಳುವುದು’, ಈಶ್ವರೀ ಕೃಪೆಯ ಬಹುದೊಡ್ಡ ಪರ್ವವೇ ಆಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡಿದ, ಆದರೆ ಇನ್ನೂ ಪ್ರಕಾಶನವಾಗಬೇಕಾದ ಸುಮಾರು ೫೦೦೦ ಗ್ರಂಥಗಳಿವೆ. ಈ ಗ್ರಂಥಗಳ ಮಾಧ್ಯಮದಿಂದ ಅವುಗಳಲ್ಲಿನ ಜ್ಞಾನವನ್ನು ಆದಷ್ಟು ಬೇಗನೇ ಸಮಾಜದವರೆಗೆ ತಲುಪಿಸುವುದು ಆವಶ್ಯಕವಾಗಿದೆ. ಈ ಗ್ರಂಥಕಾರ್ಯದಲ್ಲಿ ಪಾಲ್ಗೊಂಡು ಎಲ್ಲರೂ ಈ ಅವಕಾಶದ ಲಾಭವನ್ನು ಹೆಚ್ಚೆಚ್ಚು ಪಡೆಯಬೇಕು !
ಗ್ರಂಥ ಸೇವೆಗೆ ಸಂಬಂಧಿಸಿದ ಸಂಕಲನ, ಅನುವಾದ, ಸಂರಚನೆ, ಮುಖಪುಟ-ನಿರ್ಮಿತಿ, ಮುದ್ರಣ ಮುಂತಾದ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಮಾಹಿತಿ ಯನ್ನು ಸನಾತನದ ಜಿಲ್ಲಾಸೇವಕರ ಮೂಲಕ ಕಳುಹಿಸಬೇಕು.
ಸಂಪರ್ಕ : ಸೌ. ಭಾಗ್ಯಶ್ರೀ ಸಾವಂತ,
ವಿ-ಅಂಚೆ : [email protected]
ಅಂಚೆ ವಿಳಾಸ : ‘ಸನಾತನ ಆಶ್ರಮ’, ರಾಮನಾಥಿ, ಫೋಂಡಾ, ಗೋವಾ – ೪೦೩ ೪೦೧.’
– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪೈಕಿ 97 ನಗರಗಳು ಭಾರತದಲ್ಲಿ !
ಆಪತ್ಕಾಲೀನ ಸ್ಥಿತಿ: ಇಂಧನದ ಸುರಕ್ಷತೆ, ಅತ್ಯಾವಶ್ಯಕ ಪೂರೈಕೆ ಮತ್ತು ಇಂಧನದ ಉಳಿತಾಯ !
ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!
ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಮಾಡಿದ ಮನವಿ ಮತ್ತು ಅದರ ಮೇಲೆ ಆಗುವ ವಿದೇಶಿ ವಿನಿಮಯದ ಖರ್ಚು !