ಮುಸಲ್ಮಾನನಿಂದ ಹಿಂದೂ ಯುವತಿಯನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿ ಹತ್ಯೆ ಮಾಡಲು ಯತ್ನ !

ಫೇಸ್ ಬುಕ್ ಮೂಲಕ ಪರಿಚಯ

ನೋಯಡಾ (ಉತ್ತರ ಪ್ರದೇಶ) – ಇಲ್ಲಿ ತಬಿಶ್ ಅಸ್ಗರ್ ಹೆಸರಿನ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾನೆ. ಆನಂತರ ಅವಳಿಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಡ ಹೇರಿದ್ದಾನೆ. ಈ ಹಿಂದೂ ಯುವತಿಯನ್ನು ಬಂಡೆಯಿಂದ ತಳ್ಳಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಕೊನೆಗೆ ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದಾಳೆ. ಆನಂತರ ಪೊಲೀಸರು ಕ್ರಮ ಕೈಗೊಂಡು ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ.

1. ‘ಸುಮಾರು 4 ವರ್ಷಗಳ ಹಿಂದೆ ತಾನು ಫೇಸ್‌ಬುಕ್ ಮೂಲಕ ಯುವಕನೊಬ್ಬನನ್ನು ಸಂಪರ್ಕಿಸಿದ್ದೆ. ಫೇಸ್ ಬುಕ್ ನಲ್ಲಿ ಆತನ ಹೆಸರು ವಿಶಾಲ ಎಂದಿತ್ತು. ಸಂತ್ರಸ್ತೆ ಕೂಡ ಅವನನ್ನು ಭೇಟಿಯಾಗಿದ್ದಳು. ಆ ವೇಳೆ ಆಕೆಗೆ ತನ್ನ ಹೆಸರು ವಿಶಾಲ ರಾಣಾ ಎಂದು ತಾನು ಹಿಂದೂಗಳ ರಾಜಪೂತ ಜಾತಿಗೆ ಸೇರಿದವನೆಂದೂ ಅವಳಿಗೆ ಸುಳ್ಳು ಹೇಳಿ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು.

2. ಫೆಬ್ರವರಿ 22, 2023 ರಂದು, ಸಂತ್ರಸ್ತೆ ಹಿಂದೂ ತರುಣಿ ಮತ್ತು ವಿಶಾಲ ರಾಣಾ ಹಿಂದೂ ಸಂಪ್ರದಾಯಗಳ ಪ್ರಕಾರ ಗಾಜಿಯಾಬಾದ್‌ನಲ್ಲಿ ವಿವಾಹವಾದರು.

3. ಮದುವೆಯಾದ ಕೆಲವು ದಿನಗಳ ನಂತರ ಸಂತ್ರಸ್ತೆಗೆ ತನ್ನ ಗಂಡನ ಹೆಸರು ವಿಶಾಲ ರಾಣಾ ಅಲ್ಲ, ತಬಿಶ್ ಅಸ್ಗರ್ ಎಂದು ತಿಳಿಯಿತು. ಈ ಬಗ್ಗೆ ತರುಣಿಯು ಪ್ರಶ್ನಿಸಿದಾಗ ಭವಿಷ್ಯದ ಭಯವನ್ನು ತೋರಿಸಿ ತಬೀಶನು ಅವಳಿಗೆ ಸುಮ್ಮನಿರಿಸಿದ್ದಾನೆ.

4. ಆನಂತರ ತಬಿಶ್ ಅಸ್ಗರ್ ಸಂತ್ರಸ್ತೆಯ ಮೇಲೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದನು. ಅವನು ಸಂತ್ರಸ್ತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದನು.

5. ತಬಿಶ್ ಸಂತ್ರಸ್ತೆಯನ್ನು ನವೆಂಬರ್ 18, 2024 ರಂದು ಉತ್ತರಾಖಂಡದ ರಾಮನಗರಕ್ಕೆ ಕರೆದೊಯ್ದನು. ಅಲ್ಲಿ ಅವನು ಸಂತ್ರಸ್ತೆಯನ್ನು ಬಂಡೆಯಿಂದ ತಳ್ಳಿ ಕೊಲ್ಲಲು ಪ್ರಯತ್ನಿಸಿದನು.

6. ಪೊಲೀಸರಲ್ಲಿ ನೀಡಿದ ದೂರಿನಲ್ಲಿ ಸಂತ್ರಸ್ತೆಯು ತಬಿಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ‘ತಬಿಶ್ ಇವನ ಸಹೋದರ ವಾಸಿಂ ಅವನನ್ನೂ ಬಂಧಿಸಬೇಕು’, ಎಂದು ಸಂತ್ರಸ್ತೆಯು ಆಗ್ರಹಿಸಿದ್ದಾಳೆ.

ಸಂಪಾದಕೀಯ ನಿಲುವು

ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರೊಂದಿಗೆ ತಮ್ಮನ್ನು ಹಿಂದೂ ಎಂದು ಹೇಳಿಕೊಳ್ಳುವ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಹಿಂದೂ ಯುವತಿಯರು ಮತ್ತು ಅವರ ಪೋಷಕರು ಈ ಬಗ್ಗೆ ಎಚ್ಚರದಿಂದಿರುವುದು ಆವಶ್ಯಕ !