ಪ್ರತಿದಿನ ವ್ಯಾಯಾಮ ಮಾಡುವುದರ ಹಿಂದಿನ ಧ್ಯೇಯವನ್ನು ನಿಶ್ಚಯಿಸಿ !

‘ವ್ಯಾಯಾಮ ಮಾಡುವಾಗ ದೇಹಕ್ಕೆ ಖಂಡಿತ ತೊಂದರೆ ಆಗುತ್ತದೆ; ಆದರೆ ಅದರಿಂದ ಅಪೇಕ್ಷಿತ ಬದಲಾವಣೆಯಾಗಲು ಶರೀರಕ್ಕೆ ಉತ್ತೇಜನವೂ ಸಿಗುತ್ತದೆ, ಉದಾ. ನೀವು ಶಕ್ತಿಯನ್ನು ಹೆಚ್ಚಿಸಲು ವ್ಯಾಯಾಮ ಮಾಡುತ್ತಿದ್ದರೆ, ವ್ಯಾಯಾಮ ಮಾಡಿದರೆ ಶರೀರದಲ್ಲಿನ ಸ್ನಾಯುಗಳು ಶಕ್ತಿಯುತವಾಗಲು ಶರೀರವನ್ನು ಉತ್ತೇಜಿಸುತ್ತದೆ. ನಿಮ್ಮ ಮನಸ್ಸು ವ್ಯಾಯಾಮವನ್ನು ಮಾಡಲು ತಪ್ಪಿಸುತ್ತಿದ್ದರೆ, ನಾವು ಪ್ರತಿದಿನ ವ್ಯಾಯಾಮವನ್ನು ಏಕೆ ಮಾಡಬೇಕು ?’ ಎಂಬುದನ್ನು ಮೊದಲು ನಿರ್ಧರಿಸುವ ಆವಶ್ಯಕತೆಯಿದೆ, ಉದಾ. ಶಕ್ತಿ  ಹೆಚ್ಚಿಸುವುದು, ವೇದನೆಗಳನ್ನು ಕಡಿಮೆ ಮಾಡುವುದು, ಶಾರೀರಿಕ ತೊಂದರೆಗಳನ್ನು ಕಡಿಮೆ ಮಾಡುವುದು, ತೂಕವನ್ನು ಕಡಿಮೆ ಮಾಡುವುದು, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದು, ಮತ್ತು ಉತ್ಸಾಹವನ್ನು ಹೆಚ್ಚಿಸುವುದು ಅಥವಾ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದು ಇತ್ಯಾದಿ ಇವುಗಳಲ್ಲಿ ಯಾವುದಾದರೊಂದು ಧ್ಯೇಯ ನಿಶ್ವಯಿಸಿದರೆ ಅದುವೇ ಪ್ರತಿದಿನ ವ್ಯಾಯಾಮ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಧ್ಯೇಯದ ಧ್ಯಾಸವಿದ್ದರೆ ಕಷ್ಟಗಳ ತೊಂದರೆ ಆಗುವುದಿಲ್ಲ’.

– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೊಪಚಾರ ತಜ್ಞ (ಫಿಸಿಯೋಥೆರಪಿಸ್ಟ್‌), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೮.೨೦೨೪)