ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಚಾಲಕ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆ !

ನವ ದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕೇಂದ್ರ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಕೇಂದ್ರ ಸರಕಾರವೇ ಜಾಗತಿಕ ಅಭಿಪ್ರಾಯವನ್ನು ಸಿದ್ದಪಡಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಸೂಕ್ತ ಪ್ರಯತ್ನಗಳನ್ನು ಮಾಡಬೇಕು. ಅದೇ ಸಮಯದಲ್ಲಿ, ಇದಕ್ಕಾಗಿ ಪರಿಣಾಮಕಾರಿ ಜಾಗತಿಕ ಸಂಸ್ಥೆಗಳ ಸಹಾಯ ಪಡೆಯಬೇಕು. ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ, ಜಾಗತಿಕ ಸಮುದಾಯ ಮತ್ತು ಸಂಸ್ಥೆಗಳು ಬಾಂಗ್ಲಾದೇಶದ ಸಂತ್ರಸ್ತರೊಂದಿಗೆ ನಿಲ್ಲಬೇಕು. ವಿಶ್ವಶಾಂತಿ ಮತ್ತು ಭ್ರಾತೃತ್ವ ಇದಕ್ಕಾಗಿ ಇದು ಅತ್ಯಂತ ಮಹತ್ವದ್ದಾಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಚಾಲಕ ದತ್ತಾತ್ರೇಯ ಹೊಸಬಾಳೆ ಅವರು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಹಿಂದೂಗಳ ನೇತೃತ್ವ ವಹಿಸಿದ್ದ ಚಿನ್ಮಯ್ ಪ್ರಭು ಅವರನ್ನು ಜೈಲಿಗೆ ತಳ್ಳಿದ್ದು ಅನ್ಯಾಯವಾಗಿದ್ದು ಅವರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು, ಮಹಿಳೆಯರು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಕಟ್ಟರವಾದಿಗಳಿಂದ ನಡೆಯುತ್ತಿರುವ ದಾಳಿಗಳು, ಹತ್ಯೆಗಳು, ಲೂಟಿಗಳು ಮತ್ತು ಬೆಂಕಿ ಅವಘಡಗಳಂತಹ ಘಟನೆಗಳು ಹಾಗೆಯೇ ಅಮಾನವೀಯ ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿವೆ. ರಾ.ಸ.ಸಂಘ ಇದನ್ನು ಖಂಡಿಸುತ್ತದೆ, ಎಂದೂ ಅವರು ಹೇಳಿದರು.
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಸಂತ ಕಬೀರನಗರ (ಉತ್ತರ ಪ್ರದೇಶ) ಇಲ್ಲಿ ನಾಸಿರನಿಂದ ಆನಂದನ ಶಿರಚ್ಛೇದ
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack