Demand No Muslims In Holi: ಮಥುರಾದ ಹೋಳಿಯಲ್ಲಿ ಮುಸಲ್ಮಾನರಿಗೆ ನಿಷೇಧ ಹೇರಿ ! – ಸಂತರ ಬೇಡಿಕೆ

ಮಥುರಾದ ಸಂತರು

ಮಥುರಾ (ಉತ್ತರಪ್ರದೇಶ) – ಮಥುರಾದಲ್ಲಿ ಹೋಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೋಳಿಯ ದಿನದಂದು ಬ್ರಜ್‌ನಲ್ಲಿ ಮುಸಲ್ಮಾನರನ್ನು ನಿಷೇಧ ಹೇರಬೇಕೆಂದು ಮಥುರಾದ ಸಂತರು ಒತ್ತಾಯಿಸಿದ್ದಾರೆ. ಸಂತರು ಹೇಳುವ ಪ್ರಕಾರ, ಬ್ರಜ್‌ನ ಹೋಳಿ ಹಬ್ಬವನ್ನು ನೋಡಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರು ಮಥುರಾಕ್ಕೆ ಬರುತ್ತಾರೆ. ಹೋಳಿಯ ದಿನ ಬ್ರಜ್‌ನಲ್ಲಿ ಮುಸಲ್ಮಾನರು ಏಕೆ ಬೇಕು? ಅವರು ಏನು ಮಾಡುತ್ತಾರೆ? ಬ್ರಜ್‌ನಲ್ಲಿ ಪ್ರಯಾಗರಾಜ್‌ನ ಮಹಾಕುಂಭಮೇಳದಂತಹ ಕಾನೂನನ್ನು ಜಾರಿಗೆ ತನ್ನಿ. ಹೋಳಿಯ ಸಂದರ್ಭದಲ್ಲಿ ಮುಸಲ್ಮಾನರು ಇಲ್ಲಿಗೆ ಬರಬಾರದು.

ಭಾಜಪ ಶಾಸಕರ ಬೆಂಬಲ!

ಬಿಹಾರದ ಭಾಜಪ ಶಾಸಕ ಹರಿಭೂಷಣ್ ಠಾಕೂರ

ಸಂತರ ಬೇಡಿಕೆಗೆ ಬಿಹಾರದ ಭಾಜಪ ಶಾಸಕ ಹರಿಭೂಷಣ್ ಠಾಕೂರ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, “ನಮ್ಮ ಸಂಸ್ಕೃತಿಯನ್ನು ನಂಬದವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯಬೇಕು. ‘ಮುಖಕ್ಕೆ ಬಣ್ಣ ಹಚ್ಚಿದರೆ ಅಲ್ಲಾ ಶಿಕ್ಷಿಸುತ್ತಾನೆ’ ಎಂದು ಮದರಸಾಗಳಲ್ಲಿ ಕಲಿಸುವವರು ಬಣ್ಣಗಳ ಹಬ್ಬಕ್ಕೆ ಹೋಗಬಾರದು. ನಮ್ಮ ದೇವರುಗಳನ್ನು ನಂಬದ ಮತ್ತು ನಮ್ಮನ್ನು ದ್ವೇಷಿಸುವ ಮುಸಲ್ಮಾನರು ಸನಾತನ ಸಂಸ್ಕೃತಿಯ ಹಬ್ಬ ನಡೆಯುವ ಸ್ಥಳಗಳಿಗೆ ಹೋಗಬಾರದು” ಎಂದಿದ್ದಾರೆ.

ಬ್ರಜ್‌ ದಲ್ಲಿನ ಹೋಳಿ ಪ್ರಸಿದ್ಧ!

ಬ್ರಜ್‌ದಲ್ಲಿನ ಹೋಳಿ ಹಬ್ಬದಲ್ಲಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಭಕ್ತರು ಭಾಗವಹಿಸುತ್ತಾರೆ. ಇಲ್ಲಿನ ಹೋಳಿ ಹಬ್ಬವು ಕೆಲವು ದಿನಗಳ ಮುಂಚೆಯೇ ಪ್ರಾರಂಭವಾಗುತ್ತದೆ. ಇಲ್ಲಿ ದೊಡ್ಡ ಪ್ರಮಾಣದ ಉತ್ಸಾಹವಿರುತ್ತದೆ. ಹೋಳಿ ಆಡಲು ಜನರು ದೂರದ ಊರುಗಳಿಂದ ಬರುತ್ತಾರೆ. ರಾಧೆಯ ಜನ್ಮಸ್ಥಳವಾದ ಬರ್ಸಾನಾದಿಂದ ಈ ಹೋಳಿ ಪ್ರಾರಂಭವಾಗುತ್ತದೆ. ಬರ್ಸಾನಾದ ಲಠಮಾರ್ ಹೋಳಿಯನ್ನು ಭಗವಾನ್ ಶ್ರೀಕೃಷ್ಣನು ತನ್ನ ಕಾಲದಲ್ಲಿ ಮಾಡಿದ ಲೀಲೆಗಳ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ.

ಮುಸಲ್ಮಾನರ ಉದ್ದೇಶಗಳಿಂದ ನಮಗೆ ಇಂದಿಗೂ ಅಪಾಯ ! – ಧರ್ಮ ರಕ್ಷಾ ಸಂಘ

ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೌರಭ್ ಗೌಡ್ ಅವರು, ಉತ್ತರಪ್ರದೇಶದ ಬರೇಲಿಯ ಇತ್ತೀಚಿನ ಘಟನೆಗಳು ಮುಸಲ್ಮಾನರು ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತೋರಿಸುತ್ತದೆ. ಮಥುರಾ, ವೃಂದಾವನ, ನಂದಗಾಂವ್, ಬರ್ಸಾನಾ, ಗೋಕುಲ್ ಮತ್ತು ದೌಜಿ ಮುಂತಾದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಮುಸಲ್ಮಾನರ ಪ್ರವೇಶವನ್ನು ನಿಷೇಧಿಸಲು ನಾವು ನಿರ್ಧರಿಸಿದ್ದೇವೆ. ಮುಸಲ್ಮಾನರ ಉದ್ದೇಶಗಳಿಂದ ನಮಗೆ ಇನ್ನೂ ಅಪಾಯವಿದೆ. ಅವರು ಅಶಾಂತಿಯನ್ನು ಸೃಷ್ಟಿಸಬಹುದು.

ಬಣ್ಣ ಮತ್ತು ಗುಲಾಲ್ ಅನ್ನು ಮುಸಲ್ಮಾನರು ವಿರೋಧಿಸುವುದರಿಂದ ಅವರನ್ನು ಹೋಳಿಯಿಂದ ದೂರವಿಡಬೇಕು! – ಆಚಾರ್ಯ ಬದ್ರಿಶ

ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಸಂಯೋಜಕ ಆಚಾರ್ಯ ಬದ್ರಿಶ ಅವರು

ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಸಂಯೋಜಕ ಆಚಾರ್ಯ ಬದ್ರಿಶ ಅವರು, ಮಧ್ಯಪ್ರದೇಶ, ಗುಜರಾತ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗರ್ಬಾ ಉತ್ಸವದಲ್ಲಿ ಮುಸಲ್ಮಾನರ ಭಾಗವಹಿಸುವಿಕೆಯ ಮೇಲೆ ನಿರ್ಬಂಧಗಳನ್ನು ಹೇರಿದಂತೆ ಉತ್ತರಪ್ರದೇಶ ಸರಕಾರವೂ ನಿರ್ಬಂಧಗಳನ್ನು ಹೇರಬೇಕು. ಬಣ್ಣ ಮತ್ತು ಗುಲಾಲ್ ಅನ್ನು ಮುಸಲ್ಮಾನರು ವಿರೋಧಿಸುವುದರಿಂದ ಹೋಳಿ ಹಬ್ಬದಲ್ಲಿ ಮುಸಲ್ಮಾನರಿಗೆ ಸ್ಥಳವಿಲ್ಲ. ಅವರನ್ನು ದೂರವಿಡಬೇಕು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಿಂದ ಬರೆದ ಪತ್ರ

ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ದಿನೇಶ್ ಶರ್ಮಾ ಅವರು ತಮ್ಮ ರಕ್ತದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಬ್ರಜ್‌ದಲ್ಲಿನ ಹೋಳಿ ಹಬ್ಬದಲ್ಲಿ ಮುಸಲ್ಮಾನರ ಪ್ರವೇಶವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಮುಸಲ್ಮಾನರು ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗಳ ಮೇಲೆ ಉಗುಳಬಹುದು ಎಂದು ಅವರು ಆರೋಪಿಸಿದ್ದಾರೆ.

ಬ್ರಜ್‌ದಲ್ಲಿ ಹೋಳಿಯನ್ನು ಯಾವಾಗಲೂ ಪ್ರೀತಿ ಮತ್ತು ಶಾಂತಿಯಿಂದ ಆಚರಿಸಲಾಗುತ್ತದೆ! – ಶಾಹಿ ಈದ್ಗಾಹ್ ಇಂತೇಜಾಮಿಯಾ ಸಮಿತಿ

ಶಾಹಿ ಈದ್ಗಾಹ್ ಇಂತೇಜಾಮಿಯಾ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್ ಅವರು ಬ್ರಜ್‌ದಲ್ಲಿ ಹೋಳಿಯನ್ನು ಯಾವಾಗಲೂ ಪ್ರೀತಿ ಮತ್ತು ಶಾಂತಿಯಿಂದ ಆಚರಿಸಲಾಗುತ್ತದೆ. ಯಾವುದೇ ಸಮುದಾಯದಿಂದ ಯಾವುದೇ ದೂರು ಬಂದಿಲ್ಲ. ರಸ್ಖಾನ್ ಮತ್ತು ತಾಜ್ ಬಿಬಿ ಮುಂತಾದ ಮಹಾನ್ ಕೃಷ್ಣ ಭಕ್ತರು ಮುಸಲ್ಮಾನರಾಗಿದ್ದರೂ ಸಹ ಪೂಜ್ಯರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಾಕುಂಭ ಮೇಳದಲ್ಲಿ ಮುಸಲ್ಮಾನರು ಹಿಂದೂ ಯಾತ್ರಿಕರಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸಿದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಇಂತಹ ಬೇಡಿಕೆಗಳು ಕೇಳಿಬರುತ್ತಿರುವುದು ಹಿಂದೂಗಳು ಜಾಗೃತರಾಗುತ್ತಿರುವುದರ ಸಂಕೇತವಾಗಿದೆ. ಇಂತಹ ಬೇಡಿಕೆ ನಾಳೆ ಎಲ್ಲೆಡೆ ಕೇಳಿಬಂದರೆ ಆಶ್ಚರ್ಯಪಡಬೇಕಾಗಿಲ್ಲ!

ಸಮಾಜವಾದಿ ಪಕ್ಷದ ಸಂಸದ ಸನಾತನ ಪಾಂಡೆ ಇವರ ವಿರೋಧ

‘ಸಮಾಜದಲ್ಲಿ ಬಿರುಕು ಮೂಡಿಸುವದಕ್ಕಾಗಿ ಇದೆಲ್ಲವೂ ಸುಯೋಜಿತ ರಾಜಕೀಯ ಕುತಂತ್ರ !’ – ಸಮಾಜವಾದಿ ಪಕ್ಷದ ಸಂಸದ ಸನಾತನ ಪಾಂಡೆ

ಬಲಿಯ (ಉತ್ತರಪ್ರದೇಶ) ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಸನಾತನ ಪಾಂಡೆ ಇವರು ಶ್ರೀಕೃಷ್ಣ ಜನ್ಮ ಭೂಮಿ ಸಂಘರ್ಷ ನ್ಯಾಸದ ಅಧ್ಯಕ್ಷರು ರಕ್ತದಿಂದ ಬರೆದಿರುವ ಪತ್ರದ ಕುರಿತು ಟಿಕೆಸಿದ್ದಾರೆ. ಅವರು, ಸಂವಿಧಾನ ಯಾವುದೇ ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಲು ಅನುಮತಿ ನೀಡುವುದಿಲ್ಲ. (ಹೀಗಿದ್ದರೆ, ಸಂವಿಧಾನದ ಹೆಸರಿನಲ್ಲಿ ಕಳೆದ ೭೭ ವರ್ಷಗಳಲ್ಲಿ ಹಿಂದುಗಳ ಜೊತೆಗೆ ತಾರತಮ್ಯ ಮಾಡಲಾಗುತ್ತಿದೆ, ಇದರ ಬಗ್ಗೆ ಪಾಂಡೆ ಏಕೆ ಮಾತನಾಡುವುದಿಲ್ಲ? – ಸಂಪಾದಕರು) ಭಗವಂತ ಶ್ರೀ ಕೃಷ್ಣ ಪ್ರೀತಿ ಮತ್ತು ಐಕ್ಯತೆಯ ಪ್ರತೀಕವಾಗಿದ್ದಾನೆ, ಅವನು ಎಂದಿಗೂ ದ್ವೇಷದ ಬೀಜ ಬಿತ್ತಿಲ್ಲ. (ಇದನ್ನು ಹೇಳುವ ಬದಲು ಯಾವ ಧರ್ಮದ ಆಧಾರದಲ್ಲಿ ದ್ವೇಷ, ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್, ಉಗುಳು ಜಿಹಾದ್, ಭೂಮಿ ಜಿಹಾದ್ ಮುಂತಾದವು ಮಾಡಲಾಗುತ್ತಿದೆ, ಇದನ್ನು ಪಾಂಡೆ ಇವರು ಹೇಳಬೇಕು ! – ಸಂಪಾದಕರು) ಭಾಜಪ ಅಧಿಕಾರಕ್ಕಾಗಿ ಹಿಂದೂ ಮತ್ತು ಮುಸಲ್ಮಾನರಲ್ಲಿ ಬಿರುಕು ಮೂಡಿಸಲು ಇಚ್ಚಿಸುತ್ತಿದೆ. ಸಮಾಜದಲ್ಲಿ ಬಿರುಕು ಮೂಡಿಸುವುದಕ್ಕಾಗಿ ಇದೆಲ್ಲವು ಸುಯೋಜಿತ ರಾಜಕೀಯ ಷಡ್ಯಂತ್ರ ಆಗಿದೆ, ಎಂದು ಅವರು ಆರೋಪಿಸಿದರು.

ಸಂಪಾದಕೀಯ ನಿಲುವು

‘ಸನಾತನ’ ಹೆಸರಿನಂತೆ ವರ್ತಿಸುವ ಬದಲು ಸನಾತನ ವಿರೋಧಿ ವಿಚಾರ ಮಂಡಿಸುವ ಸಮಾಜವಾದಿ ಪಕ್ಷದ ಸಂಸದ ! ಇಂತಹ ಜನ್ಮ ಹಿಂದೂಗಳಿಂದಲೇ ಹಿಂದೂ ಧರ್ಮಕ್ಕೆ ಇಲ್ಲಿಯವರೆಗೆ ಹಾನಿ ಆಗಿದೆ ಮತ್ತು ಆಗುತ್ತಿದೆ.