‘ಸಂತರು ಮನೆಗೆ ಬಂದರೆ ಅದುವೇ ದೀಪಾವಳಿ-ದಸರಾ’ ಎಂಬ ದಿವ್ಯ ಅನುಭೂತಿ ನೀಡುವ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಸಂತರ ಸನ್ಮಾನದ ಅಭೂತಪೂರ್ವಕ್ಷಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಅಂದರೆ ನಾಮ, ಸತ್ಸಂಗ, ಸೇವೆ, ತ್ಯಾಗ, ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಹಾಗೂ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿ ಸನಾತನದ ೧೨೮ ಸಾಧಕರು ಈಗಾಗಲೇ ಸಂತ ಪದವಿಯನ್ನು ತಲುಪಿದ್ದು ಸಾವಿರಾರು ಸಾಧಕರು ಸಂತ ಪದವಿಯತ್ತ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಅವರೆಲ್ಲರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದಂತಹ ಅಷ್ಟಾಂಗ ಸಾಧನೆಯನ್ನು ಮನಃಪೂರ್ವಕವಾಗಿ ಮಾಡಿ ಈ ಹಂತವನ್ನು ತಲುಪಿದ್ದಾರೆ. ಸಾಧಕರು ಸಾಧನೆಯಲ್ಲಿ ಮಾಡಿದ ಪ್ರಗತಿಯಿಂದ ಗುರುಗಳಿಗೆ ಹೆಚ್ಚು ಆನಂದವಾಗುತ್ತದೆ. ಅವರು ಸಾಧಕರ ಪ್ರಗತಿಯ ಬಗ್ಗೆ ನೀಡಿದ ಸಂದೇಶದಿಂದ ಅದೇ ಆನಂದವು ಗಮನಕ್ಕೆ ಬರುತ್ತದೆ. ಕರ್ನಾಟಕದ ಮೂರು ಮಂದಿ ಸಂತರ ಬಗ್ಗೆ ಗುರುಗಳ ಸಂದೇಶವನ್ನು ಇಲ್ಲಿ ಕೊಡಲಾಗಿದೆ.

‘ಸೇವೆಯ ತೀವ್ರ ತಳಮಳ ಮತ್ತು ಭಾವಸ್ಥಿತಿಯ ಸಾಕಾರಮೂರ್ತಿಯ ಉದಾಹರಣೆಯಾಗಿರುವ’ ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ) ಇಲ್ಲಿನ ಪೂಜ್ಯ ಶ್ರೀ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ)

ಪೂಜ್ಯ ಶ್ರೀ. ಸಾಂತಪ್ಪ ಗೌಡ

‘ಕಳೆದ ೨೩ ವರ್ಷಗಳಿಂದ, ಅಂದರೆ ೨೦೦೧ ನೇ ವರ್ಷದಿಂದ ಶ್ರೀ. ಸಾಂತಪ್ಪ ಗೌಡ (ಮಾಮ) ಇವರು ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆ ಮಾಡುತ್ತಿದ್ದಾರೆ. ಅವರ ವೈಶಿಷ್ಟ್ಯವೆಂದರೆ ಅವರು ಈ ವಯಸ್ಸಿನಲ್ಲಿಯೂ ಪ್ರಸಾರಸೇವೆಗಾಗಿ ಪ್ರತಿದಿನ ಹೊರಗೆ ಹೋಗುತ್ತಾರೆ. ‘ಸೇವೆ’ಯೆಂಬುದು ಸಾಂತಪ್ಪಮಾಮನವರ ಉಸಿರಾದಂತಿದೆ. ಅವರಿಗೆ ಯಾವುದಾದರೂ ದಿನ ಸೇವೆ ಮಾಡಲು ಆಗದಿದ್ದರೆ ಅವರು ಒಳಗಿನಿಂದ ಅಸ್ವಸ್ಥರಾಗುತ್ತಾರೆ. ‘ಸೇವೆಯ ತೀವ್ರ ತಳಮಳ’ ಮತ್ತು ‘ದೇವರ ಮೇಲಿನ ಶ್ರದ್ಧೆ’ ಇವುಗಳಿಂದಾಗಿ ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಅವರ ಸೇವೆಯಲ್ಲಿ ಎಂದಿಗೂ ವ್ಯತ್ಯಯವಾಗುವುದಿಲ್ಲ. ಸಾಂತಪ್ಪಮಾಮನವರಲ್ಲಿ ತುಂಬ ಪ್ರೇಮಭಾವವಿದೆ. ಅವರ ವಾಣಿಯಲ್ಲಿ ಚೈತನ್ಯವಿರುವುದರಿಂದ ಅವರು ಯಾರಿಗೆ ಸಾಧನೆಯ ವಿಷಯ ಹೇಳುತ್ತಾರೋ ಅವರೆಲ್ಲರೂ ಸಾಧನೆ ಮಾಡತೊಡಗುತ್ತಾರೆ. ಮಾಮನವರಿಂದಾಗಿ ಸಾಧಕರ ಸಾಧನೆಯ ಪ್ರಯತ್ನ ಹೆಚ್ಚಾಗಿದೆ. ಕೇವಲ ಸಾಧಕರಷ್ಟೇ ಅಲ್ಲದೇ ಸಮಾಜದಲ್ಲಿಯೂ ಮಾಮಾರವರ ಬಗ್ಗೆ ಗೌರವಭಾವವಿದೆ. ಸಮಾಜದ ವ್ಯಕ್ತಿಗಳೂ ಮಾಮ ಹೇಳಿದ್ದನ್ನು ಕೇಳುತ್ತಾರೆ ಮತ್ತು ಅವರಿಗೆ ಮಾಮನವರ ಬಗ್ಗೆ ಆಧಾರವೂ ಅನಿಸುತ್ತದೆ. ಸನಾತನ ಸಂಸ್ಥೆಯ ಪರಿಚಯವಾದಾಗಿನಿಂದ ‘ಸನಾತನ’ವೇ ನಮ್ಮ ಕುಟುಂಬವಾಗಿದ್ದು ಈಗ ನನಗೆ ದೊಡ್ಡ ಕುಟುಂಬ ಸಿಕ್ಕಿದೆ’, ಎಂದೆನಿಸಿ ಮಾಮನವರಿಗೆ ಭಾವಜಾಗೃತಿಯಾಗುತ್ತದೆ, ಸಾಂತಪ್ಪಮಾಮ ಇವರು ಭಾವಸ್ಥಿತಿಯ ಸಾಕಾರಮೂರ್ತಿಯ ಉದಾಹರಣೆಯಾಗಿದ್ದಾರೆ. ಭಾವದಿಂದಾಗಿ ಅವರಿಗೆ ‘ಈಶ್ವರನು ಸತತ ಜೊತೆಗಿದ್ದಾನೆ’ ಹಾಗೂ ‘ತನ್ನ ಸುತ್ತಲೂ ದೇವರ ರಕ್ಷಣಾಕವಚವಿದೆ’, ಎಂಬಂತಹ ಅನುಭೂತಿ ಬರುತ್ತದೆ. ೨೦೧೫ ನೇ ವರ್ಷದಲ್ಲಿ ಮಾಮನವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದರು, ‘ಸಾಧನೆಯ ತಳಮಳ, ಸತತ ಸೇವಾನಿರತರಾಗಿರುವುದು, ದೇವರ ಮೇಲಿನ ಶ್ರದ್ಧೆ ಮತ್ತು ಭಾವ’ ಈ ಗುಣಗಳಿಂದಾಗಿ ಅವರ ಆಧ್ಯಾತ್ಮಿಕ ಉನ್ನತಿ ಶೀಘ್ರ ಗತಿಯಲ್ಲಿ ಆಗುತ್ತಿದೆ. ೨೦೨೪ ರ ಗುರುಪೂರ್ಣಿಮೆಯಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಇಂದಿನ ಶುಭದಿನದಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ‘ಸಮಷ್ಟಿ ಸಂತ’ರೆಂದು ಸನಾತನದ ೧೨೯ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಪೂ. ಸಾಂತಪ್ಪ ಗೌಡ ಇವರ ಮುಂದಿನ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಲ್ಲಿ ಆಗುವುದು’, ಎಂದು ನನಗೆ ಖಾತ್ರಿ ಇದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೮.೧೧.೨೦೨೪)

‘ಅಧ್ಯಾತ್ಮಪ್ರಸಾರದ ತಳಮಳ ಮತ್ತು ಈಶ್ವರನ ಬಗ್ಗೆ ಸಮರ್ಪಿತ ಭಾವ’ವಿರುವ ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ) ಇಲ್ಲಿನ ಪೂಜ್ಯ ಶ್ರೀಮತಿ ಕಮಲಮ್ಮ (ವಯಸ್ಸು ೮೧ ವರ್ಷ)

ಪೂಜ್ಯ ಶ್ರೀಮತಿ ಕಮಲಮ್ಮ

‘ಶ್ರೀಮತಿ ಕಮಲಮ್ಮ ಇವರ ಆರಂಭಿಕ ಜೀವನ ತುಂಬ ಕಷ್ಟದಿಂದ ಕೂಡಿತ್ತು. ಅವರು ಬೇರೆ ಬೇರೆ ಕೆಲಸಗಳನ್ನು ಮಾಡಿ ಪ್ರಾಪಂಚಿಕ ಕರ್ತವ್ಯಗಳನ್ನು ಪೂರ್ಣ ಮಾಡಿದರು. ಕಳೆದ ೨೦ ವರ್ಷಗಳಿಂದ, ಅಂದರೆ ೨೦೦೪ ನೇ ವರ್ಷದಿಂದ ಅವರು ಸನಾತನದ ಮಾಧ್ಯಮದಿಂದ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ‘ಆಜ್ಞಾಪಾಲನೆ’ ಈ ಮಹತ್ವದ ಗುಣವಿರುವುದರಿಂದ ಸತ್ಸಂಗದಲ್ಲಿ ಏನೆಲ್ಲ ಹೇಳಿದರೋ ಅದನ್ನೆಲ್ಲವನ್ನು ಅವರು ಕೃತಿಯಲ್ಲಿ ತರಲು ಪ್ರಯತ್ನಿಸಿದರು. ಸತ್ಸಂಗದಲ್ಲಿ ಹೇಳಿದಂತೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಮಾಡಿದ್ದರಿಂದ ಅವರಿಗೆ ತುಂಬ ಲಾಭವಾಯಿತು. ಶ್ರೀಮತಿ ಕಮಲಮ್ಮ ಇವರು ಸಾಧಕರನ್ನು ತುಂಬ ಪ್ರೀತಿಸು ತ್ತಾರೆ, ಅವರು ಸಾಧಕರಿಗಾಗಿ ಎಷ್ಟೇ ಕಷ್ಟಗಳನ್ನು ಸಹಿಸಲು ಸಿದ್ಧರಿರುತ್ತಾರೆ. ಅವರಿಗೆ ತಮ್ಮ ಕುಟುಂಬಕ್ಕಿಂತ ಸಾಧಕ-ಕುಟುಂಬವು ಹೆಚ್ಚು ತಮ್ಮದೆಂದು ಅನಿಸುತ್ತದೆ. ಶ್ರೀಮತಿ ಕಮಲಮ್ಮ ‘ತಳಮಳ’ ಈ ಗುಣದ ಸಾಕಾರ ಮೂರ್ತಿಯಾಗಿದ್ದಾರೆ. ಸನಾತನವು ಪ್ರಕಾಶಿಸಿದ ಗ್ರಂಥಗಳು ಸಮಾಜಕ್ಕೆ ತಲುಪಿಸಬೇಕೆಂದು ಅವರು ತಳಮಳದಿಂದ ಪ್ರಯತ್ನಿಸು ತ್ತಾರೆ. ಸಾಧನೆಯಿಂದ ತಮಗೆ ಲಾಭವಾದಂತೆ ಇತರರಿಗೂ ಲಾಭವಾಗಬೇಕೆಂದು ಅವರು ತಮ್ಮನ್ನು ಭೇಟಿಯಾದ ವ್ಯಕ್ತಿಗಳಿಗೆ ಸಾಧನೆಯ ಬಗ್ಗೆ ಮಾಹಿತಿ ಹೇಳುತ್ತಾರೆ. ಈ ರೀತಿಯಲ್ಲಿ ಅವರು ಅಧ್ಯಾತ್ಮಪ್ರಸಾರ ಮಾಡುವ ಪ್ರತಿಯೊಂದು ಅವಕಾಶದ ಲಾಭ ಪಡೆದುಕೊಳ್ಳುತ್ತಾರೆ. ‘ಸದ್ಯ ಅನಾರೋಗ್ಯದಿಂದಾಗಿ ಅವರಿಗೆ ಸೇವೆ ಮಾಡಲು ಆಗುತ್ತಿಲ್ಲ, ಎಂಬ ಬಗ್ಗೆ ಅವರಿಗೆ ಬೇಸರವಾಗುತ್ತದೆ. ಮನೆಯಲ್ಲಿ ಸಾಧನೆಗಾಗಿ ಪೂರಕ ವಾತಾರಣ ಇಲ್ಲದಿದ್ದರೂ ‘ತಳಮಳ, ಅಂತರ್ಮನದ ಸಾಧನೆ ಮತ್ತು ದೇವರ ಬಗ್ಗೆ ಸಮರ್ಪಿತ ಭಾವ’ ಈ ಗುಣಗಳಿಂದಾಗಿ ಕಮಲಮ್ಮ ಇವರ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ. ೨೦೧೪ ನೇ ಇಸವಿಯಲ್ಲಿ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದರು. ೨೦೨೪ ರ ಗುರುಪೂರ್ಣಿಮೆಯಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಇಂದಿನ ಶುಭದಿನದಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಅವರು ‘ವ್ಯಷ್ಟಿ ಸಂತ’ರೆಂದು ಸನಾತನದ ೧೩೦ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಪೂ. ಕಮಲಮ್ಮ ಇವರ ಮುಂದಿನ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಲ್ಲಿ ಆಗುವುದು’ ಎಂದು ನನಗೆ ಖಾತ್ರಿ ಇದೆ.

– ಸಚ್ಚಿದಾನಂದ ಪರಬ್ರಹ್ಮ ಡಾ, ಆಠವಲೆ (೮.೪.೨೦೨೪)

‘ವಾತ್ಸಲ್ಯಭಾವವಿರುವ ಮತ್ತು ದೇವರ ಅಸ್ತಿತ್ವವನ್ನು ಸತತ ಅನುಭವಿಸುವ’ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ) ಇಲ್ಲಿನ ಪೂಜ್ಯ ಸೌ. ಶಶಿಕಲಾ ಕಿಣಿ (ವಯಸ್ಸು ೭೭ ವರ್ಷ)

ಪೂಜ್ಯ ಸೌ. ಶಶಿಕಲಾ ಕಿಣಿ

‘ಕಳೆದ ೨೫ ವರ್ಷಗಳಿಂದ, ಅಂದರೆ ೧೯೯೯ ನೇ ವರ್ಷದಿಂದ ಮಂಗಳೂರಿನ ಸೌ. ಶಶಿಕಲಾ ಕಿಣಿ ಇವರು ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಬಾಲ್ಯದಿಂದಲೇ ಪ್ರಭು ಶ್ರೀರಾಮನ ಮೇಲೆ ಅಪಾರ ಶ್ರದ್ಧೆ ಇತ್ತು. ಹಾಗಾಗಿ ಅವರು ರಾಮನಾಮವನ್ನು ಬರೆಯುತ್ತಿದ್ದರು ಮತ್ತು ಶ್ರೀರಾಮನ ನಾಮಜಪವನ್ನೂ ಮಾಡುತ್ತಿದ್ದರು, ವಿವಾಹದ ನಂತರ ಕರ್ಮಕಾಂಡಾನುಸಾರ ಸಾಧನೆ ಮಾಡುವಾಗ ಅವರು ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ಪ್ರವಚನವನ್ನು ಕೇಳಿದರು ಮತ್ತು ಅವರು ನಿಯಮಿತ ಸತ್ಸಂಗಕ್ಕೆ ಹೋಗತೊಡಗಿದರು. ಅನಂತರ ಅವರು ಒಂದೂ ಸತ್ಸಂಗವನ್ನು ತಪ್ಪಿಸಲಿಲ್ಲ. ಸತ್ಸಂಗದಲ್ಲಿ ಹೇಳಿದ ಎಲ್ಲ ಪ್ರಯತ್ನಗಳನ್ನು ಅವರು ಆಚರಣೆಯಲ್ಲಿ ತರಲು ಪ್ರಯತ್ನಿಸತೊಡಗಿದರು. ಅನಂತರ ಅವರ ಮನಸ್ಸಿನಲ್ಲಿ ಸೇವೆಯ ಆಸಕ್ತಿಯೂ ನಿರ್ಮಾಣವಾಗತೊಡಗಿತು. ಸದ್ಯ ಶಾರೀರಿಕ ತೊಂದರೆಯಿಂದಾಗಿ ಅವರಿಗೆ ಸೇವೆ ಮಾಡಲು ಆಗುತ್ತಿಲ್ಲ. ಅದರ ಬಗ್ಗೆ ಅವರಿಗೆ ತುಂಬ ಖೇದ ಅನಿಸುತ್ತದೆ, ಸೌ. ಕಿಣಿಯವರಿಗೆ ಎಲ್ಲ ಸಾಧಕರ ಬಗ್ಗೆ ತುಂಬ ಪ್ರೀತಿ ಅನಿಸುತ್ತದೆ. ‘ಸನಾತನದ ಎಲ್ಲ ಸಾಧಕರು ನನ್ನ ಮಕ್ಕಳಿದ್ದಾರೆ’, ಎಂಬ ವಾತ್ಸಲ್ಯಭಾವ ಅವರ ಮನಸ್ಸಿನಲ್ಲಿರುತ್ತದೆ, ಈ ಭಾವದಿಂದಾಗಿ ಅವರು ಸಾಧಕರ ಬಗ್ಗೆ ಮನಃಪೂರ್ವಕವಾಗಿ ಕಾಳಜಿ ವಹಿಸುತ್ತಾರೆ. ಸೌ. ಕಿಣಿಯವರು ಸತತ ದೇವರ ಅನುಸಂಧಾನದಲ್ಲಿರುತ್ತಾರೆ. ಅವರಿಗೆ ಹೆಜ್ಜೆ ಹೆಜ್ಜೆಗೂ ಭಗವಾನ ಶ್ರೀಕೃಷ್ಣನ ಅಸ್ತಿತ್ವದ ಅರಿವಾಗುತ್ತದೆ ಮತ್ತು ‘ಶ್ರೀಕೃಷ್ಣನು ತಮ್ಮೊಂದಿಗೆ ಇದ್ದಾನೆ’, ಎಂಬ ಅನುಭೂತಿ ಬರುತ್ತದೆ. ಸೌ. ಕಿಣಿ ಇವರು ೨೦೧೫ ನೇ ಇಸವಿಯಲ್ಲಿ ಶೇ, ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು. ೨೦೨೪ ರ ಗುರುಪೂರ್ಣಿಮೆ ಯಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಇಂದಿನ ಶುಭದಿನದಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಅವರು ‘ವ್ಯಷ್ಟಿ ಸಂತ’ರೆಂದು ಸನಾತನದ ೧೩೧ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಪೂ. (ಸೌ.) ಶಶಿಕಲಾ ಕಿಣಿ ಇವರ ಮುಂದಿನ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಲ್ಲಿ ಆಗುವುದು’ ಎಂದು ನನಗೆ ಖಾತ್ರಿ ಇದೆ.

– ಸಚ್ಚಿದಾನಂದ ಪರಬ್ರಹ್ಮ ಡಾ, ಆಠವಲೆ (೮.೪.೨೦೨೪)

ಸನ್ಮಾನ ಸಮಾರಂಭದ ಆರಂಭದ ಕ್ಷಣಗಳು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರವರಿಗೆ ಈ ಕಾರ್ಯಕ್ರಮದಲ್ಲಿ ಚೈತನ್ಯದ ಅನುಭೂತಿ ಬರುತ್ತಿತ್ತು. ಇದು ಭಗವಂತನು ಏನು ಆನಂದ ನೀಡಲಿದ್ದಾನೆ ಎಂಬ ಉಪಸ್ಥಿತರ ಕುತೂಹಲ ಮುಗಿಲು ಮುಟ್ಟಿತು. ಆರಂಭದಲ್ಲಿ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡುತ್ತಾ, ಸನಾತನ ಸಂಸ್ಥೆಯ ಸಾಧಕರು ಕಳೆದ ೨೫ ವರ್ಷಗಳಲ್ಲಿ ಸಾಧನೆ ಮಾಡಿ ಹೇಗೆ ಪ್ರಗತಿ ಮಾಡಿಕೊಂಡರು ಎಂಬ ಬಗ್ಗೆ ತಿಳಿಸಿದರು. ಅನಂತರ ಸನಾತನದ ಸಾಧಕರಾದ ಶೇ. ೬೪ ಮಟ್ಟದ ಸೌ. ಲಕ್ಷ್ಮಿ ಪೈ, ಶೇ. ೬೩ ಮಟ್ಟದ ಶ್ರೀ. ವಿನೋದ ಕಾಮತ ಹಾಗೂ ಶೇ. ೬೩ ಮಟ್ಟದ ಶ್ರೀಮತಿ ಅಶ್ವಿನಿ ಪ್ರಭು ಇವರು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ತಮಗಾದ ಅನುಭವಗಳ ಬಗ್ಗೆ ಮನೋಗತವನ್ನು ತಿಳಿಸಿದರು.

ಹೀಗಾಯಿತು ಸಂತರ ಘೋಷಣೆಯ ಕ್ಷಣ

ಪೂ. ಸಾಂತಪ್ಪ ಗೌಡ ಇವರನ್ನು ಸನ್ಮಾನ ಮಾಡುತ್ತಿರುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

೧. ಸಾಧಕರು ಮನೋಗತವನ್ನು ವ್ಯಕ್ತಪಡಿಸಿದ ನಂತರ ಪೂ. ರಮಾನಂದ ಅಣ್ಣನವರು ಶ್ರೀ. ಸಾಂತಪ್ಪ ಗೌಡ ಇವರಿಗೂ ತಮ್ಮ ಮನೋಗತವನ್ನು ವ್ಯಕ್ತಪಡಿಸುವಂತೆ ತಿಳಿಸಿದರು. ಆಗ ಶ್ರೀ. ಸಾಂತಪ್ಪ ಗೌಡರ ಜೊತೆಗೆ ಅನೌಪಚಾರಿಕವಾಗಿ ಮಾತನಾಡುತ್ತಾ ಪೂ. ರಮಾನಂದ ಗೌಡ ಇವರು ಅವರ ಸಮಷ್ಟಿಯ ಗುಣವೈಶಿಷ್ಟ್ಯಗಳನ್ನು ಸಭೆಗೆ ಪರಿಚಯಿಸಿದರು. ಆ ಕ್ಷಣದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀ. ಸಾಂತಪ್ಪ ಗೌಡ ಇವರ ಬಗ್ಗೆ ನೀಡಿದ ಸಂದೇಶವನ್ನು ಓದಿ ಹೇಳುತ್ತಾ ಅವರು ೧೨೯ ನೇ ಸಮಷ್ಟಿ ಸಂತರಾಗಿರುವುದಾಗಿ ಘೋಷಿಸಿದರು.

ಪೂ. ಶ್ರೀಮತಿ ಕಮಲಮ್ಮ ಇವರನ್ನು ಸನ್ಮಾನ ಮಾಡುತ್ತಿರುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

೨. ಅನಂತರ ಶ್ರೀಮತಿ ಕಮಲಮ್ಮ ಇವರ ಛಾಯಾಚಿತ್ರದ ಸೂಕ್ಷ್ಮಪರೀಕ್ಷೆ ಮಾಡಿ ಅದನ್ನು ನೋಡಿದಾಗ ಸಾಧಕರಿಗೆ ಏನು ಅನಿಸುತ್ತದೆ ಎಂದು ಕೇಳಲಾಯಿತು. ಆಗ ಸಾಧಕರಿಗೆ ಅದನ್ನು ನೋಡಿ ಭಾವಜಾಗೃತಿಯಾಗುವುದು, ಮುಗ್ಧಭಾವದ ಅರಿವಾಗುವುದು, ದೇವರ-ಸಂತರ ದರ್ಶನವಾಗುವುದು ಮುಂತಾದ ಅನುಭೂತಿಗಳಾದವು. ಅನಂತರ ಪೂ. ರಮಾನಂದ ಅಣ್ಣನವರು ಶ್ರೀಮತಿ ಕಮಲಮ್ಮ ಇವರಿಗೂ ಆ ಛಾಯಾಚಿತ್ರದ ಬಗ್ಗೆ ಹೇಳಲು ತಿಳಿಸಿದರು. ಆಗ ಅವರು ಅದನ್ನು ನೋಡಿ ತುಂಬಾ ಆನಂದವಾಯಿತು ಎಂದು ಹೇಳಿದರು. ಅನಂತರ ಪೂ. ಅಣ್ಣನವರು ಅವರ ಗುಣಗಳನ್ನು ವರ್ಣಿಸಿ ಸಚ್ಚಿದಾನಂದ ಪರಬ್ರಹ್ಮ ಗುರುಗಳು ಶ್ರೀಮತಿ ಕಮಲಮ್ಮ ಇವರ ಬಗ್ಗೆ ಹೇಳಿದ ಸಂದೇಶವಾಚನ ಮಾಡಿ ಸಂತರಾಗಿದ್ದಾರೆಂದು ಘೋಷಿಸಿದರು.

ಪೂ. (ಸೌ.) ಶಶಿಕಲಾ ಕಿಣಿ ಇವರನ್ನು ಸನ್ಮಾನ ಮಾಡುತ್ತಿರುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

೩. ಅನಂತರ ಭಾವಜಾಗೃತಿಯ ಪ್ರಯೋಗವೆಂದು ಸೌ. ಶಶಿಕಲಾ ಕಿಣಿ ಇವರ ಧ್ವನಿಯಲ್ಲಿದ್ದ ‘ಮಾಝಾ ದರುಶನ ದೀ ರೇ ಶ್ರೀ ರಾಮಾ’ (ನನಗೆ ದರ್ಶನವನ್ನು ನೀಡು ಶ್ರೀರಾಮ) ಎಂಬ ಭಜನೆಯ ಆಡಿಯೋವನ್ನು ಕೇಳಿಸಿ ಏನು ಅನಿಸಿತು ಎಂದು ಸಾಧಕರಿಗೆ ಕೇಳಲಾಯಿತು. ಸಾಧಕರಿಗೆ ಶಬರಿಯು ಶ್ರೀರಾಮನಿಗಾಗಿ ಕಾಯುತ್ತಾ ಹಾಡುತ್ತಿರುವಂತಹ ಅನುಭವ ವಾಯಿತು. ಹೆಚ್ಚಿನ ಸಾಧಕರಿಗೆ ಭಾವಜಾಗೃತಿಯಾಯಿತು. ನಂತರ ಸೌ. ಶಶಿಕಲಾ ಕಿಣಿಯವರಿಗೂ ಅದರ ಬಗ್ಗೆ ಹೇಳಲು ವ್ಯಾಸಪೀಠಕ್ಕೆ ಕರೆಯಲಾಯಿತು. ಅನಂತರ ಪೂ. ಅಣ್ಣನವರು ಶಶಿಕಲಾ ಕಿಣಿಯವರ ಸೇವಾಭಾವ, ತಳಮಳ, ಸಾಧಕರ ಕುರಿತಾದ ಪ್ರೇಮಭಾವ ಇತ್ಯಾದಿ ಗುಣಗಳನ್ನು ವರ್ಣಿಸುತ್ತಾ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನೀಡಿದ ಸಂದೇಶವಾಚನ ಮಾಡಿ ಸಂತರಾದ ಬಗ್ಗೆ ಘೋಷಿಸಿದರು.

ಸಂತರ ಮಾರ್ಗದರ್ಶನ ಮತ್ತು ಮನೋಗತ

ಪೂ. ಸಾಂತಪ್ಪ ಗೌಡ

ಇಂದು ಗುರುಗಳು ಒಂದು ಫಲವನ್ನು ನೀಡಿದ್ದಾರೆ. ಇದಕ್ಕಾಗಿ ನನಗೆ ಬಹಳ ಆನಂದವೆನಿಸುತ್ತಿದೆ. ಶರೀರ ಬಹಳ ಹಗುರ ಅನಿಸುತ್ತದೆ. ಸಮಷ್ಟಿ ಸೇವೆ ಮಾಡಿದರೆ ಗುರುಗಳು ಜನ್ಮಮೃತ್ಯು ಚಕ್ರದಿಂದ ಬಿಡುಗಡೆ ಮಾಡಿ ಮೋಕ್ಷಪ್ರಾಪ್ತಿ ಮಾಡಿಸುತ್ತಾರೆ. ಅದಕ್ಕಾಗಿ ನಾವು ನಾಮಜಪ, ಪ್ರಾರ್ಥನೆ, ಉಪಾಯ, ಕೃತಜ್ಞತೆಯನ್ನು ಸತತ ಮಾಡುತ್ತಿರಬೇಕು. ಆಧ್ಯಾತ್ಮಿಕ ಉಪಾಯಗಳನ್ನು ಮಾಡದಿದ್ದರೆ ಜಡತ್ವ ಬರುತ್ತದೆ ಮತ್ತು ಬಹಿರ್ಮುಖತೆ ಹೆಚ್ಚಾಗುತ್ತದೆ ನಮ್ಮ ಇಚ್ಛೆಗಳು ಹೆಚ್ಚಾಗುತ್ತವೆ. ನಮ್ಮಲ್ಲಿ ಅಂತರ್ಮುಖತೆ ಬರಬೇಕು, ಅದಕ್ಕಾಗಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗಾಗಿ ಗುರುಗಳು ಹೇಳಿದ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಬೇಕು. ನಮಗೆ ಆನಂದ ಬೇಕಾದರೆ ಸಾಧನೆ ಮತ್ತು ಧರ್ಮಾಚರಣೆ ಹಾಗೂ ಸೇವೆ ಮಾಡಬೇಕು.

ಪೂಜ್ಯ ಶ್ರೀಮತಿ ಕಮಲಮ್ಮ

ನನ್ನ ಅಂತಃಕರಣದ ವಿಚಾರ ಗುರುಗಳಿಗೆ ತಲುಪಿತು ಎಂದು ಇವತ್ತು ದೃಢವಾಯಿತು ಮತ್ತು ಆನಂದವಾಯಿತು. ಜೀವನದ ಎಲ್ಲ ಸಮಸ್ಯೆಗಳನ್ನು ಗುರುಗಳು ದೂರ ಮಾಡಿದ್ದಾರೆ. ಮನೆಮನೆಗೆ ಹೋಗಿ ಗುರುದೇವರ ಗ್ರಂಥ ವಿತರಣೆ ಮಾಡಬೇಕು, ಗುರುಗಳಿಗಾಗಿ ಅರ್ಪಣೆ ಸಂಗ್ರಹ ಮಾಡಿ ಗುರುಗಳ ಮನಸ್ಸನ್ನು ಗೆಲ್ಲಬೇಕು.

ಪೂಜ್ಯ ಸೌ. ಶಶಿಕಲಾ ಕಿಣಿ

ಸನಾತನ ಸಂಸ್ಥೆಯಲ್ಲಿ ಸೇರಿಸಿಕೊಂಡು ಸಾಧನೆ ಮಾಡಿಸಿ ಗುರು ದೇವರು ಇಷ್ಟು ಪ್ರಗತಿ ಮಾಡಿಸಿ ಮುಂದೆ ಕರೆದುಕೊಂಡು ಬಂದಿದ್ದಕ್ಕೆ ನಾನು ಚಿರಋಣಿ ಆಗಿದ್ದೇನೆ. ಇನ್ನು ಮುಂದೆ ಕೂಡ ಗುರುದೇವರೇ ನನ್ನಿಂದ ಎಲ್ಲವನ್ನೂ ಮಾಡಿಸಿಕೊಳ್ಳಬೇಕು ಎಂದು ಅವರ ಚರಣಗಳಲ್ಲಿ ಕೋಟಿಕೋಟಿ ಪ್ರಾರ್ಥನೆಯನ್ನು ಮಾಡುತ್ತಾ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಗಮನಾರ್ಹ ಅಂಶಗಳು

  • ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರನ್ನು ಈ ಸಮಯದಲ್ಲಿ ಪೂ. ರಮಾನಂದ ಗೌಡ ಇವರ ಹಸ್ತದಿಂದ ಸತ್ಕರಿಸಲಾಯಿತು. ಸಭಾಗೃಹವನ್ನು ಹೂವು, ರಂಗೋಲಿಗಳಿಂದ ಶೃಂಗರಿಸಲಾಗಿತ್ತು.
  • ಈ ಸಮಯದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ. ವಿನಾಯಕ ಕರ್ವೆ, ಪೂ. ಶ್ರೀಮತಿ ರಾಧಾ ಪ್ರಭು ಹಾಗೂ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರು ಉಪಸ್ಥಿತರಿದ್ದರು.
  • ಸಭಾಗೃಹದ ವಾತಾವರಣವು ಅತ್ಯಂತ ಚೈತನ್ಯಮಯವಾಗಿತ್ತು.