‘ನಾನು ಸನಾತನ ಸಂಸ್ಥೆಗೆ ಬಂದಾಗಿನಿಂದ ನನಗೆ ಪೂ. ಶಿವಾಜಿ ವಟಕರ ಇವರ ಒಡನಾಟ ಸಿಕ್ಕಿದೆ. ಸಂತರಾಗುವ ಮೊದಲು ಮತ್ತು ಸಂತರಾದ ಬಳಿಕ ಪೂ. ವಟಕರ ಕಾಕಾ ಹೇಗಿದ್ದರು ಎಂಬುದು ನನಗೆ ಹತ್ತಿರದಿಂದ ಕಲಿಯಲು ಸಾಧ್ಯವಾಯಿತು. ನಿಜ ಹೇಳಬೇಕೆಂದರೆ ‘ಸಂತರ ಅಂತರಂಗದಲ್ಲಿ ಸಾಧನೆಯ ಪ್ರವಾಸ ಹೇಗಿರುತ್ತದೆ ?’, ಎಂಬುದು ತಿಳಿಯಲು ನನ್ನಂತಹ ಸಾಮಾನ್ಯ ಜೀವಕ್ಕೆ ಸಾಧ್ಯವಿಲ್ಲ; ಆದರೆ ಪೂ. ಕಾಕಾರವರು ಎಲ್ಲರೊಂದಿಗೆ ಸಾಧನೆ ಮತ್ತು ಅಧ್ಯಾತ್ಮದ ಬಗ್ಗೆ ಮನಮುಕ್ತತೆಯಿಂದ ಮತ್ತು ಆತ್ಮೀಯತೆಯಿಂದ ಮಾತನಾಡು ತ್ತಾರೆ. ಆದ್ದರಿಂದ ನನಗೆ ತುಂಬಾ ಕಲಿಯಲು ಸಿಗುತ್ತದೆ. ಗುರುದೇವರ ಕೃಪೆಯಿಂದ ಪೂ. ವಟಕರಕಾಕಾರವರಿಂದ ಕಲಿಯಲು ಸಿಕ್ಕಿರುವುದನ್ನು ಗುರುದೇವರ ಚರಣಗಳಲ್ಲಿ ಕೃತಜ್ಞತಾಭಾವದಿಂದ ಅರ್ಪಿಸುತ್ತೇನೆ.
ನನಗೆ ಕೆಲವು ವರ್ಷಗಳಿಂದ ಪೂ. ಶಿವಾಜಿ ವಟಕರ ಇವರ ಬಗ್ಗೆ ಏನಾದರೂ ಲೇಖನವನ್ನು ಬರೆಯಬೇಕು, ಎಂದೆನಿಸುತ್ತಿತ್ತು; ಆದರೆ ಅವರು ದೇವದ ಆಶ್ರಮದಲ್ಲಿ ಮತ್ತು ನಾನು ರಾಮನಾಥಿಯ ಆಶ್ರಮದಲ್ಲಿರುವುದರಿಂದ ನನಗೆ ಲೇಖನವನ್ನು ಬರೆಯಲು ಸಾಧ್ಯವಾಗಲಿಲ್ಲ. ಒಂದು ರೀತಿಯಿಂದ ಅದು ಒಳ್ಳೆಯದೇ ಆಯಿತು; ಏಕೆಂದರೆ ವೈದ್ಯೆ (ಸುಶ್ರೀ (ಕು.)) ಮಾಯಾ ಪಾಟೀಲ ಇವರಷ್ಟು ಒಳ್ಳೆಯ ಲೇಖನವನ್ನು ನನಗೆ ಬರೆಯಲು ಬರುತ್ತಿರಲಿಲ್ಲ. ಅವರ ಈ ಅತ್ಯುತ್ತಮ ಲೇಖನದ ಬಗ್ಗೆ ಅವರನ್ನು ಎಷ್ಟು ಪ್ರಶಂಸೆ ಮಾಡಿದರೂ ಅದು ಕಡಿಮೆಯೇ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಪೂ. ಶಿವಾಜಿ ವಟಕರ ಇವರ ಭಾವದ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ ಆಗುತ್ತವೆ, ಅವರ ಕಾರ್ಯವು ಅಷ್ಟೊಂದು ಅತ್ಯುತ್ತಮವಾಗಿದೆ. ಸನಾತನ ಸಂಸ್ಥೆಯಲ್ಲಿ ಪೂ. ವಟಕರ ಇವರಂತಹ ಸಂತರು ಇರುವುದರಿಂದ ‘ಭವಿಷ್ಯಕಾಲದಲ್ಲಿ ಸನಾತನದ ಕಾರ್ಯವು ಹೇಗಾಗುವುದು’, ಎಂಬುದರ ಬಗ್ಗೆ ನನಗೆ ಸ್ವಲ್ಪವೂ ಚಿಂತೆ ಇಲ್ಲ. ಅದಕ್ಕಾಗಿ ನನಗೆ ಅನಿಸುತ್ತಿರುವ ವಿಚಾರಗಳನ್ನು ನಾನು ವ್ಯಕ್ತ ಮಾಡಲು ಸಾಧ್ಯವಿಲ್ಲ. ಧನ್ಯವಾದಗಳು ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ |
೧. ಸಂತಪದವಿಯನ್ನು ತಲುಪಿದ ನಂತರ ಮತ್ತು ವಯಸ್ಸಾದ ನಂತರವೂ ವ್ಯಷ್ಟಿ ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವಿರುವ ಪೂ. ವಟಕರಕಾಕಾ !
ಪೂ. ವಟಕರಕಾಕಾ ಇವರು ಮೊದಲಿನಿಂದಲೂ ಬೆಳಗ್ಗೆ ಬೇಗ ಎದ್ದು ವ್ಯಷ್ಟಿ ಸಾಧನೆಯ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಸಂತರಾಗಿದ್ದರೂ ‘ನಾಮಜಪಾದಿ ಉಪಾಯಗಳನ್ನು ಮಾಡುವುದು, ಪ್ರತಿದಿನ ಸ್ವಭಾವದೋಷ ನಿರ್ಮೂಲನೆಯ ತಖ್ತೆಯಲ್ಲಿ ತಪ್ಪುಗಳನ್ನು ಬರೆಯುವುದು, ಸ್ವಯಂಸೂಚನೆ ತೆಗೆದುಕೊಳ್ಳುವುದು, ಗುಣವೃದ್ಧಿಯ ಮತ್ತು ಭಾವಜಾಗೃತಿಯ ಪ್ರಯತ್ನ ಮಾಡುವುದು’, ಇತ್ಯಾದಿ ಕೃತಿಗಳನ್ನು ಸತತವಾಗಿ ಮಾಡುತ್ತಾರೆ.
ಅವರು ಪ್ರತಿವಾರ ‘ಸಂತರ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ’ ದಲ್ಲಿ ತಮ್ಮಿಂದಾದ ತಪ್ಪುಗಳನ್ನು ‘ಆತ್ಮನಿವೇದನೆ’ಯ ಭಾವದಿಂದ ಹೇಳುತ್ತಾರೆ. ಅವರು ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನ, ಸಾಧಕರಿಗಾಗಿ ಸೂಚನೆ, ಆಧ್ಯಾತ್ಮಿಕ ಗ್ರಂಥ ಇತ್ಯಾದಿಗಳಲ್ಲಿನ ವ್ಯಷ್ಟಿ ಸಾಧನೆಯ ಬಗೆಗಿನ ಅಂಶಗಳ ಅಧ್ಯಯನ ಮಾಡುತ್ತಾರೆ. ಅದಕ್ಕನುಸಾರ ಸ್ವತಃ ಪ್ರಯೋಗ ಮಾಡಿ ಕಲಿತಿರುವ ಮತ್ತು ಅನುಭವಿಸಿದ ಸಾಧನೆಯ ಪ್ರಯತ್ನಗಳನ್ನು ಸಹಸಾಧಕರಿಗೂ ಹೇಳುತ್ತಾರೆ.
೨. ತಪ್ಪುಗಳ ಬಗ್ಗೆ ಗಾಂಭೀರ್ಯ ಮತ್ತು ಸಂವೇದನಶೀಲರಾಗಿರುವುದು
ಪೂ. ವಟಕರಕಾಕಾ ಇವರಿಗೆ ತಮ್ಮಿಂದಾದ ತಪ್ಪುಗಳನ್ನು ಇತರ ಸಾಧಕರ ಮುಂದೆ ಹೇಳಲು ಕಡಿಮೆತನ ಅನಿಸುವುದಿಲ್ಲ. ಯಾವುದೇ ಸೇವೆ ಮಾಡಿದ ನಂತರ ಅಥವಾ ಯಾವುದೇ ಪ್ರಸಂಗ ಘಟಿಸಿದ ನಂತರ ಅವರು ತಮ್ಮ ತಪ್ಪುಗಳನ್ನು ಪ್ರಾಮಾಣಿಕವಾಗಿ ಮತ್ತು ಮನಮುಕ್ತವಾಗಿ ಸಂಬಂಧಪಟ್ಟ ಸಾಧಕರಿಗೆ ಹೇಳುತ್ತಾರೆ. ‘ನಾನು ಒಬ್ಬ ಸಾಮಾನ್ಯ ಸಾಧಕನಿದ್ದೇನೆ, ನನ್ನಿಂದ ತುಂಬಾ ತಪ್ಪುಗಳಾಗುತ್ತವೆ’, ಹೀಗೆ ಅವರ ಭಾವವಿರುತ್ತದೆ. ಅವರು ಕಲಿಯುವ ಸ್ಥಿತಿಯಲ್ಲಿದ್ದು ಸಹಸಾಧಕರಲ್ಲಿಯೂ ತಮ್ಮ ತಪ್ಪು ಗಳನ್ನು ಸಹಜವಾಗಿ ಕೇಳುತ್ತಾರೆ. ‘ಇಷ್ಟು ಸಣ್ಣತನವನ್ನು ತೆಗೆದು ಕೊಂಡು ತಪ್ಪುಗಳನ್ನು ಕೇಳಲು ಕೇವಲ ಸಂತರಿಂದ ಮಾತ್ರ ಸಾಧ್ಯ’, ಇದು ಅವರ ಕೃತಿಯಿಂದ ನನಗೆ ಅರಿವಾಯಿತು. ಪೂ. ಕಾಕಾರವರಿಂದ ತಪ್ಪುಗಳಾದರೆ ಅವರಿಗೆ ತುಂಬಾ ಖೇದವೆನಿಸಿ ಪಶ್ಚಾತ್ತಾಪವಾಗುತ್ತದೆ.
೩. ಸಾಧಕರ ಸಾಧನೆ ಮತ್ತು ಗುರುಕಾರ್ಯದ ಬಗೆಗಿನ ತಳಮಳ
೩ ಅ. ‘ಸಾಧನೆಯಲ್ಲಿ ಹಾನಿಯಾಗಬಾರದು’, ಎಂಬ ಉದ್ದೇಶದಿಂದ ಸಾಧಕರಿಗೆ ತತ್ತ್ವನಿಷ್ಠೆಯಿಂದ ತಪ್ಪುಗಳನ್ನು ಹೇಳುವುದು : ಪೂ. ಕಾಕಾರವರು ಸಹಾಯ ಮಾಡುವ ದೃಷ್ಟಿಯಿಂದ ಸಾಧಕರ ನಿರೀಕ್ಷಣೆ ಮಾಡುತ್ತಾರೆ ಮತ್ತು ಗಮನಕ್ಕೆ ಬಂದ ಅವರ ತಪ್ಪುಗಳನ್ನು ಸಹಜವಾಗಿ ಮತ್ತು ತತ್ತ್ವನಿಷ್ಠೆಯಿಂದ ಹೇಳುತ್ತಾರೆ. ‘ತಪ್ಪುಗಳಾಗಿರುವುದರಿಂದ ಸಾಧಕರಿಗೆ ಪಾಪ ತಟ್ಟಬಾರದು, ಹಾಗೆಯೇ ಸಾಧಕರಿಗೆ ಸಾಧನೆಯ ಮತ್ತು ಗುರುಕಾರ್ಯದ ಹಾನಿಯಾಗಬಾರದು’, ಎಂಬ ಭಾವ ಅವರಲ್ಲಿರುತ್ತದೆ.
೩ ಆ. ಸಾಧಕರಿಗೆ ದೈನಿಕ ‘ಸನಾತನ ಪ್ರಭಾತ’ದಲ್ಲಿನ ತಪ್ಪುಗಳನ್ನು ಹೇಳುವುದು : ಪೂ. ಕಾಕಾ ಇವರಿಗೆ ದೈನಿಕ ‘ಸನಾತನ ಪ್ರಭಾತ’ ವನ್ನು ಓದುವಾಗ ಕೆಲವು ತಪ್ಪುಗಳು ಗಮನಕ್ಕೆ ಬರುತ್ತವೆ. ಲೇಖನ, ಶುದ್ಧಲೇಖನ, ವ್ಯಾಕರಣ, ಸಂಕಲನ ಅಥವಾ ಛಾಯಾಚಿತ್ರಗಳ ಬಗೆಗಿನ ತಪ್ಪುಗಳನ್ನು ಹೇಳುತ್ತಾರೆ. ಕಳೆದ ೫ ವರ್ಷಗಳಿಂದ ಅವರು ದೈನಿಕಕ್ಕೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರಿಗೆ ಈ ತಪ್ಪುಗಳನ್ನು ಹೇಳುತ್ತಿದ್ದಾರೆ. ತಪ್ಪುಗಳನ್ನು ಹೇಳುವಾಗ ಅವರಲ್ಲಿ ಎಲ್ಲಿಯೂ ಅಹಂಭಾವ ಅರಿವಾಗುವುದಿಲ್ಲ. ಅವರು ಸತತವಾಗಿ ಕಲಿಯುವ ಸ್ಥಿತಿಯಲ್ಲಿದ್ದು ತಪ್ಪುಗಳನ್ನು ಹೇಳುತ್ತಾರೆ.
೪. ಕೌಟುಂಬಿಕ ಸಮಸ್ಯೆಗಳ ಕಡೆಗೆ ಸಾಕ್ಷೀಭಾವದಿಂದ ನೋಡುವುದು ಮತ್ತು ಮಾಯೆಯಲ್ಲಿನ ವಿಷಯಗಳನ್ನು ತ್ಯಜಿಸಿ ಆಶ್ರಮದಲ್ಲಿರುವಾಗ ‘ಆಶ್ರಮದಲ್ಲಿನ ಸಾಧಕರೇ ನಿಜವಾದ ಕುಟುಂಬರಾಗಿದ್ದಾರೆ’, ಎಂಬ ಭಾವವನ್ನು ಇಡುವುದು
ಪೂ. ಕಾಕಾರವರಿಗೆ ಕೆಲವು ಗಂಭೀರ ಕೌಟುಂಬಿಕ ಸಮಸ್ಯೆಗಳಿವೆ. ಅವರು ಅವುಗಳತ್ತ ಸಾಕ್ಷಿಭಾವದಿಂದ ನೋಡುತ್ತಾರೆ. ಅವರು ಕುಟುಂಬದವರಿಗೆ ಅಗತ್ಯವಿದ್ದಷ್ಟು ಎಲ್ಲ ಸಹಾಯವನ್ನು ಮಾಡುತ್ತಾರೆ; ಆದರೆ ಅವರಲ್ಲಿ ಸಿಲುಕುವುದಿಲ್ಲ. ‘ಗುರುದೇವರೇ ಕುಟುಂಬದವರ ಕಾಳಜಿ ವಹಿಸುತ್ತಿದ್ದಾರೆ’, ಎಂಬ ಭಾವವಿರುತ್ತದೆ. – ವೈದ್ಯೆ ಸುಶ್ರೀ (ಕು.) ಮಾಯಾ ಪಾಟೀಲ ಆಶ್ರಮದಿಂದ ಒಂದು ಗಂಟೆಯ ದೂರವಿರುವ ಮುಂಬೈಯಲ್ಲಿ ಅವರ ಕುಟುಂಬ, ಬಂಗಲೆ ಮತ್ತು ಎಲ್ಲ ಸುಖ-ಸೌಲಭ್ಯಗಳಿವೆ. ಹೀಗಿದ್ದರೂ ಅವರು ಪೂರ್ಣವೇಳೆ ಸಾಧನೆ ಮಾಡಲು ಸನಾತನ ಆಶ್ರಮದಲ್ಲಿ ಕಳೆದ ೧೪ ವರ್ಷಗಳಿಂದ ವಾಸ್ತವ್ಯ ಮಾಡುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಮನೆಗೆ ಹೋಗುವ ವಿಚಾರವೂ ಬರುವುದಿಲ್ಲ. ‘ಆಶ್ರಮದಲ್ಲಿನ ಸಾಧಕರೇ ನನ್ನ ನಿಜವಾದ ಕುಟುಂಬವಾಗಿದ್ದಾರೆ. ನಾನು ಅವರ ಸಾಧನೆಗಾಗಿ ಸಮಯವನ್ನು ಕೊಡಬೇಕು. ‘ಸಾಧಕರಿಗೆ ಸಹಾಯ ಮಾಡುವುದೇ ಗುರುಸೇವೆಯಾಗಿದೆ’, ಎಂಬ ಭಾವ ಅವರಲ್ಲಿರುತ್ತದೆ.
೫. ಗುರುದೇವರ ಆಜ್ಞೆಯನ್ನು ಚಾಚೂತಪ್ಪದೇ ಪಾಲಿಸಿ ವೈಶಿಷ್ಟ್ಯಪೂರ್ಣ ಲೇಖನಗಳಿಂದ ಗುರುದೇವರಿಗೆ ಅಪೇಕ್ಷಿತ ಸಮಷ್ಟಿ ಸೇವೆ ಮಾಡುವುದು
ಪರಾತ್ಪರ ಗುರು ಡಾ. ಆಠವಲೆಯವರು ೨೦೨೧ ರಲ್ಲಿ ಪೂ. ಕಾಕಾರವರಿಗೆ, ”ನೀವು ಇಷ್ಟೊಂದು ಒಳ್ಳೆಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಹೇಗೆ ಬರೆಯುತ್ತೀರಿ ? ನಿಮ್ಮ ಪ್ರತಿಭೆ ಜಾಗೃತವಾಗಿದೆ” ಎಂದು ಹೇಳಿದರು. ಅದಕ್ಕೆ ಕಾಕಾರವರು ಗುರುದೇವರಿಗೆ, ”ನೀವೇ ನನ್ನಿಂದ ಮೊದಲಿನಿಂದಲೂ ಹಂತಹಂತವಾಗಿ ಬರೆಸಿಕೊಳ್ಳುತ್ತಿದ್ದೀರಿ. ಎಲ್ಲವೂ ನಿಮ್ಮಿಂದಲೇ ಆಗುತ್ತಿದೆ” ಎಂದು ಹೇಳಿದರು.
ಅ. ಪ್ರಾರಂಭದಲ್ಲಿ ಪೂ. ಕಾಕಾರವರು ಸನಾತನ ಸಂಸ್ಥೆಯ ಸತ್ಸಂಗ, ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರ ಕಾರ್ಯ, ಅಧ್ಯಾತ್ಮ ಮತ್ತು ಸಾಧನೆಯ ಬಗ್ಗೆ ಬರೆಯುತ್ತಿದ್ದರು.
ಆ. ಹಿಂದೂ ಜನಜಾಗೃತಿ ಸಮಿತಿಯ ಅಂತರ್ಗತ ಸೇವೆಯನ್ನು ಮಾಡುತ್ತಿರುವಾಗ ಪೂ. ಕಾಕಾರವರು ಪ್ರತಿಯೊಂದು ಅಭಿಯಾನದ ವರದಿಯನ್ನು ಕೊಡುತ್ತಿದ್ದರು. ಜನಜಾಗೃತಿಯಾಗಲು ಮತ್ತು ಸಾಧಕರಿಗೆ ಹಾಗೂ ಧರ್ಮಾಭಿಮಾನಿಗಳು ಅಭಿಯಾನದಲ್ಲಿ ಭಾಗವಹಿಸಬೇಕೆಂದು ಅವರು ‘ಸನಾತನ ಪ್ರಭಾತ’ದ ಮಾಧ್ಯಮ ದಿಂದ ಬರೆಯುತ್ತಿದ್ದರು. ಆದ್ದರಿಂದ ಅವರು ನಡೆಸಿದ ಅಭಿಯಾನಗಳಿಗೆ ಉತ್ತಮ ಬೆಂಬಲ ದೊರಕಿ ಯಶಸ್ಸೂ ಸಿಗುತ್ತಿತ್ತು.
ಇ. ಪೂ. ಕಾಕಾ ತಮ್ಮ ಸಂಪರ್ಕಕ್ಕೆ ಬಂದ ಸಾಧಕರು, ಸಂತರು ಮತ್ತು ಸಮಾಜದಲ್ಲಿನ ಜನರಿಂದ ‘ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅರಿವಾದ ಗುಣವೈಶಿಷ್ಟ್ಯಗಳನ್ನು ಬರೆದು ಕೊಡುತ್ತಾರೆ. ಆದ್ದರಿಂದ ವಾಚಕರು, ಸಾಧಕರು ಮತ್ತು ಸಮಾಜದ ಜನರಿಗೂ ಅದರಿಂದ ಕಲಿಯಲು ಸಿಗುತ್ತದೆ, ಹಾಗೆಯೇ ಸಾಧನೆ ಮತ್ತು ಸೇವೆ ಮಾಡಲು ಪ್ರೇರಣೆ ಸಿಗುತ್ತದೆ. ಗುಣವೈಶಿಷ್ಟ್ಯಗಳನ್ನು ಬರೆಯುವಾಗ ಅವರು ಸಂಬಂಧಪಟ್ಟ ಸಾಧಕರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾರೆ, ಅವರ ಮನಸ್ಸಿನ ವಿಚಾರಪ್ರಕ್ರಿಯೆಯನ್ನು ತಿಳಿದುಕೊಳ್ಳುತ್ತಾರೆ ಮತ್ತು ನಂತರ ಕಲಿಯಲು ಸಿಕ್ಕಿದ ಅಂಶಗಳನ್ನು ಬರೆದುಕೊಡುತ್ತಾರೆ. ಇದರಿಂದ ‘ವಸ್ತುನಿಷ್ಠ ಮತ್ತು ಯೋಗ್ಯ ಎಲ್ಲ ಅಂಶಗಳು ಎಲ್ಲರ ವರೆಗೆ ತಲುಪಬೇಕು’, ಎಂದು ಅವರ ಪ್ರಯತ್ನಿಸುತ್ತಿರುತ್ತಾರೆ.
ಈ. ೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರ ಪ್ರವಚನಗಳು, ಸತ್ಸಂಗಗಳು, ಬಹಿರಂಗ ಸಭೆಗಳು, ಹಾಗೆಯೇ ಅನೌಪಚಾರಿಕ ಭೇಟಿಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಪೂ. ಕಾಕಾರವರು ವಿವರವಾಗಿ ಬರೆದುಕೊಟ್ಟಿದ್ದಾರೆ. ಅದೇ ರೀತಿ ಪ.ಪೂ. ಭಕ್ತರಾಜ ಮಹಾರಾಜರು, ಪ.ಪೂ. ಕಾಣೆ ಮಹಾರಾಜರು, ಪ.ಪೂ. ಜೋಶಿಬಾಬಾ ಮುಂತಾದ ಸಂತರ ಸತ್ಸಂಗದಲ್ಲಿರುವಾಗ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದ ಅನುಭೂತಿಗಳನ್ನೂ ಬರೆದುಕೊಟ್ಟಿದ್ದಾರೆ.
೬. ಇಳಿವಯಸ್ಸಿನಲ್ಲಿಯೂ ಆಧುನಿಕ ತಂತ್ರಜ್ಞಾನವನ್ನು ಬಳಸಿ ‘ಸಮಷ್ಟಿ ಸೇವೆ ಹೇಗೆ ಮಾಡಬಹುದು ?’, ಎಂಬ ಆದರ್ಶವನ್ನು ಎಲ್ಲರ ಮುಂದೆ ಇಡುವುದು
ಇಳಿವಯಸ್ಸಿನಲ್ಲಿಯೂ ಪೂ. ಕಾಕಾರವರು ಆಧುನಿಕ ತಂತ್ರಜ್ಞಾನವನ್ನು ಬಳಸಿ ಬೆರಳಚ್ಚು ಮತ್ತು ಸಂಕಲನದ ಸೇವೆಯನ್ನು ಮಾಡು ತ್ತಿದ್ದಾರೆ. ಅವರು ಗಣಕೀಯತಂತ್ರ್ರಾಂಶದ ಸಹಾಯದಿಂದ ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರ ಸುವಚನಗಳನ್ನು ಸಿದ್ಧಪಡಿಸುತ್ತಾರೆ. ಕಳೆದ ೨ ವರ್ಷಗಳಿಂದ ಅವರು ಪ್ರತಿದಿನ ಮುಂಜಾನೆ ೨೦೦ ಕ್ಕಿಂತಲೂ ಹೆಚ್ಚು ಸಾಧಕರು ಮತ್ತು ಜಿಜ್ಞಾಸುಗಳಿಗೆ ‘ವಾಟ್ಸ್ಪ್’ ಮೂಲಕ ಅವುಗಳನ್ನು ಕಳುಹಿಸುತ್ತಾರೆ. ಈ ಸುವಚನಗಳು ಅವರು ತಮ್ಮ ‘ವಾಟ್ಸ್ಪ್’ನ ‘ಸ್ಟೆಟಸ್’ನಲ್ಲಿ ಇಡುತ್ತಾರೆ. (‘ವಾಟ್ಸ್ಪ್’ನ ‘ಸ್ಟೆಟಸ್’- ನವೀಕರಿಸಿದ ಮಾಹಿತಿ, ಛಾಯಾಚಿತ್ರಗಳು ಅಥವಾ ವಿಡಿಯೋಗಳು ಇತ್ಯಾದಿಗಳನ್ನು ಇಡುವ ವ್ಯವಸ್ಥೆ) ಆದ್ದರಿಂದ ನೂರಾರು ಸಾಧಕರು ಮತ್ತು ಜಿಜ್ಞಾಸು (ಅಂದಾಜು ೨,೫೦೦ ಜನರು)ಗಳಿಗೆ ಪ್ರಾತಃಕಾಲದಲ್ಲಿ ಉಚ್ಚ ಕೋಟಿಯ ಸಂತರ ಛಾಯಾಚಿತ್ರಗಳ ದರ್ಶನವಾಗುತ್ತದೆ ಮತ್ತು ಚೈತನ್ಯಮಯ ಸುವಚನಗಳು ಓದಲು ಸಿಗುತ್ತವೆ.
೭. ಪೂ. ಕಾಕಾರವರಿಗೆ ಸಾಧಕರ ಮೇಲಿರುವ ಪ್ರೀತಿ
೭ ಅ. ಮಹಾಪ್ರಸಾದವನ್ನು ಸೇವಿಸುವಾಗ ಸಾಧಕರೊಂದಿಗೆ ಸಹಜವಾಗಿ ಮಾತನಾಡಿ ಅವರಿಗೆ ಸಾಧನೆಯಲ್ಲಿ ಸಹಾಯ ಮಾಡುವುದು : ಪೂ. ಕಾಕಾರವರು ಮಹಾಪ್ರಸಾದವನ್ನು ಸೇವಿಸುವಾಗ ಬೇರೆ ಬೇರೆ ಸಾಧಕರೊಂದಿಗೆ ಕುಳಿತುಕೊಳ್ಳುತ್ತಾರೆ. ಅವರು ಸಾಧಕರೊಂದಿಗೆ ಸಹಜವಾಗಿ ಅನೌಪಚಾರಿಕವಾಗಿ ಮಾತನಾಡುತ್ತಾರೆ. ಅವರು ಸಾಧಕರ ಸ್ಥಿತಿಗನುಸಾರ ಪ.ಪೂ. ಭಕ್ತರಾಜ ಮಹಾರಾಜರ, ಪರಾತ್ಪರ ಗುರು ಡಾ. ಆಠವಲೆ ಮುಂತಾದ ಸಂತರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮತ್ತು ಬಂದ ಅನುಭೂತಿಗಳನ್ನು ಹೇಳುತ್ತಾರೆ. ಅವರು ಸಾಧಕರಿಗೆ ಪ್ರೀತಿಯಿಂದ ಸಾಧನೆಯ ಬಗೆಗಿನ ಅಂಶಗಳನ್ನು ತಿಳಿಸಿ ಹೇಳುತ್ತಾರೆ.
೮. ಭಾವ
೮ ಅ. ಸಾಧಕರ ಬಗೆಗಿನ ಭಾವ : ಪೂ. ಕಾಕಾರವರು ‘ಸನಾತನದ ಎಲ್ಲ ಸಾಧಕರು ಪರಾತ್ಪರ ಗುರು ಡಾಕ್ಟರರಿಗೆ ಪ್ರಾಣಪ್ರಿಯರಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಸಾಧಕನಲ್ಲಿ ಗುರುರೂಪವನ್ನು ನೋಡಿ ಅವರೊಂದಿಗೆ ನಮ್ರತೆಯಿಂದ, ಪ್ರೀತಿಯಿಂದ ಮತ್ತು ಆತ್ಮೀಯತೆಯಿಂದ ವರ್ತಿಸಬೇಕು’, ಎಂದು ಹೇಳುತ್ತಾರೆ.
೮ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅಸಾಧಾರಣ ನಿಷ್ಠೆ ಮತ್ತು ಭಾವವಿರುವುದು : ಪೂ. ಕಾಕಾರವರು ಸತತವಾಗಿ ‘ಎಲ್ಲವೂ ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗಾಗಿ ಮತ್ತು ಗುರುದೇವರದ್ದಾಗಿದೆ’, ಎಂದು ಹೇಳುತ್ತಾರೆ. ಅವರ ನಡೆ-ನುಡಿಯಿಂದ, ಲೇಖನಗಳಿಂದ ಮತ್ತು ಪ್ರತಿಯೊಂದು ಕೃತಿಯಿಂದ ಗುರುದೇವರ ಬಗ್ಗೆ ಕೃತಜ್ಞತಾಭಾವ ಉಕ್ಕಿಬರುತ್ತದೆ.
೯. ‘ನಿಯಮಿತ ವ್ಯಾಯಾಮ ಮತ್ತು ಸಮತೋಲ ಆಹಾರ’ದಿಂದ ಆರೋಗ್ಯದ ಕಾಳಜಿ ವಹಿಸುವುದು
ಪೂ. ಕಾಕಾರವರಿಗೆ ಬೆನ್ನುನೋವಿನ ತೊಂದರೆಯಿದೆ, ಹಾಗೆಯೇ ಈ ಹಿಂದೆ ಅವರ ಹೃದಯದ ನಾಳಗಳಲ್ಲಿ ಗಂಟು ಗಳಾಗಿದ್ದವು. ಆದ್ದರಿಂದ ಅವರಿಗೆ ಆಹಾರದಲ್ಲಿ ಪಥ್ಯವೂ ಇದೆ. ‘ಸಾಧನೆಗಾಗಿ ಆರೋಗ್ಯ ಚೆನ್ನಾಗಿರಬೇಕು’, ಅದಕ್ಕಾಗಿ ಪೂ. ಕಾಕಾ ರವರು ಆಹಾರದಲ್ಲಿ ತುಂಬಾ ನಿಯಂತ್ರಣವಿಡುತ್ತಾರೆ. ಅವರ ಆಹಾರದ ಪ್ರಮಾಣ ಕಡಿಮೆಯೇ ಇರುತ್ತದೆ. ಯಾವುದಾದರೊಂದು ಪದಾರ್ಥವು ರುಚಿಕರವಾಗಿದ್ದರೂ, ಅದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದಿಲ್ಲ. ‘ನಿಯಮಿತ ವ್ಯಾಯಾಮ ಮಾಡುವುದು ಮತ್ತು ಸಮತೋಲ ಆಹಾರವನ್ನು ತೆಗೆದುಕೊಳ್ಳುವುದು’, ಇದರಿಂದ ಅವರ ಆರೋಗ್ಯವು ಉತ್ತಮವಾಗಿರುವುದು ಸಾಕ್ಷಿಯಾಗಿದೆ.
ಪೂ. ಕಾಕಾರವರು ಮಾಡುತ್ತಿರುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳು ಎಲ್ಲರಿಗಾಗಿ ಪ್ರೇರಣಾದಾಯಕವಾಗಿವೆ. ಕಲಿಯುಗದಲ್ಲಿ ಸಂತರ ಸತತ ಸತ್ಸಂಗವನ್ನು ನೀಡಿ ಅವರನ್ನು ಹತ್ತಿರದಿಂದ ಅನುಭವಿಸಲು ಕೊಟ್ಟಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ವೈದ್ಯೆ ಸುಶ್ರೀ (ಕು.) ಮಾಯಾ ಪಾಟೀಲ, ದೇವದ, ಪನವೇಲ. (೬.೩.೨೦೨೪)
ನನ್ನ ಮೇಲೆ ಸದಾ ಗುರುಕೃಪೆಯಿರಲಿ, ಇಷ್ಟೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರಲ್ಲಿ ಪ್ರಾರ್ಥನೆ !ಸಂಕಟಕಾಲದಲ್ಲಿ ನೀವು (ಟಿಪ್ಪಣಿ) ನನ್ನ ರಕ್ಷಣೆ ಮಾಡಬೇಕು, ಎಂದು ನಾನು ಬಯಸುವುದಿಲ್ಲ | ಸಂಕಟಕಾಲದಲ್ಲಿಯೂ ನಿರ್ಭಯದಿಂದ, ಸಾಧನೆಯನ್ನು ಮಾಡಿಸಿಕೊಳ್ಳಬೇಕು, ಇಷ್ಟೇ ನನ್ನ ಪ್ರಾರ್ಥನೆ ! || ೧ || ನನ್ನ ದುಃಖ-ಕಷ್ಟದಲ್ಲಿ ನೀವು ನನ್ನನ್ನು ಸಮಾಧಾನ ಪಡಿಸಬೇಕು, ಎಂದು ನಾನು ಬಯಸುವುದಿಲ್ಲ | ನಿಶ್ಚಲ ಮನಸ್ಸಿನಿಂದ ಪರಿಸ್ಥಿತಿಯನ್ನು ಸ್ವೀಕರಿಸಲು ಪ್ರೋತ್ಸಾಹಿಸಬೇಕು, ಇಷ್ಟೇ ನನ್ನ ಪ್ರಾರ್ಥನೆ ! || ೨ || ಅಡಚಣೆಯಲ್ಲಿ ನೀವು ಧಾವಿಸಿ ಬರಬೇಕು, ಸಹಾಯ ಮಾಡಬೇಕು, ಎಂದು ನಾನು ಬಯಸುವುದಿಲ್ಲ | ಅಡಚಣೆಗಳನ್ನು ಎದುರಿಸಲು ನನಗೆ ಆತ್ಮಬಲವನ್ನು ನೀಡಬೇಕು, ಇಷ್ಟೇ ನನ್ನ ಪ್ರಾರ್ಥನೆ ! || ೩ || ನನ್ನ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯವನ್ನು ನೀಡಬೇಕು, ಎಂದು ನಾನು ಬಯಸುವುದಿಲ್ಲ | ‘ಭಯಪಡಬೇಡ ನಾನು ನಿನ್ನ ಜೊತೆಯಲ್ಲಿದ್ದೇನೆ’, ಹೀಗೆ ನಿಮ್ಮ ಮೇಲೆ ನನ್ನ ಶ್ರದ್ಧೆಯಿರಲಿ, ಇಷ್ಟೇ ನನ್ನ ಪ್ರಾರ್ಥನೆ ! || ೪ || ಯಾರೂ ನನಗೆ ಅನಗತ್ಯವಾಗಿ ತೊಂದರೆ ಮತ್ತು ದುಃಖವನ್ನು ಕೊಡಬಾರದು, ಎಂದು ನಾನು ಬಯಸುವುದಿಲ್ಲ | ಪ್ರಾರಬ್ಧದ ಭೋಗವನ್ನು ಭೋಗಿಸಲು ನನ್ನ ಮನಸ್ಸು ದೃಢವಾಗಿರಬೇಕು, ಇಷ್ಟೇ ನನ್ನ ಪ್ರಾರ್ಥನೆ ! || ೫ || ಮಾಯೆಯಲ್ಲಿನ ಸಂಕಟಗಳನ್ನು ನೀಗಿಸಿ ನನ್ನನ್ನು ಸುಖವಾಗಿಡಬೇಕು, ಎಂದು ನಾನು ಬಯಸುವುದಿಲ್ಲ | ನಿಮ್ಮ ನಾಮ ಸತತ ನನ್ನ ಬಾಯಿಯಲ್ಲಿ, ಇಷ್ಟೇ ಪ್ರಾರ್ಥನೆ ! || ೬ || ಯಾವುದೇ ಪದವಿ, ಅಧಿಕಾರ, ಸಂಪತ್ತು ಸಿಗಬೇಕು, ಎಂದು ನಾನು ಬಯಸುವುದಿಲ್ಲ | ನಿಮ್ಮ ಚರಣದಾಸನಾಗಿರಬೇಕು, ಇಷ್ಟೇ ನನ್ನ ಪ್ರಾರ್ಥನೆ ! || ೭ || ನನಗೆ ಯಾರಾದರು ಕರ್ತೃತ್ವವನ್ನು ನೀಡಿ ಪ್ರಶಂಸಿಸಬೇಕು, ಎಂದು ನಾನು ಬಯಸುವುದಿಲ್ಲ | ನೀವೇ ಮಾಡುವವರು – ಮಾಡಿಸಿಕೊಳ್ಳುವವರಾಗಿದ್ದೀರಿ, ಎಂಬ ಅರಿವು ನನ್ನಲ್ಲಿ ಇರಲಿ, ಇಷ್ಟೇ ನನ್ನ ಪ್ರಾರ್ಥನೆ ! || ೮ || ನಾನು ಬಯಸಿದ್ದು ನನಗೆ ಸಿಗಬೇಕು ಮತ್ತು ನೀವು ಅದನ್ನೆಲ್ಲ ಕೊಡಬೇಕು, ಎಂದು ನಾನು ಬಯಸುವುದಿಲ್ಲ | ಗುರುಚರಣಗಳ ಧೂಳಾಗಿಸಿ, ಇಷ್ಟೇ ಪ್ರಾರ್ಥನೆ ! || ೯ || ನಾನು ಮಾಯೆಯಲ್ಲಿನ ವಿಷಯಗಳನ್ನು ಬೇಡಿದರೆ, ನೀವು ಅವುಗಳನ್ನು ಕೊಡಬಾರದು, ಇದನ್ನೇ ನಾನು ಬಯಸುತ್ತೇನೆ | ನಿರಂತರ ನನ್ನ ಮೇಲೆ ಗುರುಕೃಪೆಯಿರಲಿ, ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ ! || ೧೦ || ಟಿಪ್ಪಣಿ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ – (ಪೂ.) ಶಿವಾಜಿ ವಟಕರ ( ೧೮.೪.೨೦೨೪) |