ಫೋಂಡಾ (ಗೋವಾ) – ಆನಂದಿ, ನಿರ್ಮಲ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಬಗ್ಗೆ ಅಪಾರ ಭಾವ ಹೊಂದಿರುವ ಸನಾತನ ಸಂಸ್ಥೆಯ 64ನೇ ಸಂತ ಪೂ. (ಶ್ರೀಮತಿ) ಶೇವುಬಾಯಿ ಲೋಖಂಡೆ (ವಯಸ್ಸು 100) ಡಿಸೆಂಬರ್ 13 ರಂದು ರಾತ್ರಿ 8:20 ಗಂಟೆಗೆ ದೇಹತ್ಯಾಗ ಮಾಡಿದರು. ಅವರು ಫೋಂಡಾದ ಢವಳಿಯಲ್ಲಿ ನೆಲೆಸಿದ್ದರು. ಡಿಸೆಂಬರ್ 14 ರಂದು ಸಂಜೆ 5 ಗಂಟೆಗೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಸನಾತನ ಸಂತ ಪೂ. ಸದಾಶಿವ ಪರಾಂಜಪೆ ಹಾಗೂ ಪೂ. (ಸೌ.) ಶೈಲಜಾ ಪರಾಂಜಪೆ ಇತರೊಂದಿಗೆ ಸನಾತನದ ಇತರ ಸಂತರು ಮತ್ತು ಸಾಧಕರು ಪೂ. ಲೋಖಂಡೇ ಅಜ್ಜಿಯವರ ಅಂತ್ಯದರ್ಶನ ಪಡೆದರು.