
ಸನಾತನ ಆಶ್ರಮ, ಫೋಂಡಾದ (ಗೋವಾ) – ಬಾಂದೀವಡೆ ಇಲ್ಲಿಯ ಸನಾತನದ ಸಾಧಕಿ ಸೌ. ಜ್ಯೋತಿ ಸುದಿನ ಢವಳಿಕರ (ವಯಸ್ಸು ೬೨ ವರ್ಷ) ಇವರು ೧೩೨ ನೇ (ಸಮಷ್ಟಿ) ಸಂತಪದವಿಯಲ್ಲಿ ವಿರಾಜಮಾನರಾಗಿರುವ ಆನಂದದ ವಾರ್ತೆಯನ್ನು ೨೪ ಫೆಬ್ರವರಿ ೨೦೨೫ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ನೀಡಿದರು.
ರಾಮನಾಥಿ ಇಲ್ಲಿಯ ಸನಾತನದ ಆಶ್ರಮದಲ್ಲಿ ನೆರವೇರಿದ ಒಂದು ಅನೌಪಚಾರಿಕ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು. ಸವಿಸ್ತಾರ ಮಾಹಿತಿ ಶೀಘ್ರದಲ್ಲಿಯೇ ಮುದ್ರಿಸಲಾಗುವುದು.