ಪುಣೆ, ಡಿಸೆಂಬರ್ 14 (ಸುದ್ದಿ) – ಪರಿಪೂರ್ಣ ಸೇವೆ ಮಾಡುವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ನಿರಂತರ ಅನುಸಂಧಾನದಲ್ಲಿರುವ, ಆನಂದ, ಸ್ಥಿರ ಮತ್ತು ಪ್ರೇಮಭಾವ ಈ ಸ್ಥಾಯೀಭಾವವಿರುವ ಪುಣೆಯ ಸನಾತನ ಸಂಸ್ಥೆಯ 125ನೇ ಸಂತರಾದ ಪೂ. ಅರವಿಂದ ಸಹಸ್ತ್ರಬುದ್ಧೆ (ವಯಸ್ಸು 77 ವರ್ಷ) ಅವರು ಡಿಸೆಂಬರ್ 14 ರಂದು ಅಂದರೆ ದತ್ತ ಜಯಂತಿಯ ದಿನದಂದು ಮುಂಜಾನೆ 3.39 ಕ್ಕೆ ದೇಹತ್ಯಾಗ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಶ್ರೀಮತಿ ಮಂಗಳಾ ಸಹಸ್ತ್ರಬುದ್ಧೆ, ಓರ್ವ ಮಗಳು, ಅಳಿಯ, 2 ಮೊಮ್ಮಕ್ಕಳನ್ನು ಅಗಲಿದ್ದಾರೆ. ದೇಹತ್ಯಾಗದ ನಂತರ ಪೂ. ಕಾಕಾರ ಮುಖ ಬಹಳ ತೇಜಸ್ವಿ ಕಾಣಿಸುತ್ತಿತ್ತು. ವಾತಾವರಣದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯ ಮತ್ತು ಶಾಂತಿ ಅರಿವಾಗುತ್ತಿತ್ತು. ಪೂ. ಕಾಕಾರವರ ದೇಹತ್ಯಾಗದ ಸಮಯದಲ್ಲಿ ಅವರ ಸಂಬಂಧಿಕರು, ಹಾಗೆಯೇ ಸನಾತನ ಸಂಸ್ಥೆಯ ಸಂತರಾದ ಪೂ. (ಸೌ.) ಮನೀಶಾ ಪಾಠಕ ಮತ್ತು ಸನಾತನ ಸಂಸ್ಥೆಯ ಅನೇಕ ಸಾಧಕರು ಉಪಸ್ಥಿತರಿದ್ದರು.
1. ಸದಾ ಆನಂದಿಯಾಗಿರುವ ಪೂ. ಕಾಕಾ ಇವರು 2013 ರಲ್ಲಿ ಶೇ. 61 ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದರು. ಜುಲೈ 6, 2023 ರಂದು ಪೂ. ಅರವಿಂದ ಸಹಸ್ತ್ರಬುದ್ಧೆಯವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.
2. ಪೂ. ಕಾಕಾರವರ ಪತ್ನಿ ಶ್ರೀಮತಿ ಮಂಗಳಾ ಸಹಸ್ತ್ರಬುದ್ಧೆ ಅವರೂ ಸಹ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿದ್ದು, ಶೇ.67ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ.
3. ಪೂ. ಕಾಕಾ ಕಳೆದ 17 ವರ್ಷಗಳಿಂದ ಸಾಪ್ತಾಹಿಕ ‘ಸನಾತನ ಪ್ರಭಾತ’ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದರು. ಹಿಂದೆ ಪೂ. ಕಾಕಾರವರ ಮನೆಯಲ್ಲಿ ಅನೇಕ ಸಂತರು ಮತ್ತು ಸಾಧಕರು ಅನೇಕ ಬಾರಿ ತಂಗಿದ್ದಾರೆ. ಕಾಕಾ-ಕಾಕುರವರ ವಾತ್ಸಲ್ಯದಿಂದಾಗಿ ಅವರು ಸಾಧಕರ ಅತಿಥಿಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದರು.