ಭಾರತದಿಂದ ರಷ್ಯಾ ಬ್ರಹ್ಮೋಸ್ ಕ್ಷಿಪಣಿ ಖರೀದಿಸುವ ಸಾಧ್ಯತೆ !
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ 1 ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧದಿಂದಾಗಿ ಎರಡೂ ದೇಶಗಳ ಶಸ್ತ್ರಾಸ್ತ್ರಗಳು ಕಡಿಮೆಯಾಗಿವೆ. ಅಮೇರಿಕ ಮತ್ತು ಯುರೋಪದಲ್ಲಿನ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ಹಲವು ನಿರ್ಬಂಧಗಳಿಂದ ರಷ್ಯಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದೆ.