ಉಕ್ರೇನ ಯುದ್ಧದಲ್ಲಿ ರಷ್ಯಾದ ಶಸ್ತ್ರಾಸ್ತ್ರಗಳಲ್ಲಿ ಇಳಿಕೆಯಾದ ಪರಿಣಾಮ !
ನವದೆಹಲಿ – ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ 1 ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧದಿಂದಾಗಿ ಎರಡೂ ದೇಶಗಳ ಶಸ್ತ್ರಾಸ್ತ್ರಗಳು ಕಡಿಮೆಯಾಗಿವೆ. ಅಮೇರಿಕ ಮತ್ತು ಯುರೋಪದಲ್ಲಿನ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ಹಲವು ನಿರ್ಬಂಧಗಳಿಂದ ರಷ್ಯಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಷ್ಯಾಗೆ ಭಾರತದ ‘ಬ್ರಹ್ಮೋಸ’ ಕ್ಷಿಪಣಿಗಳ ಅಗತ್ಯವಿದೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಬ್ರಹ್ಮೋಸ ಕ್ಷಿಪಣಿ ತಯಾರಿಕಾ ಘಟಕದ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಜನರಲ್ ಮ್ಯಾನೇಜರ್ ಅತುಲ ದಿನಕರ ರಾಣೆ ಅವರು ಈ ಕುರಿತು, “ನಾವು ಈ ಬಗ್ಗೆ ರಷ್ಯಾವನ್ನು ಮಾರುಕಟ್ಟೆಯಾಗಿ ನೋಡುತ್ತಿದ್ದೇವೆ. ಅಲ್ಲದೆ ರಷ್ಯಾಗೆ ಇದಕ್ಕಿಂತ ಉತ್ತಮ ಪರಿಹಾರವಿಲ್ಲವೆಂದು” ಹೇಳಿದ್ದಾರೆ.
India dangles BrahMos missile sales for Russia https://t.co/p5zesewrmm via @asiatimesonline
— Nino Brodin (@Orgetorix) July 15, 2023
1. ‘ಯುರೇಷಿಯನ್ ಟೈಮ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತವು ಬ್ರಹ್ಮೋಸ ಕ್ಷಿಪಣಿಗಳನ್ನು ರಷ್ಯಾಕ್ಕೆ ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿದೆ. ಇದರಿಂದ ಎರಡು ದೇಶಗಳ ನಡುವಿನ ಮಿಲಿಟರಿ ಸಹಕಾರದಲ್ಲಿ ಬದಲಾವಣೆಯಾಗಲಿದೆ; ಏಕೆಂದರೆ ಇಲ್ಲಿಯವರೆಗೆ ಭಾರತ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದು, ಇದೀಗ ರಷ್ಯಾ ಭಾರತದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಸಾಧ್ಯತೆಯಿದೆ. ಕುತೂಹಲಕಾರಿಯೆಂದರೆ ಭಾರತ ಮತ್ತು ರಷ್ಯಾ ಈ ಎರಡೂ ದೇಶಗಳು ಒಟ್ಟಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿವೆ.
2. ಕೆಲವು ಪ್ರಸಾರಮಾಧ್ಯಮಗಳ ವರದಿಯ ಪ್ರಕಾರ ರಷ್ಯಾ ಬ್ರಹ್ಮೋಸ ಅನ್ನು ಮೊದಲೇ ಖರೀದಿಸಿದ್ದರೆ, ಪ್ರಸ್ತುತ ಪರಿಸ್ಥಿತಿಯ ಉಕ್ರೇನ್ ಯುದ್ಧದಲ್ಲಿ ಅದನ್ನು ಬಳಸಬಹುದಾಗಿತ್ತು. ಅತುಲ ರಾಣೆ ಅವರ ಪ್ರಕಾರ ಯುರೋಪಿನ ಪ್ರಸ್ತುತ ಪರಿಸ್ಥಿತಿಯು, ರಷ್ಯಾದಿಂದ ನಮಗೆ ಬೇಡಿಕೆ ಸಿಗಬಹುದು ಎಂದು ಸೂಚಿಸುತ್ತದೆ. ವಿಶೇಷವಾಗಿ ವಾಯು ಮಾರ್ಗದಿಂದ ಹೊಡೆಯುವ ಬ್ರಹ್ಮೋಸ್ ಕ್ಷಿಪಣಿಯ ಬೇಡಿಕೆ ಬರಬಹುದು ಎಂದು ಹೇಳಿದೆ.