ಉಕ್ರೇನ್ ಯುದ್ಧದಿಂದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವತಿಯಿಂದ ಪುತಿನ ಇವರ ವಿರುಧ್ದ ಅರೆಸ್ಟ ವಾರಂಟ್

ಜಿನೇವಾ (ಸ್ವಿಝರ್ಲ್ಯಾಂಡ್) – ಉಕ್ರೆನ ಯುದ್ಧಕ್ಕೆ ಕಾರಣರಾಗಿರುವ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನ ಇವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (‘ಐ.ಸಿ.ಸಿ.ಯು) ಅರೆಸ್ಟ ವಾರಂಟ್ ಜಾರಿಗೊಳಿಸಿದೆ. ಈ ಅರೆಸ್ಟ ವಾರಂಟ್‌ಗೆ ರಷ್ಯಾ ಉತ್ತರ ನೀಡಲಿಲ್ಲ. ಪುತಿನ ಅವರು ಈ ಅರೆಸ್ಟ ವಾರಂಟ್‌ಗೆ ಮಹತ್ವ ನೀಡುವ ಸಾಧ್ಯತೆ ಕಡಿಮೆಯಿದೆ; ಏಕೆಂದರೆ ಅವರು ಯುದ್ಧದ ಮೊದಲನೆ ದಿನದಿಂದಲೂ ಉಕ್ರೇನ್‌ಗೆ ಪಾಠ ಕಲಿಸುವ ಬೆದರಿಕೆ ಹಾಕುತ್ತಿದ್ದಾರೆ.

ಚೀನಾದ ರಾಷ್ಟ್ರಪತಿ ಶಿ ಜೀನಪಿಂಗ ರಷ್ಯಾಗೆ ಹೋಗುವರು

ಚೀನಾದ ರಾಷ್ಟ್ರಪತಿ ಶಿ ಜೀನಪಿಂಗ ಮಾರ್ಚ ೨೦ ರಿಂದ ೨೨ ಈ ಕಾಲಾವಧಿಯಲ್ಲಿ ರಷ್ಯಾದ ಪ್ರವಾಸಕ್ಕೆ ಹೋಗುವರಿದ್ದಾರೆ ಯುದ್ಧ ಮುಕ್ತಾಯಗೊಳಿಸಲು ಜೀನಪಿಂಗ ಇವರು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಯ ಮಾತುಕತೆ ನಡೆಸಿಕೊಡುವವರಿದ್ದಾರೆ.