ನಾವು ಯಾವುದೇ ದೇಶದ ಮೇಲೆ ಬಾಂಬ್ ದಾಳಿ ನಡೆಸಬಲ್ಲೆವು ! – ರಷ್ಯಾದಿಂದ ಬೆದರಿಕೆ

ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್

ಮಾಸ್ಕೊ (ರಶಿಯಾ) – ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ. ಉಕ್ರೇನ್ ನಡುವಿನ ಯುದ್ಧದ ಯುದ್ಧ ಅಪರಾಧಕ್ಕಾಗಿ ಅಂತರರಾಷ್ಟ್ರೀಯ ನ್ಯಾಯಾಲಯವು ಪುತಿನ್ ವಿರುದ್ಧ ಈ ಬಂಧನ ವಾರಂಟ್ ಹೊರಡಿಸಿದೆ.