ಮಾಸ್ಕೊ (ರಷ್ಯಾ) – ರಷ್ಯಾದಲ್ಲಿನ ವಿರೋಧಿ ಪಕ್ಷದ ನಾಯಕ ವ್ಲಾದಿಮೀರ್ ಕಾರಾ-ಮುರ್ಜಾರವರ ಮೇಲೆ ನ್ಯಾಯಾಲಯವು ರಾಷ್ಟ್ರದ್ರೋಹದ ಆರೋಪ ಮಾಡುತ್ತ ೨೫ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. `ಮುರ್ಜಾರವರು ಉಕ್ರೇನಿನ ಯುದ್ಧದಿಂದಾಗಿ ರಷ್ಯಾವನ್ನು ಟೀಕಿಸಿದ್ದರು ಹಾಗೆಯೇ ಅವರು ರಷ್ಯಾ ಸೈನ್ಯದ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಕಟಿಸಿ ಒಂದು ದೇಶವಿರೋಧಿ ಸಂಘಟನೆಯನ್ನು ಬೆಂಬಲಿಸಿದ್ದರು’ ಎಂದು ನ್ಯಾಯಾಲಯವು ಹೇಳಿದೆ. ಅವರಿಗೆ ೪ ಲಕ್ಷ ರೂಬಲಗಳ (೪ ಲಕ್ಷ ೩ ಸಾವಿರ ರೂಪಾಯಿಗಳು) ದಂಡ ವಿಧಿಸಲಾಗಿದೆ.
೧. ಮುರ್ಜಾರವರಿಗೆ ಇಲ್ಲಿಯವರೆಗಿನ ಅತ್ಯಂತ ಹೆಚ್ಚಿನ ವರ್ಷಗಳ ಶಿಕ್ಷೆಯಾಗಿದ್ದು ಅವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
೨. ಮುರ್ಜಾರವರನ್ನು ಒಂದು ವರ್ಷದ ಹಿಂದೆ ಬಂಧಿಸಲಾಗಿತ್ತು. ಅವರು ಕಳೆದ ವರ್ಷ ಅಮೇರಿಕಾದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ರಷ್ಯಾ ವಿರುದ್ಧ ಹೇಳಿಕೆ ನೀಡುತ್ತಾ `ರಷ್ಯಾದ ಸೈನ್ಯವು ಉಕ್ರೇನಿನಲ್ಲಿ ಯುದ್ಧಾಪರಾಧಗಳನ್ನು ಮಾಡುತ್ತಿದೆ. ವಸತಿ ಪ್ರದೇಶಗಳಲ್ಲಿ, ಆಸ್ಪತ್ರೆಗಳು, ಶಾಲೆಗಳು ಇರುವಲ್ಲಿ ಬಾಂಬ್ ಸ್ಫೋಟ ನಡೆಸುತ್ತಿದೆ’ ಎಂದು ಹೇಳಿದ್ದರು.
೩. ಈಗಾಗಲೇ ಮುರ್ಜಾರವರ ಮೇಲೆ ೨ ಬಾರಿ ವಿಷಪ್ರಯೋಗ ಮಾಡಲಾಗಿದೆ.
೪. ಕಾರಾ-ಮುರ್ಜಾ ರವರಿಗೆ ನೀಡಲಾದ ಶಿಕ್ಷೆಯು ಅತ್ಯಂತ ಆಘಾತಕಾರಿಯಾಗಿದೆ, ಎಂದು ಬ್ರಿಟನ್ನಿನ ವಿದೇಶಾಂಗ ಸಚಿವ ಜೇಮ್ಸ್ ಕ್ಲೇವ್ಹಾರ್ಲಿಯವರು ಅಭಿಪ್ರಾಯಪಟ್ಟಿದ್ದಾರೆ.