ಉಕ್ರೇನಿನ್ ರಾಷ್ಟ್ರಧ್ವಜ ತೆಗೆದಿದ್ದರಿಂದ ಥಳಿತ !
ಅಂಕಾರಾ (ಟರ್ಕಿ) – ಇಲ್ಲಿ ಆಯೋಜಿಸಿರುವ ‘ಬ್ಲಾಕ್ ಸೀ ಎಕನಾಮಿಕ್ ಕೊಆಪರೇಷನ್’ ನ ಒಂದು ಮಹತ್ವದ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಇವರ ಪ್ರತಿನಿಧಿಗಳಲ್ಲಿ ಹೊಡೆದಾಟ ನಡೆದಿದೆ. ಉಕ್ರೇನ್ ನ ಪ್ರತಿನಿಧಿಯು ರಷ್ಯಾದ ಪ್ರತಿನಿಧಿ ಗೆ ೫ -೬ ಏಟು ಹೊಡೆದರು.
रूस और यूक्रेन के बीच तनाव बढ़ता जा रहा है. इसका असर अब दोनों देशों के राजनेताओं पर भी साफ देखने को मिल रहा है. देखें वीडियो-#ViralVideo #Ukraine #Russia https://t.co/QH5ydi7eoe
— ABP News (@ABPNews) May 5, 2023
ಈ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಛಾಯಾಚಿತ್ರ ತೆಗೆಯುತ್ತಿರುವಾಗ ಉಕ್ರೇನ್ ಸಂಸದ ಅಲೆಕ್ಸಾಂಡರ್ ಮಾರಿಕೋಸ್ಕಿ ಇವರು ಅವರ ರಾಷ್ಟ್ರಧ್ವಜ ತೆಗೆದು ಕೊಂಡು ನಿಂತಿದ್ದರು. ಆ ಸಮಯದಲ್ಲಿ ರಷ್ಯಾದ ಪ್ರತಿನಿಧಿ ಅನಿರೀಕ್ಷಿತವಾಗಿ ಧ್ವಜ ಕಸಿದುಕೊಂಡು ಕೆಳಗೆ ಎಸೆದರು. ಅದರ ನಂತರ ಅವರು ಹಾಗೆ ಮುಂದೆ ಹೊರಟು ಹೋದರು. ಅವರ ಈ ಕೃತಿಯಿಂದ ಸಂಸದ ಮಾರಿಕೋಸ್ಕಿ ಅಸಮಾಧಾನಗೊಂಡರು. ಅವರು ರಷ್ಯಾದ ಪ್ರತಿನಿಧಿಯ ಬೆಂಬೇತ್ತಿ ಅವರಿಗೆ ಹೊಡೆದರು.