ಪುತಿನ ಇವರನ್ನು ಬಂಧಿಸುವಂತೆ ಆದೇಶ ನೀಡಿದ ನ್ಯಾಯಾಧೀಶರನ್ನು ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾದಿಂದ ಬೆದರಿಕೆ

ಮಾಸ್ಕೋ (ರಷ್ಯಾ) – ಉಕ್ರೆನ್ ನಲ್ಲಿ ನಡೆಯುವ ಯುದ್ಧಕ್ಕೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರೇ ಹೊಣೆಗಾರರೆಂದು ಹೇಳುತ್ತಾ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇವರ ವಿರುದ್ಧ ಅರೇಸ್ಟ ವಾರಂಟ್ ಜಾರಿ ಮಾಡಿದೆ. ಇದರಿಂದ ರಷ್ಯಾವು ನ್ಯಾಯಾಲಯದ ನ್ಯಾಯಾಧೀಶರನ್ನು ಕ್ಷಿಪಣಿಯಿಂದ ದಾಳಿ ನಡೆಸುವ ಬೆದರಿಕೆ ನೀಡಿದೆ. ರಷ್ಯಾದ ಭದ್ರತಾ ಪರಿಷತ್ತಿನ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಇವರು ಟೆಲಿಗ್ರಾಂ ಪೋಸ್ಟ್ರಿನ ಮೂಲಕ ಈ ಬೆದರಿಕೆ ನೀಡಿದ್ದಾರೆ.

ಮೆಡ್ವೆಡೇವ್ ಇವರು, ”ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇದು ಒಂದು ನಿರುಪಯುಕ್ತ ಸಂಸ್ಥೆಯಾಗಿದೆ. ಈ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಈಗ ಸತತ ಆಕಾಶದ ಕಡೆಗೆ ಗಮನ ಇಡಬೇಕು. ನಾವು ಸಮುದ್ರದಲ್ಲಿ ಯುದ್ಧ ನೌಕೆಯಿಂದ ಕ್ಷಿಪಣಿ ಹೇಗ (ನೆದರ್ಲ್ಯಾಂಡ್) ಇಲ್ಲಿಯ ನ್ಯಾಯಾಲಯದ ಮುಖ್ಯಾಲಯದ ಮೇಲೆ ಯಾವಾಗ ಬೇಕಿದ್ದರೂ ಹಾರಿಸಬಹುದು.” ಎಂದು ಹೇಳಿದರು. ಡಿಮಿಟ್ರಿ ಮೆಡ್ವೆಡೇವ್ ಇವರು ಈ ಹಿಂದೆ ಪುತಿನ್ ಇವರಿಗೆ ಜಾರಿ ಮಾಡಿರುವ ವಾರಂಟಅನ್ನು ಟಾಯ್ಲೆಟ್ ಪೇಪರ್ ಜೊತೆಗೆ ಹೋಲಿಸಿದ್ದರು.

(ಸೌಜನ್ಯ: NEWS 18)