ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ನಾವು ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ನೀಡುವುದಿಲ್ಲ ! – ಚೀನಾ

ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್

ಬೀಜಿಂಗ್ (ಚೀನಾ) – ಉಕ್ರೇನ್-ರಷ್ಯಾ ಯುದ್ಧದಲ್ಲಿ ಚೀನಾ ತಟಸ್ಥವಾಗಿರುತ್ತದೆ. ಯುದ್ಧದಲ್ಲಿ ಉಭಯ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದಿಲ್ಲ; ಆದರೇ ಈ ಕಾಲಾವಧಿಯಲ್ಲಿ ರಷ್ಯಾದೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಲಾಗುವುದು ಎಂದು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮಾಹಿತಿ ನೀಡಿದ್ದಾರೆ. ಅವರು ಜರ್ಮನಿಯ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.

೧. ಮತ್ತೊಂದೆಡೆ, ಯುದ್ಧಕ್ಕಾಗಿ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ನಿರ್ಧಾರವನ್ನು ಚೀನಾ ಅನುಮೋದಿಸಿದೆ ಮತ್ತು ಪೂರೈಕೆಯ ಮಾಹಿತಿಯನ್ನು ರಹಸ್ಯವಾಗಿಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

೨. ಮನವಿಯಲ್ಲಿ ಚೀನಾದ ವಿದೇಶಾಂಗ ಸಚಿವರು, ರಷ್ಯಾಗೆ ಕಳುಹಿಸಿದ ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಗುವ ಆ ಸರಕುಗಳನ್ನು ನಿಷೇಧಿಸಲಾಗುವುದು, ಚೀನಾವು ಆದಷ್ಟು ಬೇಗ ಯುದ್ಧವನ್ನು ಕೊನೆಗೊಳಿಸುವುದಿದೆ. ಇದಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.

೩. ಚೀನಾದ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮೆರಿಕಾ ಹೇಳಿದೆ. ‘ರಷ್ಯಾಗೆ ಸಹಾಯ ಮಾಡುವುದು, ಇದು ಚೀನಾದ ಹಿತಾಸಕ್ತಿಯಲ್ಲಿಲ್ಲ’, ಎಂದು ಅಮೇರಿಕಾ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ನಾವು ಸಂಪೂರ್ಣ ಪ್ರಕರಣದ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿದೆ.