ನಾವು ಅಮೇರಿಕಾದ ಡ್ರೋನ್ ಕೆಡವಿಲ್ಲ ! – ರಷ್ಯಾ

ಮಾಸ್ಕೊ – ರಷ್ಯಾದ ಯುದ್ಧ ವಿಮಾನ ಮಾರ್ಚ 15 ರಂದು ಅಮೇರಿಕಾದ ಡ್ರೋನ್ ‘ಎಂಕ್ಯೂ-9’ ಹೊಡೆದು ಬೀಳಿಸಿದೆಯೆಂದು ಅಮೇರಿಕಾ ಆರೋಪಿಸಿದೆ. ರಷ್ಯಾದ ವಿಮಾನ ಮತ್ತು ಅಮೇರಿಕಾದ ಡ್ರೋನ್ ಕಪ್ಪು ಸಮುದ್ರದ ಮೇಲೆ ಸುತ್ತುತ್ತಿರುವಾಗ ಈ ಘಟನೆ ನಡೆದಿದೆಯೆಂದು ಅಮೇರಿಕಾ ಹೇಳಿದೆ. ನಾವು ಅಮೇರಿಕಾದ ಯಾವುದೇ ಡ್ರೋನ್ ಕೆಡವಿಲ್ಲವೆಂದು ರಷ್ಯಾ ತಿಳಿಸಿದೆ. ಈ ಘಟನೆಯ ಬಳಿಕ ಎರಡೂ ದೇಶಗಳಲ್ಲಿ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದ ಕಪ್ಪು ಸಮುದ್ರದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಬಿಗುವಿನ ವಾತಾವರಣ ಇದೆ. ರಷ್ಯಾ ಮತ್ತು ಅಮೇರಿಕಾದ ವಿಮಾನಗಳು ಇಲ್ಲಿ ಹಲವಾರು ಬಾರಿ ಹಾರಾಟ ನಡೆಸುತ್ತಿರುತ್ತವೆ; ಆದರೆ ಎರಡೂ ವಿಮಾನಗಳು ಎದುರುಬದುರಾಗಿರುವುದು ಇದೇ ಮೊದಲ ಬಾರಿಯಾಗಿದೆ. ಅಮೇರಿಕಾ, ರಷ್ಯಾದ ಎಸ್ಯೂ -27 ಈ ಎರಡು ಯುದ್ಧ ವಿಮಾನಗಳು ಅವರ ಡ್ರೋನ್ ಗೆ ಡಿಕ್ಕಿ ಹೊಡೆದು ಕಪ್ಪು ಸಮುದ್ರದಲ್ಲಿ ಪತನಗೊಂಡಿತು ಎಂದು ಅಮೇರಿಕಾ ಹೇಳಿದೆ. ಅಮೇರಿಕೆಯ ವಾಯುದಳದ ಜನರಲ್ ಜೇಮ್ಸ್ ಹ್ಯಾಕರ ಇವರು ರಷ್ಯಾದ ಕೃತ್ಯ ಅತ್ಯಂತ ಬೇಜವಾಬ್ದಾರಿತನ ಮತ್ತು ಪ್ರಚೋದನಕಾರಿ ಇದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾವು ಅಮೇರಿಕಾದ ಆರೋಪವನ್ನು ತಳ್ಳಿ ಹಾಕಿದೆ.