ಹಿಂದೂ ಯುವಕನನ್ನು ಮದುವೆಯಾಗಿದ್ದರಿಂದ ಮುಸಲ್ಮಾನ ಹುಡುಗಿಗೆ ಸಂಬಂಧಿಕರಿಂದ ಥಳಿತ !
ರರಿಯಾ ಗ್ರಾಮದಲ್ಲಿ ಹಿಂದೂ ಯುವಕನನ್ನು ವಿವಾಹವಾಗಿದ್ದ ಮುಸಲ್ಮಾನ ಯುವತಿಯನ್ನು ಸಂಬಂಧಿಕರು ಥಳಿಸಿದ್ದಾರೆ. ಜೊತೆಗೆ ಅವಳ ತಲೆಯ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಅವಳನ್ನು ಸಂಪೂರ್ಣ ಹಳ್ಳಿಯಲ್ಲಿ ಮೆರವಣಿಗೆಯನ್ನು ತೆಗೆಯಲಾಯಿತು. ಈ ಮಾಹಿತಿ ದೊರೆತ ಕೂಡಲೇ ಪೊಲೀಸರು ಗ್ರಾಮಕ್ಕೆ ತೆರಳಿ ಬಾಲಕಿಯನ್ನು ಬಿಡುಗಡೆ ಮಾಡಿ ೮ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ೫ ಜನರನ್ನು ಬಂಧಿಸಲಾಗಿದೆ.