ರೆವಾರಿ(ಹರಿಯಾಣ) ದಲ್ಲಿ ೧೦ ವರ್ಷದ ಬಾಲಕಿಯ ಮೇಲೆ ೭ ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ಅತ್ಯಾಚಾರವನ್ನು ಚಿತ್ರೀಕರಿಸಿ ವಿಡಿಯೋ ಮಾಡಿದ ಮಕ್ಕಳು !

ಅತ್ಯಾಚಾರಿಗಳಲ್ಲಿ ಒಬ್ಬರೇ ಮಾತ್ರ ವಯಸ್ಕ, ಉಳಿದ ಆರೋಪಿಗಳೆಲ್ಲ ೧೦ ರಿಂದ ೧೨ ವರ್ಷದ ಮಕ್ಕಳು !

* ೧೦ ರಿಂದ ೧೨ ವರ್ಷದೊಳಗಿನ ಮಕ್ಕಳು ಸಹ ಅತ್ಯಾಚಾರ ಮಾಡಬಲ್ಲರು, ಎಂದರೆ ಈಗ ವಯಸ್ಕ ವ್ಯಕ್ತಿಯ ವಯಸ್ಸಿನ ಮಿತಿಯನ್ನು ೧೮ ಕ್ಕಿಂತಲೂ ಕಡಿಮೆ ಮಾಡಬೇಕು, ಎಂಬುದೇ ಗಮನಕ್ಕೆ ಬರುತ್ತದೆ ! ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ‘ಪೋಸ್ಕೋ’ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಮೂಲಕ ಅದನ್ನು ಇನ್ನಷ್ಟು ಕಠಿಣಗೊಳಿಸಬೇಕು !

* ಮಕ್ಕಳ ಕೈಯಲ್ಲಿ ಸ್ಮಾರ್ಟ್‍ಫೋನ್ ಬಂದಾಗಿನಿಂದ, ಅದನ್ನು ಅನೈತಿಕ ವಿಷಯಗಳಿಗೆ ಎಷ್ಟು ಬಳಸಲಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರಿಗೆ ಸರಿಯಾದ ಸಂಸ್ಕಾರವನ್ನು ನೀಡಲು ವೈಫಲ್ಯ ಉಂಟಾದುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಧರ್ಮಶಿಕ್ಷಣವು ಎಷ್ಟು ಅಗತ್ಯವಾಗಿದೆ ಎಂದು ಸ್ಪಷ್ಟವಾಗುತ್ತದೆ !

ರೆವಾರಿ (ಹರಿಯಾಣಾ) – ಇಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿರುವುದು ಗಮನಕ್ಕೆ ಬಂದಿದೆ. ಈ ೭ ಜನರಲ್ಲಿ ಒಬ್ಬನಿಗೆ ಮಾತ್ರ ೧೮ ವರ್ಷವಾಗಿದ್ದು ಮತ್ತು ಉಳಿದವರೆಲ್ಲರೂ ೧೦ ರಿಂದ ೧೨ ವರ್ಷ ವಯಸ್ಸಿನವರಾಗಿದ್ದಾರೆ. ಈ ಆರೋಪಿಗಳು ಅತ್ಯಾಚಾರ ಮಾಡುವಾಗ ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸಂತ್ರಸ್ತೆಯ ನೆರೆಹೊರೆಯವರು ಬಾಲಕಿಯ ಕುಟುಂಬಕ್ಕೆ ತಿಳಿಸಿದ್ದಾರೆ. ಆ ನಂತರ ಪೊಲೀಸರಿಗೆ ದೂರು ನೀಡಿ ಅಪರಾಧವನ್ನು ದಾಖಲಿಸಲಾಗಿದೆ. ವಿಡಿಯೋ ಆಧಾರದ ಮೇಲೆ ಸಂತ್ರಸ್ತೆಯ ನೆರೆಹೊರೆಯವರು ಆರೋಪಿಗಳನ್ನು ಗುರುತಿಸಿದ್ದಾರೆ. ಈ ವಿಡಿಯೋ ಪ್ರಸಾರ ಮಾಡಿದ ವ್ಯಕ್ತಿಯನ್ನೂ ಪೊಲೀಸರು ಹುಡುಕುತ್ತಿದ್ದಾರೆ.