ಪಾಕಿಸ್ತಾನಿ ಸೈನ್ಯವು ‘ಹಮಾಸ್’ನ ಭಯೋತ್ಪಾದಕರಿಗೆ ತರಬೇತಿಯನ್ನು ನೀಡುತ್ತದೆ ! – ಪಾಕಿಸ್ತಾನದ ಹಿರಿಯ ನಾಯಕನಿಂದ ರಹಸ್ಯಸ್ಪೋಟ

ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.

ಅಲ್ ಖೈದಾದ ಕಟ್ಟರ ಭಯೋತ್ಪಾದಕರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಡಗಿದ್ದಾರೆ ! – ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಉಗ್ರನಿಗ್ರಹ ದಳವು ಸಲ್ಲಿಸಿದ ವರದಿಯಲ್ಲಿ, ಅಲ್ ಖೈದಾದ ಹೆಚ್ಚಿನ ಭಯೋತ್ಪಾದಕರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಡಗಿಕೊಂಡಿದ್ದಾರೆ ಇದರಲ್ಲಿ ಮಾಜಿ ಅಲ್ ಖೈದಾ ಮುಖ್ಯಸ್ಥ ಅಯಮಾನ್ ಅಲ್ ಜವಾಹರಿ ಬದುಕಿದ್ದಾನೆ.