ತಾಲಿಬಾನ್‍ಗೆ ಸಹಾಯ ಮಾಡುತ್ತಿರುವ ಪಾಕಿಸ್ತಾನ ಶೀಘ್ರದಲ್ಲೇ ತಕ್ಕ ಪರಿಣಾಮ ಭೋಗಿಸಲಿದೆ ! – ಇರಾನಿನ ಮಾಜಿ ರಾಷ್ಟ್ರಪತಿ ಮಹಮೂದ್ ಅಹಮದಿನೆಜಾದ್

ಇರಾನಿನ ಮಾಜಿ ರಾಷ್ಟ್ರಪತಿ ಮಹಮೂದ್ ಅಹಮದಿನೆಜಾದ್

ತೆಹರಾನ್ (ಇರಾನ್) – ಅಫ್ಘಾನಿಸ್ತಾನದ ಪಂಜ್‍ಶಿರ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವು ತಾಲಿಬಾನ್‍ಗೆ ಬಹಿರಂಗವಾಗಿ ಸಹಾಯ ಮಾಡಿದೆ. ಪಾಕಿಸ್ತಾನದ ಸೇನಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು. ಪಂಜ್‍ಶಿರ್ ನಲ್ಲಿ ಏನೆಲ್ಲಾ ಆಯಿತು ಅದರ ಪರಿಣಾಮಗಳನ್ನು ಪಾಕಿಸ್ತಾನ ಅನುಭವಿಸಲಿದೆ, ಎಂದು ಇರಾನಿನ ಮಾಜಿ ರಾಷ್ಟ್ರಪತಿ ಮಹಮೂದ್ ಅಹಮದಿನೆಜಾದ್ ಎಚ್ಚರಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಭಾರತ ಮತ್ತು ಇರಾನ್ ಒಟ್ಟಾಗುವುದು ಅಗತ್ಯ

ಅಹಮದಿನೆಜಾದ್ ತಮ್ಮ ಮಾತನ್ನು ಮುಂದುವರೆಸುತ್ತಾ, ಅಫ್ಘಾನಿಸ್ತಾನದಲ್ಲಿನ ಘಟನಾವಳಿಗಳು ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಇರಾನ್, ಪಾಕಿಸ್ತಾನ, ಭಾರತ ಮತ್ತು ಚೀನಾದ ಮೇಲೆ ಪರಿಣಾಮ ಬೀರಲಿದೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಭಾರತ ಮತ್ತು ಇರಾನ್ ಒಟ್ಟಾಗುವುದು ಅಗತ್ಯವಿದೆ. ರಾಜಕೀಯ ಮತ್ತು ಮಾನವ ಸಂಪನ್ಮೂಲದ ಆಧಾರದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.

ತಾಲಿಬಾನ್‍ಗೆ ಮಾನ್ಯತೆ ನೀಡುವುದು ಲಜ್ಜಾಸ್ಪದ !

ಶಸ್ತ್ರಾಸ್ತ್ರಗಳ ಆಧಾರದಲ್ಲಿ ಅಧಿಕಾರ ಗಿಟ್ಟಿಸಿಕೊಂಡ ಮತ್ತು ಯಾವುದೇ ನೀತಿ ಇಲ್ಲದವರ ಸರಕಾರಕ್ಕೆ ಮಾನ್ಯತೆ ನೀಡುವುದು ಲಜ್ಜಾಸ್ಪದವಾಗಿದೆ. ಇಂತಹ ಮಾನ್ಯತೆಯಿಂದ ಇಡೀ ಸಮಾಜಕ್ಕೆ ಹಾನಿಯಾಗುವುದು ಎಂದೂ ಅಹಮದಿನೆಜಾದ್ ಇವರು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿರುವ ಬಗ್ಗೆ ಹೇಳಿದರು.