ಕಾಬುಲ್ (ಅಫಫಾನಿಸ್ತಾನ) – ತಾಲಿಬಾನ್ ಸಂಪೂರ್ಣ ಅಫಫಾನಿಸ್ತಾನದ ಮೇಲೆ ಹಿಡಿತವನ್ನು ಸಾಧಿಸಿದ ನಂತರ ಸರಕಾರ ರಚನೆಯ ಕಾರ್ಯಕ್ರಮವನ್ನು ಆಯೋಜಿಸಿದೆ. ತಾಲಿಬಾನದ ವಕ್ತಾರ ಜಬಿವುಲ್ಲಾ ಮುಜಾಹಿದ್ ಇವರು ‘ಮುಂದಿನ ವಾರ ಸರಕಾರ ರಚನೆ ಮಾಡಲಾಗುವುದು’, ಎಂದು ಹೇಳಿದ್ದಾರೆ. ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ಸರಕಾರವನ್ನು ರಚಿಸುವುದು ತಾಲಿಬಾನ್ ನ ಪ್ರಯತ್ನವಾಗಿದೆ’, ಎಂದು ಅವರು ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ತಾಲಿಬಾನವು ರಶಿಯಾ, ಚೀನಾ, ಪಾಕಿಸ್ತಾನ, ಇರಾನ್, ಕತಾರ್, ಮತ್ತು ತುರ್ಕಸ್ತಾನ ಈ ದೇಶಗಳನ್ನು ಆಮಂತ್ರಿಸಿದೆ. ಈ ದೇಶಗಳು ಇದರ ಮೊದಲೆ ತಾಲಿಬಾನರ ಜೊತೆಗೆ ಸಂಪರ್ಕ ಸಾಧಿಸಿವೆ. ರಶಿಯಾ, ಚೀನಾ, ಪಾಕಿಸ್ತಾನ, ಮತ್ತು ತುರ್ಕಸ್ತಾನ ಈ ದೇಶಗಳು ಅಫ್ಘಾನಿಸ್ತಾನದಲ್ಲಿನ ತಮ್ಮ ರಾಯಭಾರಿ ಕಚೇರಿಗಳನ್ನು ಮುಚ್ಚಿಲ್ಲ.
Taliban finalises new govt formation in Afghanistan, invites China, Pakistan, Russia https://t.co/1oISqH7Hhu #Taliban
— Oneindia News (@Oneindia) September 6, 2021