ದೇಶ ಮತ್ತು ವಿದೇಶಗಳಲ್ಲಿ ಹಿಂಸೆ ಇದುವೇ ಪಾಕಿಸ್ತಾನದ ಸಂಸ್ಕೃತಿ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಿವಿ ಹಿಂಡಿದ ಭಾರತ

ಪಾಕಿಸ್ತಾನವು ಒಂದು ನಿರ್ಲಜ್ಜ (ಕಲ್ಲಿನಂತಿರುವ) ದೇಶವಾಗಿರುವುದರಿಂದ, ಅದನ್ನು ಶಬ್ದಗಳಿಂದ ಎಷ್ಟೇ ಟೀಕಿಸಿದರೂ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ! ಅದನ್ನು ಶಾಶ್ವತವಾಗಿ ನಾಶ ಮಾಡುವುದು ಮಾತ್ರ ಯೋಗ್ಯ !

ಪ್ರಾತಿನಿಧಿಕ ಚಿತ್ರ

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನವು ತನ್ನ ಮನೆಯಲ್ಲಿ ಮತ್ತು ವಿದೇಶಗಳಲ್ಲಿ ಹಿಂಸೆಯ ಸಂಸ್ಕೃತಿಯನ್ನು ಮುಂದುವರಿಸಿದೆ; ಏಕೆಂದರೆ ಅವರು ಭಾರತದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿದ್ದಾರೆ. ನಾವು ಇಂತಹ ಎಲ್ಲ ಪ್ರಯತ್ನಗಳನ್ನು ನಿಷೇಧಿಸುತ್ತೇವೆ ಮತ್ತು ಅವುಗಳನ್ನು ಖಂಡಿಸುತ್ತೇವೆ, ಎಂಬ ಮಾತುಗಳಲ್ಲಿ ಭಾರತವು ಪಾಕಿಸ್ತಾನದ ಕಿವಿ ಹಿಂಡಿದೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ವಿದಿಶಾ ಮೈತ್ರಾ ಒಂದು ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ ಅಕ್ರಮ್ ಇವರು ಜಮ್ಮು ಮತ್ತು ಕಾಶ್ಮೀರ ಸೂತ್ರವನ್ನು ಮಂಡಿಸಿದ್ದರು. ಅದೇ ರೀತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಇವರ ಸಾವಿನ ನಂತರ ಪಾಕಿಸ್ತಾನವು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿತು. ಅದಕ್ಕೆ ಭಾರತ ಪ್ರತಿಕ್ರಿಯಿಸಿದೆ.