ಪಾಕಿಸ್ತಾನದ ಕ್ವೇಟ್ಟಾದಲ್ಲಾದ ಆತ್ಮಾಹುತಿ ದಾಳಿಯಲ್ಲಿ ಮೂರು ಜನರ ಹತರಾಗಿದ್ದು 20 ಜನ ಗಾಯಾಳುಗಳು

ದಾಳಿಯ ಜವಾಬ್ದಾರಿ ಸ್ವೀಕರಿಸಿದ ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’

ಕ್ವೆಟ್ಟಾ (ಪಾಕಿಸ್ತಾನ) – ಪಾಕ್‍ನ ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೇಟ್ಟಾದಿಂದ ಸುಮಾರು 25 ಕಿಲೋಮೀಟರ್ ದಕ್ಷಿಣದಲ್ಲಿರುವ ಕ್ವೇಟ್ಟಾ ಮಸ್ತುಂಗ ರಸ್ತೆಯ ‘ಪ್ಯಾರಾಮಿಲಿಟರಿ ಫ್ರಂಟಿಯರ್ ಕಾಪ್ರ್ಸ್‍ನ ಒಂದು ಚೌಕಿಯ ಮೇಲೆ ನಡೆದಿರುವ ಆತ್ಮಾಹುತಿ ದಾಳಿಯಲ್ಲಿ ಮೂರು ಜನರು ಹತರಾಗಿ 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ. ಈ ಆತ್ಮಾಹುತಿ ದಾಳಿ ಮಾಡಿದ ಉಗ್ರನು ದ್ವಿಚಕ್ರವಾಹನದಲ್ಲಿ ಬಂದಿದ್ದನು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರು ಈ ದಾಳಿಯನ್ನು ಖಂಡಿಸಿದ್ದಾರೆ.