ಪಾಕಿಸ್ತಾನವೇ ತಾಲಿಬಾನನ್ನು ಸಾಕಿದೆ ! – ಭಾರತದ ಆರೋಪ

ಇಂತಹ ಆರೋಪಗಳಿಂದ ತಾಲಿಬಾನ್ ಮತ್ತು ಪಾಕ್ ಇವುಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಮತ್ತು ಆಗುವುದು ಸಹ ಇಲ್ಲ ! ಅದರ ಬದಲಾಗಿ ಪಾಕಿಸ್ತಾನವನ್ನು ನಾಶಗೊಳಿಸಲು ಭಾರತವು ಏನಾದರೂ ಪ್ರಯತ್ನ ಮಾಡಿದರೆ ಅದು ಹೆಚ್ಚು ಯೋಗ್ಯವಾಗುವುದು ! – ಸಂಪಾದಕರು 

ಭಾರತದ ವಿದೇಶಾಂಗ ಸಚಿವ ಹರ್ಷವರ್ಧನ ಶೃಂಗಲಾ

ವಾಷಿಂಗ್ಟನ್ (ಅಮೇರಿಕಾ) – ಪಾಕಿಸ್ತಾನವು ಅಫಫಾನಿಸ್ತಾನದ ನೆರೆಯ ದೇಶವಾಗಿದೆ. ಅದುವೇ ತಾಲಿಬಾನನ್ನು ಸಾಕಿಸಲಹಿದೆ. ಇಂತಹ ಅನೇಕ ಘಟನೆಗಳಿಗೆ ಪಾಕಿಸ್ತಾನವೇ ಅದರ ಬಲ ನೀಡಿದೆ. ವಿಶ್ವ ಸಂಸ್ಥೆಯು ನಿಷೇಧ ಹೇರಿದ್ದ ‘ಜೈಶ್-ಎ-ಮೊಹಮ್ಮದ್’ ಮತ್ತು ಲಷ್ಕರ್-ಎ-ತೋಯಿಬಾ, ಇವುಗಳು ಸಹ ಅದರಲ್ಲಿ ಒಳಗೊಂಡಿವೆ. ಈ ಎರಡು ಗುಂಪುಗಳು ಈ ಮೊದಲು ಅಫಫಾನಿಸ್ತಾನದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿವೆ. ಈಗಲೂ ಅವರ ಗಮನ ಅಲ್ಲಿಯೇ ಇದೆ ! ಪಾಕಿಸ್ತಾನದತ್ತ ಈ ದೃಷ್ಟಿಕೋನದಿಂದ ನೋಡುವುದು ಅವಶ್ಯಕವಾಗಿದೆ, ಎಂಬ ಪದಗಳಲ್ಲಿ ಭಾರತದ ವಿದೇಶಾಂಗ ಸಚಿವ ಹರ್ಷವರ್ಧನ ಶೃಂಗಲಾ ಇವರು ಟೀಕಿಸಿದ್ದಾರೆ. ಅಮೇರಿಕಾದ ಪ್ರವಾಸದಲ್ಲಿರುವ ಶೃಂಗಲಾ ಇವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು. ಅವರು ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಇವರನ್ನು ಕೂಡಾ ಭೇಟಿ ಮಾಡಿದರು.

ಶೃಂಗಲಾರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಅಫಫಾನಿಸ್ತಾನದಲ್ಲಿನ ಸ್ಥಿತಿಯನ್ನು ಭಾರತ ಮತ್ತು ಅಮೇರಿಕಾ ಇವು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಫಫಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ ಬಹಳ ಅಸ್ಥಿರ ಮತ್ತು ಸಂದಿಗ್ಧವಾಗಿದೆ. ಭಾರತವು ಸದ್ಯಕ್ಕಂತೂ ಯಾವುದೇ ಸ್ವರೂಪದ ಸಹಭಾಗ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ, ಎಂದು ಹೇಳಿದ್ದಾರೆ.