ನಾವು ತಾಲಿಬಾನಿಗಳ ರಕ್ಷಕರಾಗಿದ್ದೇವೆ ಮತ್ತು ಅವರಿಗಾಗಿ ಎಲ್ಲವನ್ನು ಮಾಡಿದ್ದೇವೆ ! – ಪಾಕ್‍ನ ಮಂತ್ರಿಯಿಂದ ಒಪ್ಪಿಗೆ

* ಈವರೆಗೆ ತಾಲಿಬಾನವು ಏನನ್ನು ನಿರಾಕರಿಸುತ್ತಿತ್ತೋ ಅದನ್ನೇ ಪಾಕ್ ಮಂತ್ರಿ ರಾಜಾರೋಷವಾಗಿ ಹೇಳಿದ್ದರಿಂದ ತಾಲಿಬಾನ ಇದಕ್ಕೆ ಏನೆಂದು ಉತ್ತರಿಸಲಿದೆ ? ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್‍ಅನ್ನು `ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ ! – ಸಂಪಾದಕರು 

* ಭಾರತದಲ್ಲಿನ ಪಾಕ್ ಪ್ರಿಯರು ಈಗ ಬಾಯಿ ತೆರೆಯುವರೇನು ? – ಸಂಪಾದಕರು 

ಮಂತ್ರಿ ಶೇಖ ರಾಶಿದ

ಇಸ್ಲಾಮಾಬಾದ (ಪಾಕಿಸ್ತಾನ) – ನಾವು ಬಹಳ ಕಾಲಾವಧಿಯ ತನಕ ತಾಲಿಬಾನ್ ನಾಯಕರಿಗೆ ರಕ್ಷಣೆ ನೀಡಿದ್ದೇವೆ. ನಮ್ಮಲ್ಲಿ ಅವರು ಶರಣಾರ್ಥಿ ಎಂದು ಬಂದಿದ್ದರು. ಅವರು ಪಾಕ್‍ನಲ್ಲಿ ಶಿಕ್ಷಣ ಪಡೆದು ಮತ್ತು ಇಲ್ಲಿಯೇ ತಮ್ಮ ಮನೆ ಮಾಡಿಕೊಂಡರು. ನಾವು ತಾಲಿಬಾನಿಗಳ ರಕ್ಷಕರಾಗಿ ತಾಲಿಬಾನಿಗಳಿಗಾಗಿ ಎಲ್ಲವನ್ನೂ ಮಾಡಿದ್ದೇವೆ. ಎಂದು ಪಾಕ್‍ನ ಮಂತ್ರಿ ಶೇಖ ರಾಶಿದ ಇವನ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. ಈ ಮೊದಲು ಪಾಕ್‍ನ ಪ್ರಧಾನಿ, ಮಂತ್ರಿ ಮತ್ತು ಆಟಗಾರರು ಇವರು ತಾಲಿಬಾನ್‍ಗೆ ವಿವಿಧ ಮಾಧ್ಯಮದಿಂದ ಬೆಂಬಲ ನೀಡಿದ್ದಾರೆ.