ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರನ್ನು ಭಾರತದ ವಿರುದ್ಧ ಉಪಯೋಗಿಸಲು ಐ.ಎಸ್.ಐ.ನ ಸಿದ್ಧತೆ!

ಪಾಕಿಸ್ತಾನಿ ಗೂಢಚರ ಸಂಸ್ಥೆ ಐ.ಎಸ್.ಐ. ನ ಷಡ್ಯಂತ್ರ ಬಯಲು

ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ ! – ಸಂಪಾದಕರು 

ನವದೆಹಲಿ – ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಅಲ್ಲಿಯ ಇಸ್ಲಾಮಿಕ್ ಸ್ಟೇಟನ ಅನೇಕ ಭಯೋತ್ಪಾದಕರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದ್ದಾರೆ. ಪಾಕಿಸ್ತಾನದ ಗೂಢಚರ ಸಂಸ್ಥೆ ಐ.ಎಸ್.ಐ. ಈ ಭಯೋತ್ಪಾದಕರನ್ನು ಭಾರತದ ಮೇಲೆ ದಾಳಿ ಮಾಡಿಸಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳಿಸುವ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಈ ಮೊದಲು ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರ ಹೆಸರು ಕಾಬುಲ್ ವಿಮಾನ ನಿಲ್ದಾಣದಲ್ಲಾದ ದಾಳಿಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಈ ದಾಳಿಯಲ್ಲಿ 13 ಅಮೆರಿಕಾದ ಸೈನಿಕರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಹತರಾಗಿದ್ದರು. ವಾರ್ತಾ ಸಮೂಹಗಳ ಮಾಹಿತಿಗನುಸಾರ ಭಯೋತ್ಪಾದಕರು ಅಫಘಾನಿಸ್ತಾನದಲ್ಲಿನ ಅಮೆರಿಕಾದ ಸೈನಿಕರು ಉಪಯೋಗಿಸುತ್ತಿರುವ ಶಸ್ತ್ರಾಸ್ತ್ರಗಳನ್ನು ಅವರಿಗೆ ಪೂರೈಸಿ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುಸುವ ಸಿದ್ಧತೆ ನಡೆಸಿದೆ. ಅಲ್ಲಿಂದ ಅವರನ್ನು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಕಳುಹಿಸಬಹುದು. ಹಾಗೂ ತಾಲಿಬಾನ್‍ನ ಸಹಾಯಕ್ಕಾಗಿ ಪಾಕಿಸ್ತಾನದಿಂದ ಎಂಟು ಸಾವಿರಕ್ಕಿಂತಲೂ ಹೆಚ್ಚಿನ ಉಗ್ರರು ಅಫಘಾನಿಸ್ತಾನಕ್ಕೆ ಹೋಗಿದ್ದರು. ಅಲ್ಲಿಯ ಯುದ್ಧ ಮುಗಿದ ನಂತರ ಅವರು ಪಾಕಿಸ್ತಾನಕ್ಕೆ ವಾಪಾಸು ಬರುತ್ತಿರುವುದು ಕಂಡುಬಂದಿತ್ತು. ಅವರನ್ನೂ ಐ.ಎಸ್.ಐ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳಿಸುವ ಸಾಧ್ಯತೆಯಿದೆ.