ಕಾಬೂಲನಲ್ಲಿ ಪಾಕಿಸ್ತಾನದ ವಿರುದ್ಧ ಮೆರವಣಿಗೆ ನಡೆಸುವವರನ್ನು ತಡೆಗಟ್ಟಲು ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು ಹಾರಾಟ!

ಇದರಿಂದ ತಾಲಿಬಾನಿಗಳ ಪಾಕಿಸ್ತಾನ ಪ್ರೇಮವು ಹೆಚ್ಚು ಸ್ಪಷ್ಟವಾಗುತ್ತದೆ! ತಾಲಿಬಾನಿಗೆ ಸಹಾಯ ಮಾಡುವ ಪಾಕಿಸ್ತಾನದ ವಿರುದ್ಧ ಜಗತ್ತಿನ ಒಂದೇ ಒಂದು ದೇಶವು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

ಕಾಬೂಲ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿನ ಘಟನಾವಳಿಗಳಲ್ಲಿ ಪಾಕಿಸ್ತಾನವು ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಇಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್‌ತು. ಹೆಚ್ಚುಕಮ್ಮಿ ೭೦ ಜನರು ಪಾಕಿಸ್ತಾನದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ಮಾಡುತ್ತಿದ್ದರು. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದ ಆಂದೋಲನಕಾರರನ್ನು ಅಲ್ಲಿಂದ ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದರು. ಪಾಕಿಸ್ತಾನ ಮತ್ತು ಐ.ಎಸ್.ಐ. ನ ಸಂಚಾಲಕರು ಕಳೆದ ಒಂದು ವಾರದಿಂದ ಇಲ್ಲಿನ ಸೆರೆನಾ ಹೋಟೇಲಿನಲ್ಲಿ ವಾಸ್ತವ್ಯದಲ್ಲಿದ್ದು ಆಂದೋಲನಕಾರರು ಆ ದಿಕ್ಕಿನತ್ತ ಹೊರಟುಹೋದರು.