ಇದರ ಅರ್ಥ ಪಾಕಿಸ್ತಾನವು ಅಫ್ಘಾನಿಸ್ತಾನದ ಅರ್ಥವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಿದೆ ! ಪಾಕ್‍ನ ಈ ಸಂಚನ್ನು ಜಾಗತಿಕ ಸಮುದಾಯ ಯಾವಾಗ ಗುರುತಿಸುವುದು ? – ಸಂಪಾದಕರು
ಕಾಬುಲ(ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ಬಳಿ ಅಮೆರಿಕನ್ ಡಾಲರ್ಸ್‍ನ ಕೊರತೆ ಇದೆ. ಆದ್ದರಿಂದ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ಮಾಡುವಾಗ ಪಾಕಿಸ್ತಾನದ ರೂಪಾಯಿಗಳ ಉಪಯೋಗ ಮಾಡಲಾಗುವುದು, ಎಂಬ ಮಾಹಿತಿಯನ್ನು ಪಾಕ್‍ನ ಕೇಂದ್ರೀಯ ಅರ್ಥ ಸಚಿವ ಶೌಕತ ತಾರಿನ ಘೋಷಿಸಿದರು.
Pakistan will use own currency for bilateral trade with Taliban govt in Afghanistan: Sourceshttps://t.co/HQwYL2mk7N
— Zee News English (@ZeeNewsEnglish) September 10, 2021
ಶೌಕತ್ ತಾರಿನ ಮಾತನ್ನು ಮುಂದುವರೆಸುತ್ತಾ, ಅಫ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ನಾವು ನಿರಂತರ ನಿಗಾ ಇಟ್ಟಿದ್ದೇವೆ. ಅಫ್ಘಾನಿಸ್ತಾನದ ಅರ್ಥವ್ಯವಸ್ಥೆ ಒಂದು ಹಂತಕ್ಕೆ ಬರಲು ಪಾಕಿಸ್ತಾನ ತನ್ನಿಂದ ಏನು ಸಾಧ್ಯವೋ ಆ ಎಲ್ಲಾ ಸಹಾಯವು ಮಾಡಲಿದೆ. ಈ ಉದ್ದೇಶದಿಂದ ಒಂದು ತಂಡ ಅಫ್ಘಾನಿಸ್ತಾನಕ್ಕೆ ಕಳುಹಿಸುವ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.