ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಗುರುಪೂರ್ಣಿಮೆಗಾಗಿ ಮನೆಯಲ್ಲಿ ಕುಳಿತು ಆನ್‌ಲೈನ್ ಅರ್ಪಣೆ ಮಾಡುವ ಸೌಲಭ್ಯವೂ ಲಭ್ಯವಿದೆ – www.hindujagruti.org/donate
ಗುರುಪೂರ್ಣಿಮೆಗಾಗಿ ಮನೆಯಲ್ಲಿ ಕುಳಿತು ಆನ್‌ಲೈನ್ ಅರ್ಪಣೆ ಮಾಡುವ ಸೌಲಭ್ಯವೂ ಲಭ್ಯವಿದೆ – www.hindujagruti.org/donate
ತಪಸ್ಸು ಮತ್ತು ಶುದ್ಧಿಯಿಂದ ನಿರ್ಮಾಣವಾಗುವ ಕ್ರಿಯೆಯನ್ನು ಸದ್ಗುರುಗಳು ತ್ರಯಸ್ಥರಾಗಿ ದೂರದಿಂದಲೇ ನೋಡುತ್ತಿರುತ್ತಾರೆ ಮತ್ತು ಅದರಿಂದ ಹೊರಹೊಮ್ಮುವ ಕಲೆಯನ್ನು ಶಿಷ್ಯನು ಸ್ವತಃ ಅನುಭವಿಸುತ್ತಿರುತ್ತಾನೆ.
ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ (ಮಾನಸಿಕ ಒತ್ತಡ) ಮತ್ತು ಕಲ್ಪತರುವಿನಿಂದ ದೈನ್ಯ (ದಾರಿದ್ರ್ಯ) ದೂರವಾಗುತ್ತದೆ. ತದ್ವಿರುದ್ಧವಾಗಿ ಶ್ರೀಗುರುಗಳ ದರ್ಶನದಿಂದ ಪಾಪ, ತಾಪ ಮತ್ತು ದೈನ್ಯ ಈ ಮೂರೂ ವಿಷಯಗಳ ಹರಣವಾಗುತ್ತದೆ, ಅಂದರೆ ಈ ಮೂರೂ ತೊಂದರೆಗಳು ದೂರವಾಗುತ್ತವೆ.
ನಮ್ಮಲ್ಲಿ ಒಳ್ಳೆಯ ಗುಣಗಳು ಬಂದರೆ ‘ಆ ಗುಣಗಳು ಯೋಗೇಶ್ವರ ಭಗವಾನನು ನನ್ನ ಬೆನ್ನಿಗೆ ನಿಂತಿದ್ದಾನೆ ಆದುದರಿಂದ ಬಂದಿವೆ’, ಈ ಭಾವನೆ ಇರಬೇಕು. ಈ ಭಾವನೆ ಇದ್ದರೆ, ಅಹಂಕಾರದ ತೊಂದರೆ ಆಗುವುದಿಲ್ಲ
‘ನೋಡುವುದು, ಕೇಳಿಸಿಕೊಳ್ಳುವುದು, ಪರಿಮಳ ಆಘ್ರಾಣಿಸುವುದು, ರುಚಿ ಸವಿಯುವುದು, ಸ್ಪರ್ಶ ಮಾಡುವುದು, ಶಾರೀರಿಕ ಆರಾಮ, ಯಶಸ್ಸು ಮತ್ತು ಗೌರವ ಈ ಎಂಟು ರೀತಿಯ ಸುಖಗಳಿಗಿಂತ ಪರಾಮಾತ್ಮ-ಸುಖವು ವಿಶೇಷವಾಗಿದೆ. ಈ ಎಂಟು ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನು.’
ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ.
ಸೂರ್ಯನ ಕಾರ್ಯವಿರುವಂತೆಯೇ ಸದ್ಗುರುಗಳ ಕಾರ್ಯವಿರುತ್ತದೆ. ಸದ್ಗುರುಗಳು ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುತ್ತಾರೆ
ಕರ್ಮವನ್ನು ಕರ್ಮಯೋಗವನ್ನಾಗಿಸಲು ಕೌಶಲ್ಯ ಬೇಕಾಗುತ್ತದೆ ಮತ್ತು ಸಹಜವಾಗಿ ಕರ್ಮಯೋಗವನ್ನು ಆಚರಣೆಗೆ ತರಲು ಶಿಕ್ಷಣದ ಅಗತ್ಯವಿದೆ. ಇವೆರಡೂ ವಿಷಯಗಳನ್ನು ಕರಗತ ಮಾಡಿಕೊಂಡವರನ್ನು ‘ಸದ್ಗುರು’ ಎನ್ನುತ್ತಾರೆ.
‘ಆತ್ಮಕಲ್ಯಾಣಕ್ಕಿಂತ ಲೋಕಕಲ್ಯಾಣವು ಹೆಚ್ಚು ಶ್ರೇಯಸ್ಕರವಾಗಿರುತ್ತದೆ. ಶುದ್ಧ ಸತ್ತ್ವಗುಣಗಳ ಮೇಲೆ ವಿರಾಜಮಾನರಾಗದೇ ನಿಜವಾದ ಲೋಕಕಲ್ಯಾಣದ ಆಸೆ ಮನಸ್ಸಿನಲ್ಲಿ ಸೃಷ್ಟಿಯಾಗುವುದಿಲ್ಲ
‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ.