ಗುರುಗಳ ಮಹತ್ವ

ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |  ಪಾಪಂ ತಾಪಂ ಚ ದೈನ್ಯಂ ಚ ಹರೇಚ್ಛಿ ಗುರುದರ್ಶನಮ್ ||

– ಶ್ರೀಗುರುಚರಿತ್ರೆ, ಅಧ್ಯಾಯ ೧೩, ಶ್ಲೋಕ ೧೩೦

ಅರ್ಥ : ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ (ಮಾನಸಿಕ ಒತ್ತಡ) ಮತ್ತು ಕಲ್ಪತರುವಿನಿಂದ ದೈನ್ಯ (ದಾರಿದ್ರ್ಯ) ದೂರವಾಗುತ್ತದೆ. ತದ್ವಿರುದ್ಧವಾಗಿ ಶ್ರೀಗುರುಗಳ ದರ್ಶನದಿಂದ ಪಾಪ, ತಾಪ ಮತ್ತು ದೈನ್ಯ ಈ ಮೂರೂ ವಿಷಯಗಳ ಹರಣವಾಗುತ್ತದೆ, ಅಂದರೆ ಈ ಮೂರೂ ತೊಂದರೆಗಳು ದೂರವಾಗುತ್ತವೆ.