ಅಯೋಧ್ಯೆ – ಜನವರಿ 11 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾನ ಮೊದಲ ವರ್ಧಂತ್ಯುತ್ಸವವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಶ್ರೀ ರಾಮ ಲಲ್ಲಾಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರೋಹಿತರು ಶ್ರೀ ರಾಮ ಲಲ್ಲಾಗೆ ಪಂಚಾಮೃತ ಮತ್ತು ಗಂಗಾಜಲದಿಂದ ಅಭಿಷೇಕ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಮ ಮಂದಿರದಿಂದಾಗಿ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಿಸಲು ಸಹಾಯ ಮಾಡುತ್ತದೆ, ಎಂದು ಅವರು ಹೇಳಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು, ರಾಮಲಲ್ಲಾ ಅವರ ಮಹಾ ಆರತಿಯನ್ನು ನೆರವೇರಿಸಿದರು.
ದೇವಾಲಯದ ಟ್ರಸ್ಟಿಗಳ ಪ್ರಕಾರ, ವರ್ಧಂತ್ಯುತ್ಸವದಂದು 2 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಜನವರಿ 11 ರಿಂದ 13 ರವರೆಗೆ ಅಯೋಧ್ಯೆಯಲ್ಲಿ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ, ಸಾಮಾನ್ಯ ದರ್ಶನ ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಮುಂದುವರಿಯುತ್ತದೆ.