‘ಒಂದು ಬಾರಿ ಭೋಜ ರಾಜನು ಓರ್ವ ರತ್ನಗಳನ್ನು ಪರೀಕ್ಷಿಸುವವನಿಗೆ ಬಹುಮಾನ ನೀಡುವ ಆಜ್ಞೆಯನ್ನು ನೀಡಿದನು, ”ಮಂತ್ರಿಗಳೇ ! ಈ ರತ್ನಗಳನ್ನು ಪರೀಕ್ಷಿಸುವವನು ವಜ್ರಗಳನ್ನು ಪರೀಕ್ಷಿಸುವಲ್ಲಿ ಅದ್ವಿತೀಯ ಚಮತ್ಕಾರವನ್ನು ತೋರಿಸಿದ್ದಾನೆ. ನಿಮಗೆ ಯಾವುದು ಯೋಗ್ಯ ಅನಿಸುತ್ತದೆಯೋ ಆ ಬಹುಮಾನವನ್ನು ಇವನಿಗೆ ನೀಡಿರಿ’’, ಎಂದನು. ಆಗ ಮಂತ್ರಿಯು ‘ನನಗೇನು ಅನಿಸುತ್ತದೆ ಎಂದರೆ, ‘ಇವನ ತಲೆ ಮೇಲೆ ಏಳು ಜೋಡಿ ಚಪ್ಪಲಿಗಳಿಂದ ಹೊಡೆಯಬೇಕು. ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?’, ಎಂಬುದಾಗಿ ಸಭೆಯಲ್ಲಿ ಹೇಳಿದನು.
(ಆಧಾರ : ಮಾಸಿಕ ‘ಋಷಿಪ್ರಸಾದ’)