Hindu Heritage Month : ಅಮೇರಿಕಾದ ಓಹಿಯೋ ರಾಜ್ಯದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆ ತಿಂಗಳು’ ಎಂದು ಆಚರಿಸಲಾಗುವುದು !

ಕೊಲಂಬಸ್ (ಅಮೇರಿಕ) – ಅಮೇರಿಕಾದ ಓಹಿಯೋ ಗವರ್ನರ್ ಮೈಕ್ ಡಿವೈನ್ ಇವರು ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದು ಘೋಷಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ಈಗ ರಾಜ್ಯದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆ ತಿಂಗಳು’ ಎಂದು ಆಚರಿಸಲಾಗುವುದು. ಡೆವಿನ್ ಅವರು ಇತ್ತೀಚೆಗೆ ಮಾಜಿ ರಾಜ್ಯ ಸೆನೆಟರ್ ನೀರಜ್ ಅಂತಾನಿ ಅವರ ಸಮ್ಮುಖದಲ್ಲಿ ಮಸೂದೆಗೆ ಸಹಿ ಹಾಕಿದರು. ನೀರಜ್ ಅಂತಾನಿ ಕಳೆದ ವರ್ಷ ಕಾಯಿದೆಯ ಮುಖ್ಯ ಪ್ರಾಯೋಜಕರು ಮತ್ತು ಬೆಂಬಲಿಗರಾಗಿದ್ದರು.

ಡಿಸೆಂಬರ್ 2024 ರಲ್ಲಿ ಓಹಿಯೋ ಸ್ಟೇಟ್ ಹೌಸ್ ಮತ್ತು ಸೆನೆಟ್ ಈ ಮಸೂದೆಯನ್ನು ಅಂಗೀಕರಿಸಿತ್ತು. ಮಸೂದೆ ಈಗ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದ್ದು, 90 ದಿನಗಳಲ್ಲಿ ಜಾರಿಗೆ ಬರಲಿದೆ. ಅಕ್ಟೋಬರ್ 2025 ಓಹಿಯೋದ ಮೊದಲ ಅಧಿಕೃತ ‘ಹಿಂದೂ ಪರಂಪರೆ ತಿಂಗಳು’ ಆಗಲಿದೆ. ನೀರಜ್ ಅಂತಾನಿ ಅವರು ಓಹಿಯೋದ ಮೊದಲ ಹಿಂದೂ ಮತ್ತು ಭಾರತೀಯ ಅಮೆರಿಕನ್ ರಾಜ್ಯ ಸೆನೆಟರ್ ಆಗಿದ್ದಾರೆ.