world record : ಕುಂಭ ಕ್ಷೇತ್ರದ ಗೋಡೆಯ ಮೇಲೆ ಮೂಡಿದ ಭಾರತೀಯ ಸಂಸ್ಕೃತಿ; ವಿಶ್ವದಾಖಲೆಗೆ ಸೇರ್ಪಡೆ !

ಪ್ರಯಾಗರಾಜ ಕುಂಭ ಮೇಳ 2025

ಗೋಡೆಯ ಮೇಲೆ ಬಿಡಿಸಲಾದ ಗಂಗಾ ಸ್ನಾನದ ಚಿತ್ರ

ಪ್ರಯಾಗರಾಜ್, ಜನವರಿ 10 (ಸುದ್ದಿ) – ಉತ್ತರ ಪ್ರದೇಶ (ಆಡಳಿತದಿಂದ) ಸರಕಾರವು ಮಹಾಕುಂಭ ಕ್ಷೇತ್ರದ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 34 ಲಕ್ಷ ಚದರ ಅಡಿ ಗೋಡೆಗಳ ಮೇಲೆ ಚಿತ್ರಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿಶ್ವದಾಖಲೆ ಮಾಡಿದೆ. ಗುರು-ಶಿಷ್ಯ ಪರಂಪರೆ, ಭಾರತದಲ್ಲಿನ ಋಷಿ-ಮುನಿಗಳು, ಪ್ರಯಾಗರಾಜದ ಇತಿಹಾಸ, ದೇವಸ್ಥಾನ ಸಂಸ್ಕೃತಿ, ಗೋಮಾತೆಯ ಮಹತ್ವ, ಆಖಾಡಗಳ ಮಾಹಿತಿ, ರಾಮಾಯಣ-ಮಹಾಭಾರತದ ಕಥೆಗಳು, ಸಮುದ್ರ ಮಂಥನ ಇತ್ಯಾದಿ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಈ ಎಲ್ಲಾ ಚಿತ್ರಗಳು ತುಂಬಾ ಅದ್ಭುತವಾಗಿದ್ದು ಲಕ್ಷಾಂತರ ಜನರ ಗಮನ ಸೆಳೆಯುತ್ತಿವೆ. 2019 ರಲ್ಲಿ ನಡೆದ ಅರ್ಧಕುಂಭಮೇಳದಲ್ಲಿ, 1.5 ಲಕ್ಷ ಚದರ ಅಡಿ ಗೋಡೆಗಳ ಮೇಲೆ ಈ ರೀತಿ ಚಿತ್ರಿಸಲಾಗಿತ್ತು. ಈ ಚಿತ್ರಗಳನ್ನು ಉತ್ತರ ಪ್ರದೇಶದ ಚಿತ್ರಕಾರರು ಮತ್ತು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ರಚಿಸಿದ್ದಾರೆ.