ತಪಸ್ಸು ಮತ್ತು ಶುದ್ಧಿಯಿಂದ ನಿರ್ಮಾಣವಾಗುವ ಕ್ರಿಯೆಯನ್ನು ಸದ್ಗುರುಗಳು ತ್ರಯಸ್ಥರಾಗಿ ದೂರದಿಂದಲೇ ನೋಡುತ್ತಿರುತ್ತಾರೆ ಮತ್ತು ಅದರಿಂದ ಹೊರಹೊಮ್ಮುವ ಕಲೆಯನ್ನು ಶಿಷ್ಯನು ಸ್ವತಃ ಅನುಭವಿಸುತ್ತಿರುತ್ತಾನೆ. ಸದ್ಗುರುಗಳು ಪ್ರತ್ಯಕ್ಷದಲ್ಲಿ ಕೂರ್ಮದೃಷ್ಟಿಯಿಂದ ಶಿಷ್ಯನನ್ನು ಕಾಪಾಡುತ್ತಿರುತ್ತಾರೆ. ಕೇವಲ ಆಧಾರದ ಕೈಯನ್ನು ನೀಡಿ ಸಾಧನೆಯಿಂದ ನಿರ್ಮಾಣವಾಗುವ ಆಘಾತಗಳನ್ನು ಸ್ವತಃ ಎದುರಿಸುವ ಸಶಕ್ತ ಸಾಮರ್ಥ್ಯವನ್ನು ಶಿಷ್ಯರಲ್ಲಿ ಸದ್ಗುರುಗಳು ನಿರ್ಮಿಸುತ್ತಾರೆ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರಾ)