Varanasi Sidheshwar Temple : ವಾರಣಾಸಿಯ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮುಚ್ಚಿದ್ದ ಸಿದ್ಧೇಶ್ವರ ದೇವಸ್ಥಾನವನ್ನು ಮತ್ತೆ ತೆರೆಯಲಾಯಿತು !

ಮೊದಲಿನಂತೆ ಪೂಜೆ ಪ್ರಾರಂಭ

ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿಯ ಮದನಪುರದ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಅನೇಕ ದಶಕಗಳಿಂದ ಮುಚ್ಚಿದ್ದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಪ್ರವೇಶ ದ್ವಾರವನ್ನು ಇತ್ತೀಚೆಗೆ ತೆರೆಯಲಾಯಿತು. ಈ ದೇವಸ್ಥಾನದ ಒಳಗೆ ಒಂದು ಶಿವಲಿಂಗವಿದೆ. ಈ ದೇವಸ್ಥಾನವನ್ನು ತೆರೆಯಬೇಕೆಂದು ಒತ್ತಾಯಿಸಿ ಸ್ಥಳೀಯ ಹಿಂದೂಗಳು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈಗ ಈ ದೇವಸ್ಥಾನದಲ್ಲಿ ಪೂಜೆ ಪ್ರಾರಂಭಿಸಲಾಗಿದೆ. 1992 ರಲ್ಲಿ ದೇವಸ್ಥಾನದ ಹತ್ತಿರವಿದ್ದ ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ಮುಸ್ಲಿಂ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು ಎಂದು ಆಡಳಿತ ಹೇಳಿದೆ. ಈ ದೇವಸ್ಥಾನ ಇರುವ ಪ್ರದೇಶದಲ್ಲಿ ನೇಕಾರರ ವಸತಿಯಿದ್ದು, ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಆಗಿದ್ದಾರೆ.