ಮಿತ್ರ ! ಕೇವಲ ಆತ್ಮವೇ ಎಲ್ಲಕ್ಕಿಂತ ಶ್ರೇಷ್ಠ, ಜಡದ್ರವ್ಯವಲ್ಲ. ತನ್ನನ್ನು ದೇಹವೆಂದೇ ತಿಳಿಯುವ ಅಜ್ಞಾನಿಗಳು ಜನರು ‘ನಾವು ದುರ್ಬಲರಾಗಿದ್ದೇವೆ,’, ಎಂದು ಕರುಣೆಯ ಸ್ವರಗಳಲ್ಲಿ ರೋಧಿಸು ತ್ತಿರುತ್ತಾರೆ. ಇಂದು ನಮ್ಮ ದೇಶಕ್ಕೆ ಸಾಹಸ ಮತ್ತು ವೈಜ್ಞಾನಿಕ ಪ್ರತಿಭೆಯ ಆವಶ್ಯಕತೆ ಇದೆ ! ಇಂದು ನಮಗೆ ಅಪರಿಮಿತ ಸಾಹಸ, ಪ್ರಚಂಡ ಶಕ್ತಿಯ ಮತ್ತು ಪ್ರಬಲ ಉತ್ಸಾಹದ ಆವಶ್ಯಕತೆ ಇದೆ ! ಹೆಂಗಳತನ ಮತ್ತು ಅಪೌರುಷತನದಿಂದ ಯಾವುದೇ ಪ್ರಯೋಜನವಿಲ್ಲ. ಯಾರು ಪ್ರತ್ಯಕ್ಷ ಕಾರ್ಯವನ್ನು ಮಾಡುವರೋ ಮತ್ತು ಯಾರ ಹೃದಯ ಸಿಂಹದಂತಿದೆಯೋ, ಲಕ್ಷ್ಮೀ ಅವರ ಹತ್ತಿರ ಹೋಗುತ್ತಾಳೆ. ಹಿಂದಿರುಗಿ ನೋಡಬೇಡಿ, ಮುಂದೆ ಹೆಜ್ಜೆಯನ್ನಿಡಿ, ಮುಂದೆ ಮುಂದೆ ನಡೆ ! ಅನಂತ ಬಲ, ಅನಂತ ಉತ್ಸಾಹ, ಅನಂತ ಧೈರ್ಯ ಮತ್ತು ಅನಂತ ದಿಟ್ಟತನ ಇವುಗಳೇ ನಮಗೆ ಬೇಕಾಗಿವೆ. ಇವುಗಳಿದ್ದರೆ, ಮಾತ್ರ ಮಹಾತ್ಕಾರ್ಯವನ್ನು ಸಾಧಿಸಲು ಸಾಧ್ಯ.
ಬಲವೇ ಏಕೈಕ ಆವಶ್ಯಕ ವಿಷಯವಾಗಿದೆ. ಬಲವೇ ಭವರೋಗದ ಏಕೈಕ ಔಷಧಿಯಾಗಿದೆ. ಶ್ರೀಮಂತರಿಂದ ತುಳಿತಕ್ಕೊಳಗಾದ ಬಡವರಿಗೆ ಬಲವೇ ಏಕೈಕ ಔಷಧಿಯಾಗಿದೆ. ವಿದ್ವಾಂಸರಿಂದ ನುಚ್ಚುನೂರಾಗುವ ಅಜ್ಞಾನಿಗಳಿಗೆ ಬಲವೇ ಏಕೈಕ ಔಷಧಿಯಾಗಿದೆ.
(ಆಧಾರ : ಸ್ವಾಮೀ ವಿವೇಕಾನಂದ ಮ್ಹಣತಾತ’, ರಾಮಕೃಷ್ಣ ಮಠ, ನಾಗಪುರ.)