ಶಿಷ್ಯನ ಸಂದರ್ಭದಲ್ಲಿ ಸದ್ಗುರುಗಳ ಮಹತ್ವ

೧. ಸೃಷ್ಟಿಯ ಮೂಲಕ್ಕೆ ಒಯ್ಯುವ ಜ್ಞಾನವನ್ನು ಶಿಷ್ಯನಿಗೆ ಕೊಡುವ ಸದ್ಗುರುಗಳು !

ಸೃಷ್ಟಿಯಿಂದ ಲಭ್ಯವಾಗುವ ಯಾವುದೇ ಜ್ಞಾನ, ಅದು ಎಷ್ಟೇ ಆಳವಾಗಿದ್ದರೂ ಅಥವಾ ಆಕಾಶದಲ್ಲಿ ಎಷ್ಟೇ ಎತ್ತರಕ್ಕೆ ಹಾರುವಂತಹದ್ದಾಗಿದ್ದರೂ, ಅದು ಸೃಷ್ಟಿಯ ಮೂಲಕ್ಕೆ ಎಂದಿಗೂ ಹೋಗಲು ಸಾಧ್ಯವಿಲ್ಲ. ಅಂತಹ ಮೂಲವನ್ನೇ ಸದ್ಗುರುಗಳು ತಮ್ಮ ಶಿಷ್ಯನಿಗೆ ದೊರಕಿಸಿಕೊಡುತ್ತಾರೆ.

೨. ವಿಚಾರಗಳ ಮೂಲವನ್ನು ಹುಡುಕುವುದರಲ್ಲಿ ದೊರಕುವ ‘ವಸ್ತು ಸ್ವಯಂಭೂ ಸುಖಕರವಾಗಿರುವುದು

ಉಚ್ಚ ವಿಚಾರಗಳು, ಅಂದರೆ ವಿಚಾರಗಳು ಎಲ್ಲಿಂದ ಮತ್ತು ಹೇಗೆ ನಿರ್ಮಾಣ ಆಗುತ್ತವೆ ?

ಅವುಗಳ ಉಗಮ ಮತ್ತು ವಿಸ್ತಾರವನ್ನು ಹುಡುಕಬೇಕು. ಆ ಶೋಧವಾಯಿತೆಂದರೆ ತನ್ನ ಕಡೆಗೆ, ಹಾಗೆಯೇ ಜಗತ್ತಿನ ಕಡೆಗೆ ನೋಡುವ ದೃಷ್ಟಿಯು ಬದಲಾಗುತ್ತದೆ. ವಿಚಾರಗಳ ಮೂಲವನ್ನು ಶೋಧಿಸುವುದರಿಂದ ಯಾವ ‘ವಸ್ತು ದೊರಕುತ್ತದೆಯೋ, ಅದು ಸ್ವಯಂಭೂ ಸುಖಕರವಾಗಿರುತ್ತದೆ.

೩. ಯಾವುದರಿಂದ ನಮ್ಮ ಸಮಾಧಾನ ಮತ್ತು ಸುಖಕ್ಕೆ ಭಂಗ ಬರುವುದಿಲ್ಲವೋ, ಅಂತಹ ಪರಮ ಅಮೂಲ್ಯ ಆಂತರಿಕ ರತ್ನವನ್ನು ಪರಮಾರ್ಥದಲ್ಲಿ ‘ವಸ್ತು ಎಂದು ಕರೆಯಲಾಗಿದೆ.

ಹೊರಗಿನ ವಸ್ತು ಸಿಗಲಿ ಅಥವಾ ಸಿಗದಿರಲಿ, ಆ ವಸ್ತು ದೊರಕಿದ ನಂತರವೂ ಅದರ ಸ್ಥಿತಿ ಹೇಗೇ ಇದ್ದರೂ, ನಮ್ಮ ಸಮಾಧಾನ ಮತ್ತು ಸುಖಕ್ಕೆ ಭಂಗ ಬರುವುದಿಲ್ಲ. ಅಂತಹ ಅಮೂಲ್ಯ ಅಂತರ್‌ವಸ್ತು ವಿಚಾರಗಳ ಮೂಲದಲ್ಲಿ ಹುಡುಕಿದರೆ ಸಿಗುತ್ತದೆ. ಇಂತಹ ಪರಮಮೂಲ್ಯ ವಾಗಿರುವ ಆಂತರಿಕ ರತ್ನವನ್ನು ಪರಮಾರ್ಥದಲ್ಲಿ ‘ವಸ್ತು ಎಂದು ಹೇಳಲಾಗಿದೆ.

– ಸ್ವಾಮಿ ವಿದ್ಯಾನಂದ (ಸೌಜನ್ಯ : ಗ್ರಂಥ ‘ಚಿಂತನಧಾರಾ ಮರಾಠಿ)

ಗುರುಗಳ ಅವಶ್ಯಕತೆ ಏನು ?

ಒಂದು ಅಗ್ನಿನೌಕೆಯು (ಫೈರ್ ಬೋಟ್) ೪ ಗಂಟೆಗಳಲ್ಲಿ ಒಂದು ಸ್ಥಳವನ್ನು ತಲುಪಿದರೆ, ಅದರ ಹಿಂದೆ ಅದಕ್ಕೆ ಹಗ್ಗದಿಂದ ಕಟ್ಟಿದ ಸಾಮಾನ್ಯ ದೋಣಿಯು ೪ ಗಂಟೆಗಳಲ್ಲಿಯೇ ಆ ಸ್ಥಳವನ್ನು ತಲುಪುತ್ತದೆ; ಆದರೆ ಆ ದೋಣಿಯನ್ನು ಅಗ್ನಿನೌಕೆಯಿಂದ ಬೇರ್ಪಡಿಸಿದರೆ ಮತ್ತು ಸ್ವತಂತ್ರವಾಗಿ ಓಡಿಸಿದರೆ, ಅದೇ ಸ್ಥಳಕ್ಕೆ ತಲುಪಲು ಅದಕ್ಕೆ ೧೨ ಗಂಟೆಗಳು ಬೇಕಾಗುತ್ತವೆ. ಆಧ್ಯಾತ್ಮಿಕ ಉನ್ನತಿಯ ಮಾರ್ಗಯಲ್ಲಿ ನಾವು ಸ್ವತಂತ್ರವಾಗಿ ಪ್ರಯತ್ನಿಸತೊಡಗಿದರೆ, ನಮ್ಮಲ್ಲಿರುವ ದೋಷಗಳು ಮತ್ತು ತಪ್ಪುಗಳಿಂದಾಗಿ ನಮ್ಮ ಉನ್ನತಿಯಾಗಲು ಬಹಳ ಸಮಯ ಬೇಕಾಗುತ್ತದೆ; ಆದರೆ ಯೋಗ್ಯ ಗುರುಗಳ ಮಾರ್ಗದರ್ಶನದಿಂದ ೧೨ ಗಂಟೆಗಳ ಮಾರ್ಗವನ್ನು ಕೇವಲ ೪ ಗಂಟೆಗಳಲ್ಲಿ ಕ್ರಮಿಸಬಹುದು.

ಸ್ವಲ್ಪದರಲ್ಲಿ ‘ಮಹಾಜನೋ ಯೇನ ಗತಃ ಸ ಪಂಥಾಃ| (ಅರ್ಥ : ಮಹಾಪುರುಷರು ಹೋದ ಮಾರ್ಗದಲ್ಲಿ ಹೋಗಬೇಕು.) ಈ ನ್ಯಾಯದಿಂದ ಗುರುಗಳ ಬಳಿಗೆ ಹೋಗಬೇಕು.

(ಆಧಾರ : ಮನೋರಂಜಕ ಗ್ರಂಥ ಪ್ರಸಾರಕ ಮಂಡಳಿ)

ಸಮಾಧಾನ ಯಾವಾಗ ಸಿಗುತ್ತದೆ ?

ನಾಮಸ್ಮರಣೆಯಿಂದ ಪುಣ್ಯದೇಹವು ರೂಪುಗೊಳ್ಳುತ್ತದೆ. ಆಂತರ್ಯದಲ್ಲಿ ನಾಮವಿದ್ದರೆ, ಅಲ್ಲಿ ಭಗವಂತನಿಗೆ ಬರಬೇಕಾಗುವುದರಿಂದ ಅವನ ದೇಹದಲ್ಲಿ ಸತ್ತ್ವಗುಣ ಹೆಚ್ಚಾಗುತ್ತದೆ ಮತ್ತು ಅವನು ಪುಣ್ಯವಂತನಾಗುತ್ತಾನೆ. ದೇಹವನ್ನು ಪ್ರಾರಬ್ಧದ ಮೇಲೆ ಬಿಟ್ಟು ಮತ್ತು ನಾವು ಅದರಿಂದ ಬೇರೆಯಾಗಿದ್ದು ಏನು ಘಟಿಸುತ್ತದೆಯೋ ಅದರಲ್ಲಿ ಆನಂದದಿಂದಿರಬೇಕು. ‘ಭೋಗಗಳು ಪ್ರಾರಬ್ಧದಿಂದ ಬರುತ್ತವೆ, ಎಂದು ಹೇಳುವುದಕ್ಕಿಂತ ಅದು ಭಗವಂತನ ಇಚ್ಛೆಯಿಂದ ಬರುತ್ತವೆ, ಎಂದು ಹೇಳಿದರೆ, ಸಮಾಧಾನ ಸಿಗುತ್ತದೆ. ಭಗವಂತನನ್ನು ಸ್ಮರಿಸಿ ಕೆಲಸಗಳನ್ನು ಮಾಡುವಾಗ ಯಾವುದು ಸರಿಯೆನಿಸುತ್ತದೆಯೋ ಅದನ್ನು ಅವನ ಇಚ್ಛೆಯೇ ಇದೆ, ಎಂದು ತಿಳಿದು ಕೆಲಸಗಳನ್ನು ಮಾಡಬೇಕು. ಹೀಗೆ ಮಾಡಿದಾಗ ಅವನಿಗೆ ಸಮಾಧಾನ ಸಿಗಲೇ ಬೇಕು.

– ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು