|
ಪ್ರಯಾಗರಾಜ, ಜನವರಿ 10 (ಸುದ್ದಿ.) – ಮಹಾಕುಂಭಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಹಾಕುಂಭಕ್ಕೆ 40 ರಿಂದ 50 ಕೋಟಿ ಜನರು ಭೇಟಿ ನೀಡುವ ಸಾಧ್ಯತೆಯಿದೆ. ಅವರನ್ನು ಸ್ವಾಗತಿಸಲು ‘ಅತಿಥಿ ದೇವೋ ಭವ’ ಎಂಬ ಮನೋಭಾವದಿಂದ ಅಗತ್ಯವಿರುವ ಎಲ್ಲವನ್ನೂ ನಾವು ಮಾಡಲು ಪ್ರಯತ್ನಿಸುತ್ತಿದ್ದೇವೆ’, ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರು ಇಲ್ಲಿ ‘ಸನಾತನ ಪ್ರಭಾತ’ ಜೊತೆ ಮಾತನಾಡುತ್ತಾ ಹೇಳಿದರು. ಅವರು ಇಸ್ಕಾನಗೆ ಸಂಬಂಧಿಸಿದ ‘ಅಕ್ಷಯ ಪಾತ್ರ ಫೌಂಡೇಶನ್’ನ ಮಹಾಕುಂಭ ಅನ್ನದಾನ ಸೇವೆಯನ್ನು ಉದ್ಘಾಟಿಸಲು ಕುಂಭನಗರಿಯ ಪ್ರಯಾಗ್‌ರಾಜ್ ಸೆಕ್ಟರ್ 6 ರಲ್ಲಿರುವ ಫೌಂಡೇಶನ್‌ನ ಅಡುಗೆ ಮನೆಗೆ ಬಂದಿದ್ದರು. ‘ಅಕ್ಷಯ ಪಾತ್ರ ಫೌಂಡೇಶನ’ದ ಈ ಅಡುಗೆಮನೆ ಮತ್ತು ಇತರ ಅಡುಗೆಮನೆಗಳ ಮೂಲಕ ಪ್ರತಿದಿನ ಒಟ್ಟು 30 ಸಾವಿರ ಭಕ್ತರಿಗೆ ಮಹಾಪ್ರಸಾದವನ್ನು ನೀಡಲಾಗುವುದು.
ಅಕ್ಷಯ ಪಾತ್ರ ಫೌಂಡೇಶನ್ ನ ರಾಷ್ಟ್ರೀಯ ಅಧ್ಯಕ್ಷ ಭರತರ್ಷಭ ದಾಸ ಅವರು ಈ ಸೇವೆಯ ಬಗ್ಗೆ ಮಾತನಾಡುತ್ತಾ, ಕುಂಭಮೇಳದ ಸಂಪೂರ್ಣ ಕಾಲಾವಧಿಯಲ್ಲಿ ಕನಿಷ್ಠ 10 ರಿಂದ 15 ಲಕ್ಷ ಜನರಿಗೆ ಅನ್ನದಾನ ನೀಡಲು ನಾವು ಸಂಕಲ್ಪ ಮಾಡಿದ್ದೇವೆ ಇದಕ್ಕಾಗಿ, ವಿವಿಧ ಪ್ರಮುಖ ದಾನಿಗಳು ನಮಗೆ ತಮ್ಮ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ’, ಎಂದು ಹೇಳಿದರು.