17 ದಿನಗಳ ಕಾಲ ಸನ್ಯಾಸಿಯಂತೆ ಜೀವನ ನಡೆಸುವರು

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ವಿಶ್ವವಿಖ್ಯಾತ ‘ಆಪಲ್’ನ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್, ಹಿಂದೂ ಧರ್ಮದ ಸಂಪ್ರದಾಯಗಳಿಂದ ಆಕರ್ಷಿತರಾಗಿ ಮಹಾಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಅವರು ಸುಮಾರು 17 ದಿನಗಳ ಕಾಲ ನಿರಂಜನಿ ಅಖಾಡದಲ್ಲಿ ತಂಗಲಿದ್ದಾರೆ. ಅವರು ಜನವರಿ 13 ರಂದು ಇಲ್ಲಿಗೆ ಆಗಮಿಸಲಿದ್ದು, ಜನವರಿ 29 ರವರೆಗೆ ಮಹಾಕುಂಭ ಸ್ಥಳದಲ್ಲಿಯೇ ಇರಲಿದ್ದಾರೆ. ಸ್ಟೀವ್ ಜಾಬ್ಸ್ ಹಿಂದೂ ಧರ್ಮ ಮತ್ತು ಬೌದ್ಧ ಧರ್ಮಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಅದೇ ಮಾರ್ಗವನ್ನು ಅನುಸರಿಸಿದ್ದಾರೆ. ಲಾರೆನ್ ಪೊವೆಲ್ ಜಾಬ್ಸ್ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ವಾಸಿಸುತ್ತಿದ್ದಾರೆ.
1. ಲಾರೆನ್ ಪೊವೆಲ್ ಜಾಬ್ಸ್ ‘ಎಮರ್ಸನ್ ಕಲೆಕ್ಟಿವ್’ನ ಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿದ್ದಾರೆ. ಅವರು ವಿಶ್ವಪ್ರಸಿದ್ಧ ಆಪಲ್ ಕಂಪನಿಯ ಮಾಲೀಕರಲ್ಲಿ ಒಬ್ಬರಾಗಿದ್ದಾರೆ.
2. ಲಾರೆನ್ ಪೊವೆಲ್ ಜಾಬ್ಸ್ ಕಲ್ಪವಾಸ್‌ನಲ್ಲಿ ತಂಗಲಿದ್ದಾರೆ. ಇದು ಹಿಂದೂ ಸಂಪ್ರದಾಯದಲ್ಲಿ ಒಂದು ಪ್ರಾಚೀನ ಆಚರಣೆಯಾಗಿದ್ದು, ಇದನ್ನು ಪುಷ್ಯ ಹುಣ್ಣಿಮೆಯಿಂದ ಮಾಘ ಪೂರ್ಣಿಮೆಯವರೆಗೆ ‘ಕಲ್ಪವಾಸಿ’ ಎಂದು ಕರೆಯಲ್ಪಡುವ ಭಕ್ತರು ಆಚರಿಸುತ್ತಾರೆ. ಈ ಅವಧಿಯಲ್ಲಿ, ಕಲ್ಪದ ಜನರು ಪ್ರತಿದಿನ ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ. ಕಲ್ಪವಾಸದ ಅವಧಿಯಲ್ಲಿ, ಈ ಜನರು ಭಿಕ್ಷುಕರಂತೆ ಸರಳ ಮತ್ತು ಕಠಿಣ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯತ್ತ ಗಮನಹರಿಸುತ್ತಾರೆ.
ಸಂಪಾದಕೀಯ ನಿಲುವುವಿದೇಶಿಯರು ಹಿಂದೂ ಧರ್ಮದ ಸಂಪ್ರದಾಯಗಳು ಮತ್ತು ಉತ್ಸವಗಳಲ್ಲಿ ಆಸಕ್ತಿ ತೋರಿಸುತ್ತಾರೆ; ಆದರೆ, ಭಾರತದಲ್ಲಿ ಜನ್ಮ ಹಿಂದೂಗಳು ಹಿಂದೂ ಧರ್ಮವನ್ನು ಟೀಕಿಸುವುದು ಖೇದಕರವಾಗಿದೆ ! |